"ಬೇರೆ ದಾರಿಯೇ ಇಲ್ಲದೆ, ದು:ಖದ ಜೊತೆ ಬದುಕುವುದನ್ನು ಕಲಿತಿದ್ದೇನೆ"- ವೈಶಾಕ್ ನಿಧನದ ಬಳಿಕ ಕೃಷಿ ತಾಪಂಡ ಪೋಸ್ಟ್
ನಟಿ ಕೃಷಿ ತಾಪಂಡ ಸಮಯದ ಯಾಕೋ ಸರಿಯಿದ್ದಂತೆ ಕಾಣಿಸುತ್ತಿಲ್ಲ. ಒಂದರ ಹಿಂದೊಂದು ವಿವಾದ, ಕಳಂಕ ಇವರನ್ನು ಆವರಿಸಿಕೊಳ್ಳುತ್ತಲೇ ಇದೆ. ಕೆಲವು ತಿಂಗಳ ಹಿಂದಷ್ಟೇ ಉದ್ಯಮಿಯೊಂದಿಗಿನ ವೈಮನಸ್ಸು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು. ಆ ವಿವಾದ ಇನ್ನೇನು ಸೈಲೆಂಟ್ ಆಯ್ತು ಅನ್ನೋವಾಗಲೇ ಅವರ ಗೆಳೆಯ ವೈಶಾಕ್ ಇತ್ತೀಚೆಗೆ ಅವರ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮ*ಹತ್ಯೆಗೆ ಶರಣಾಗಿದ್ದರು.
ಆಪ್ತ ಗೆಳೆಯ ವೈಶಾಕ್ ಅಗಲಿದ ಘಳಿಗೆಯಿಂದ ನಟಿ ಕೃಷಿ ತಾಪಂಡ ತೀವ್ರ ದು:ಖದಲ್ಲಿ ಇದ್ದಾರೆ. ವೈಶಾಕ್ ಆತ್ಮ*ಹತ್ಯೆಗೆ ಶರಣಾದ ಬಳಿಕ ಕೃಷಿ ತಾಪಂಡ ಭಾವುಕರಾಗಿ ಪೋಸ್ಟ್ ಹಾಕಿದ್ದರು. ಆಗ ಕೂಡ ಭಾವುಕರಾಗಿದ್ದ ಕೃಷಿಗೆ ಗೆಳೆಯ ವೈಶಾಕ್‌ರನ್ನು ಮರೆಯುವುದಕ್ಕೆ ಕಷ್ಟ ಪಡುತ್ತಿದ್ದಾರೆ ಎನಿಸುತ್ತಿದೆ. ಈಗ ಮತ್ತೊಂದು ಭಾವನಾತ್ಮಕ ಪೋಸ್ಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

English summary
I learning live with sadness said actress Krishi Thapanda after her friend Vaishak demise.


Click it and Unblock the Notifications