'ಒನ್ ಕಟ್ ಟು ಕಟ್' ದಾನಿಶ್ ಸೇಠ್ 'ಸೋಲ್ಡ್' ಔಟ್ : ಐಪಿಎಲ್ ಹರಾಜಿನಲ್ಲಿ ಅಲ್ಲ!

ಸಿನಿಮಾ, ಕ್ರಿಕೆಟ್ ಹಾಗೂ ಸೋಶಿಯಲ್ ಮೀಡಿಯಾ ಮೂರೂ ಕ್ಷೇತ್ರದಲ್ಲಿ ದಾನಿಶ್ ಸೇಠ್ (Danish Sait) ಚಿರಪರಿಚಿತ. ರಕ್ಷಿತ್ ಶೆಟ್ಟಿ ನಿರ್ಮಿಸಿದ್ದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' (Humble Politician Nograj) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು. ಆದರೆ ದಾನಿಶ್ ಸೇಠ್ ಸಿನಿಮಾಗೆ ಬರುವುದಕ್ಕೂ ಮುನ್ನ ಆರ್‌ಸಿಬಿ ತಂಡದೊಂದಿಗೆ ಗುರುತಿಸಿಕೊಂಡಿದ್ದರು. ಇದರ ಜೊತೆ ಸೋಶಿಯಲ್ ಮೀಡಿಯಾದಲ್ಲೂ ತನ್ನದ ಸ್ಟೈಲ್‌ನಲ್ಲಿ ಕಾಮಿಡಿ ವಿಡಿಯೋ ಮಾಡುತ್ತಾ ಜನಪ್ರಿಯರಾಗಿದ್ದಾರೆ.

ದಾನಿಶ್ ಸೇಠ್ ಈಗ ಒಟಿಟಿಯಲ್ಲೂ ಫೇಮಸ್ ಆಗಿದ್ದಾರೆ. ಇವರು ನಟಿಸಿದ ಸಿನಿಮಾಗಳು ಅಮೆಜಾನ್ ಪ್ರೈಂ ಸೇರಿದಂತೆ ಹಲವು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಿವೆ. ಸಿನಿಮಾ ಸೆಟ್ಟೇರಿದಾಗಿನಿಂದಲೇ ಸೌಂಡ್ ಮಾಡುತ್ತಿದ್ದ ದಾನಿಶ್ ಸೇಠ್ ಈಗ ಸದ್ದಿಲ್ಲದೆ ಸಿನಿಮಾವೊಂದನ್ನು ಮುಗಿಸಿದ್ದಾರೆ. ಆ ಸಿನಿಮಾ ಈಗ ರಿಲೀಸ್ ಕೂಡ ಆಗುತ್ತಿದೆ. ಸ್ಯಾಂಡಲ್‌ವುಡ್‌ ಮಂದಿ ದಾನಿಶ್ ಸೇಠ್ 'ಸೋಲ್ಡ್' ಆಗಿದ್ದಾರೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ.

ದಾನಿಶ್ ಸೇಠ್ 'ಸೋಲ್ಡ್' ಔಟ್

ದಾನಿಶ್ ಸೇಠ್ 'ಸೋಲ್ಡ್' ಔಟ್

ಹೌದು, ದಾನಿಶ್ ಸೇಠ್ ಇದೇ ದೇಶಕ್ಕೆ ಚಿರಪರಿಚಿತ. ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ತಂಡದ ಆಟಗಾರರನ್ನು ವಿಭಿನ್ನವಾಗಿ ಸಂದರ್ಶನ ಮಾಡುವ ದಾನಿಶ್ ಸೇಠ್ ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿಚಿತ. ಈಗ ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ದಾನಿಶ್ ಸೇಠ್ ಅಭಿನಯದ ಹೊಚ್ಚ ಹೊಸ ಸಿನಿಮಾ 'ಸೋಲ್ಡ್' ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಮುಂಬರುವ ಮಾರ್ಚ್ 04ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ಖಾಕಿ ತೊಟ್ಟ ದಾನಿಶ್ ಸೇಠ್

ಖಾಕಿ ತೊಟ್ಟ ದಾನಿಶ್ ಸೇಠ್

ದಾನಿಶ್ ಸೇಠ್ ಹೊಸ ಸಿನಿಮಾ ಸೋಲ್ಡ್‌ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ದಾನಿಶ್ ಸೇಠ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾದಲ್ಲಿ ರಾಜಕಾರಣಿಯಾಗಿದ್ದ ದಾನಿಶ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮಾನವ ಕಳ್ಳ ಸಾಗಾಣಿಕೆಯ ಕುರಿತಾದ ಚಿತ್ರ. ಇಂತಹ ಕ್ರೈಂ ಸಿನಿಮಾಗೆ ಥ್ರಿಲ್ಲರ್‌ ಟಚ್ ಕೊಟ್ಟು ಸಿನಿಮಾ ಮಾಡಲಾಗಿದ್ದು, ವಿಭಿನ್ನವಾಗಿ ಸಿನಿಮಾವನ್ನು ಪ್ರೆಸೆಂಟ್ ಮಾಡಲಾಗಿದೆ.

'ಸೋಲ್ಡ್‌'ಗೆ ಮಹಿಳಾ ನಿರ್ದೇಶಕಿ

'ಸೋಲ್ಡ್‌'ಗೆ ಮಹಿಳಾ ನಿರ್ದೇಶಕಿ

ದಾನಿಶ್ ಸೇಠ್ ನಟಿಸುತ್ತಿರುವ 'ಸೋಲ್ಡ್' ಸಿನಿಮಾವನ್ನು ನಿರ್ದೇಶಿಸಿದ್ದು ಪ್ರೇರಣಾ ಅಗರ್‌ವಾಲ್. ದಾನಿಶ್ ಸೇಠ್ ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಿದ್ದಾರೆ. ಈ ಸಿನಿಮಾ ಮೂಲಕ ಮತ್ತೊಬ್ಬ ಮಹಿಳಾ ನಿರ್ದೇಶಕಿ ಪ್ರೇರಣಾ ಅಗರ್‌ವಾಲ್ ಕನ್ನಡ ಚಿತ್ರರಂಗಕ್ಕೆ ಬಂದಂತಾಗಿದೆ. 'ಸೋಲ್ಡ್' ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಎನ್ನುವ ನಂಬಿಕೆಯಲ್ಲಿದ್ದಾರೆ.

ಕಾವ್ಯ ಶೆಟ್ಟಿ ನಾಯಕಿ

ಕಾವ್ಯ ಶೆಟ್ಟಿ ನಾಯಕಿ

ದಾನಿಶ್ ಸೇಠ್‌ಗೆ ನಾಯಕಿಯಾಗಿ ಕಾವ್ಯಾ ಶೆಟ್ಟಿ ನಟಿಸಿದ್ದಾರೆ. ಇಲ್ಲಿ ಕಾವ್ಯಾ ಶೆಟ್ಟಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಸ್ಪೆನ್ಸ್, ಥ್ರಿಲ್ಲರ್ ಆಗಿರುವುದರಿಂದ ಬಹುತೇಕ ಡಾರ್ಕ್ ಶೇಡ್‌ಗಳಿಯೇ ಇಡೀ ಸಿನಿಮಾ ಸಾಗಲಿದೆ. ಈಗಾಗಲೇ ಸಿನಿಮಾ ಟ್ರೈಲರ್ ಗಮನ ಸೆಳೆಯುತ್ತಿದೆ. ಅಂದ್ಹಾಗೆ ಒಂದು ತಿಂಗಳ ಅಂತರದಲ್ಲಿ ದಾನಿಶ್ ಸೇಠ್ ಅಭಿನಯದ ಎರಡು ಸಿನಿಮಾಗಳು ರಿಲೀಸ್ ಆದಂತಾಗುತ್ತೆ. ಕೆಲವು ದಿನಗಳ ಹಿಂದಷ್ಟೆ ದಾನಿಶ್ ನಟನೆಯ 'ಒನ್ ಕಟ್ ಟು ಕಟ್' ಸಿನಿಮಾ ಬಿಡುಗಡೆಯಾಗಿದೆ.

More from Filmibeat

English summary
Humble Politician Nograj fame Danish Sait plays police officer role in Sold Kannada movie. Sold movie is going to release in March 04th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X