ಎಲ್ಲವೂ ಸರಿಯಾಗಿದ್ದರೆ ಇಂದು ನಡೆಯುತ್ತಿತ್ತು ಡಿ ಬಾಸ್ ಅಭಿಮಾನಿಗಳ 'ರಾಬರ್ಟ್' ಹಬ್ಬ!
ಅಂದುಕೊಂಡಂತೆ ಇದ್ದಿದ್ದರೆ ಇಂದು ಡಿ ಬಾಸ್ ಅಭಿಮಾನಿಗಳು ಹಬ್ಬ ಮಾಡುತ್ತಿದ್ದರು. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಲ್ಲಿ ಈ ವೇಳೆಗೆ ಸಂಭ್ರಮವೋ ಸಂಭ್ರಮ ಇರುತ್ತಿತ್ತು. ಎಲ್ಲೆಲ್ಲೂ ಪಟಾಕಿ, ತಮಟೆ ಸದ್ದು ಕೇಳಿಬರುತ್ತಿತ್ತು. ಚಿತ್ರಮಂದಿರದ ಎದುರು ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ದಂಡು ನೆರೆದಿರುತ್ತಿತ್ತು. ಎಲ್ಲರ ಬಾಯಲ್ಲೂ ಬರುತ್ತಿದ್ದ ಜೈ ಡಿ ಬಾಸ್ ಘೋಷಣೆ ಮುಗಿಲು ಮುಟ್ಟುತ್ತಿತ್ತು. ಥಿಯೇಟರ್‌ನಲ್ಲಿ ಶಿಳ್ಳೆ, ನೃತ್ಯ ಉತ್ಸವ ನಡೆಯುತ್ತಿತ್ತು.
ನಿಜ. ಪೂರ್ವ ನಿಗದಿಯಂತೆ ಇಂದು (ಏ. 9) ರಂದು ರಾಬರ್ಟ್ ಚಿತ್ರ ಬಿಡುಗಡೆಯಾಗಬೇಕಿತ್ತು. ನೂರಾರು ಚಿತ್ರಮಂದಿರಗಳಲ್ಲಿ ರಾಬರ್ಟ್‌ನದ್ದೇ ಹಾವಳಿ ಇರುತ್ತಿತ್ತು. ಟೀಸರ್ ಮತ್ತು ಹಾಡುಗಳ ಮೂಲಕ ಭರ್ಜರಿ ಹವಾ ಸೃಷ್ಟಿಸಿದ್ದ ಬಹುನಿರೀಕ್ಷಿತ ರಾಬರ್ಟ್ ವೀಕ್ಷಿಸಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಬ್ಲಾಕ್‌ಗಳಲ್ಲಿ ದುಪ್ಪಟ್ಟು, ಮೂರು ಪಟ್ಟು ಹಣ ತೆತ್ತು ಟಿಕೆಟ್ ಪಡೆದು ಸಿನಿಮಾ ವೀಕ್ಷಿಸುತ್ತಿದ್ದರು. ಆದರೆ, ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ. ಮುಂದೆ ಓದಿ...

ಬಾಕ್ಸಾಫೀಸ್ ಚಿಂದಿಯಾಗುತ್ತಿತ್ತು
ಏಪ್ರಿಲ್ 9ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ರಾಬರ್ಟ್ ಇಂದು ಬಿಡುಗಡೆಯಾಗಿದ್ದರೆ ಕನ್ನಡ ಚಿತ್ರರಂಗದಲ್ಲಿ ಸುಂಟರಗಾಳಿ ಎಬ್ಬಿಸುವುದು ಖಚಿತವಾಗಿತ್ತು. ಬಾಕ್ಸ್‌ಆಫೀಸಲ್ಲಿ ರಾಬರ್ಟ್ ಹಾವಳಿ ನಡೆಯುವ ಸೂಚನೆ ದೊರಕಿತ್ತು.

ಸಿನಿಮಾ ರಿಲೀಸ್ ಆಗದ್ದಕ್ಕೆ ನಿರಾಶೆ
ರಾಬರ್ಟ್ ವಿವಿಧ ಕಾರಣಗಳಿಂದ ದರ್ಶನ್ ಅಭಿಮಾನಿಗಳಲ್ಲಿ ಹುಮ್ಮಸ್ಸು ಮೂಡಿಸಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಘೋಷಿಸಿರುವ ಲಾಕ್‌ಡೌನ್ ಕಾರಣದಿಂದ ಸಿನಿಮಾ ಸದ್ಯಕ್ಕೆ ಬಿಡುಗಡೆಯಾಗುತ್ತಿಲ್ಲ. ಇದರಿಂದ ದರ್ಶನ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಇಂಟರ್‌ನೆಟ್‌ನಲ್ಲಿ ರಾಬರ್ಟ್ ಹವಾ
ಹಾಗೆಂದು ಅಭಿಮಾನಿಗಳ ಉತ್ಸಾಹ ಕಡಿಮೆಯಾಗಿಲ್ಲ. ಅವರ ನಿರೀಕ್ಷೆಗಳು ಕರಗದಂತೆ ರಾಬರ್ಟ್ ಚಿತ್ರತಂಡ ಒಂದೊಂದೇ ಉಡುಗೊರೆಗಳನ್ನು ನೀಡುತ್ತಿದೆ. ಕೆಲವು ದಿನಗಳ ಅಂತರದಲ್ಲಿ ಒಂದೊಂದೇ ಹಾಡನ್ನು ಬಿಡುಗಡೆ ಮಾಡುವ ಮೂಲಕ ರಾಬರ್ಟ್ ಹವಾವನ್ನು ಇಂಟರ್‌ನೆಟ್‌ನಲ್ಲಿ ಜೋರಾಗಿಯೇ ಇರಿಸಿದೆ.
ಫಸ್ಟ್ ಶೋ ನೋಡಿರ್ತಿದ್ವಿ
ಕೋರೋನ ಎಫೆಕ್ಟ್ ಏನೂ ಇಲ್ದೆ ಇದ್ದಿದ್ರೆ ರಾಬರ್ಟ್ ಫಸ್ಟ್ ಶೋ ನೋಡ್ಕೊಂಡು ಬರ್ತಾ ಇದ್ವಿ... ಕರ್ನಾಟಕ ಫುಲ್ ರಾಬರ್ಟ್ ಹವಾ ಇರ್ತಾ ಇತ್ತು ಇವತ್ತು. ಬಾಸ್ ಫ್ಯಾನ್ಸ್ ಸೆಲೆಬ್ರೇಶನ್ ಬೇರೆ ಲೆವೆಲ್ ನಲ್ಲಿ ಇರ್ತಾ ಇತ್ತು- ಭರತ್ ಎಂ ಕಿರಣ್
ಸ್ಪೆಷಲ್ ಗಿಫ್ಟ್ ಸಿಗುತ್ತಾ?
ಕೊರೊನಾ ಅಟ್ಟಹಾಸ ಇಲ್ದೆ ಇದ್ದಿದ್ರೆ, ಇಷ್ಟೊತ್ತಿಗೆ ರಾಬರ್ಟ್ ದರ್ಬಾರ್ ಶುರುವಾಗ್ತಿತ್ತು.. ಹೋಗ್ಲಿಬಿಡಿ.. ಆದಷ್ಟು ಬೇಗ ಕೊರೊನಾ ಭೀತಿ ಕಳೆಯಲಿ.. ಬೇಗ ಸಿನಿಮಾ ನೋಡುವಂತಾಗಲಿ.. ನಾಳೆ ಗುಡ್ ಫ್ರೈಡೇ ಸ್ಪೆಷಲ್ಲಾಗಿ ರಾಬರ್ಟ್ ಟೀಂನಿಂದ ಸ್ಪೆಷಲ್ ಗಿಫ್ಟ್ ಸಿಗತ್ತಾ..?- ಬೆಂಗಳೂರು ಹುಡುಗ.


Click it and Unblock the Notifications











