Toxic-IMDb: ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಐಎಂಡಿಬಿಯಲ್ಲಿ ನಂ 1; ಟಾಪ್ 5ನಲ್ಲಿ ಯಾವೆಲ್ಲಾ ಇವೆ?

ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್'. ಎರಡು ಬಾರಿ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿ ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ರಿಲೀಸ್‌ಗೆ ಹೆಚ್ಚು ಕಡಿಮೆ ಇನ್ನೂ ಒಂದೂವರೆ ತಿಂಗಳು ಇರುವಾಗಲೇ ಯಶ್ ಅಂಡ್ ಟೀಮ್ ಭರ್ಜರಿಯಾಗಿ ಪ್ರಚಾರ ಶುರು ಮಾಡಿದ್ದಾರೆ. ಇನ್ನೊಂದು ಕಡೆ ವಿಶ್ವದಾದ್ಯಂತ ಈ ಸಿನಿಮಾ ನೋಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ.

'ಟಾಕ್ಸಿಕ್' ಅಸಲಿ ಪ್ರಚಾರ ಆರಂಭ ಆಗುವುದಕ್ಕೂ ಮುನ್ನವೇ ಕ್ರೇಜ್ ದುಪ್ಪಟ್ಟಾಗಿತ್ತು. ಅದಕ್ಕೆ ಕಾರಣ ಯಶ್ ಸಿನಿಮಾ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. 'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್‌ ಬಸ್ಟರ್ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾವಿದು ಹೀಗಾಗಿ ಸಹಜವಾಗಿಯೇ ಕ್ರೇಜ್ ಇದೆ. ಅಲ್ಲದೇ ಯಶ್ ಸಿನಿಮಾವನ್ನು ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದು, ಇತ್ತೀಚೆಗೆ ವಿದೇಶದಲ್ಲಿಯೂ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ 'ಟಾಕ್ಸಿಕ್' ಬಗ್ಗೆ ಸರ್ಚ್ ಮಾಡುವವರ ಸಂಖ್ಯೆನೂ ಅಷ್ಟೇ ಹೆಚ್ಚಾಗಿದೆ.

IMDb Most anticipated New Indian Movies and Shows Yash Toxic in top spot

ಸಿನಿಮಾ ಹಾಗೂ ಟಿವಿ ಶೋಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ IMDb ಜಾಲತಾಣದಲ್ಲಿ 'ಟಾಕ್ಸಿಕ್'ವನ್ನು ಸರ್ಚ್ ಮಾಡಿದವರ ಸಂಖ್ಯೆನೂ ದೊಡ್ಡದಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಪಟ್ಟಿಯಲ್ಲಿ 'ಟಾಕ್ಸಿಕ್' ಸಿನಿಮಾ ಟಾಪ್‌ನಲ್ಲಿದೆ. IMDb ಬಹು ನಿರೀಕ್ಷಿತ ಸಿನಿಮಾ ಹಾಗೂ ಟಿವಿ ಶೋಗಳ ಪಟ್ಟಿಯನ್ನು ಬಿಡುಗಡೆಗೆ ಮಾಡಿದ್ದು, ಇದರಲ್ಲಿ 'ಟಾಕ್ಸಿಕ್' ಸರಿಯಾಗಿಯೇ ಕಿಕ್ ಕೊಟ್ಟಿದೆ. ಈ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

'ಟಾಕ್ಸಿಕ್' ಟಾಪ್

IMDbಗೆ ಪ್ರತಿ ತಿಂಗಳು ವಿಶ್ವದಾದ್ಯಂತ ಸುಮಾರು 250 ಮಿಲಿಯನ್‌ಗೂ ಅಧಿಕ ವೀಕ್ಷಕರು ವಿಸಿಟ್ ಹಾಕುತ್ತಾರೆ. ಇವರಲ್ಲಿ ಯಾವ ಸಿನಿಮಾದ ಬಗ್ಗೆ ಹೆಚ್ಚು ಮಂದಿ ಹುಡುಕಾಡುತ್ತಾರೋ ಅಂತಹ ಅಂಕಿ-ಅಂಶಗಳನ್ನು ಇಟ್ಟಿಕೊಂಡು ಫಲಿತಾಂಶವನ್ನು ನೀಡುತ್ತೆ. ಸದ್ಯ IMDbಯ ಬಹು ನಿರೀಕ್ಷಿಯ ಸಿನಿಮಾ ಹಾಗೂ ಟಿವಿ ಶೋಗಳ ಪಟ್ಟಿಯಲ್ಲಿ 'ಟಾಕ್ಸಿಕ್' ಶೇ.52.3ರಷ್ಟು ಸರ್ಚ್‌ನೊಂದಿಗೆ ಟಾಪ್‌ನಲ್ಲಿ ಇದೆ.

ಟಾಪ್‌ 5ನಲ್ಲಿ ಏನೇನಿದೆ?

IMDbಯ ಈ ಪಟ್ಟಿಯಲ್ಲಿ ಯಶ್ ನಟಿಸಿದ 'ಟಾಕ್ಸಿಕ್' ಟಾಪ್ ಲಿಸ್ಟ್‌ನಲ್ಲಿ ಇದೆ. ಇದರ ಜೊತೆಗೆ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿ ಇನ್ನೂ ನಾಲ್ಕು ಸಿನಿಮಾಗಳು ಇವೆ. 'ಆವಾರಪನ್ 2' ಶೇ.10.5 ರಷ್ಟು ಸರ್ಚ್ ಆಗಿದ್ದು, 2ನೇ ಸ್ಥಾನದಲ್ಲಿ ಇದೆ. ಶೇ.10.1ರಷ್ಟು ಸರ್ಚ್‌ ಜೊತೆಗೆ 'ಇಂದ್ರಜಾಲ್' ಮೂರನೇ ಸ್ಥಾನದಲ್ಲಿ ಇದೆ. ಶೇ.8.3ರಷ್ಟು ಮಂದಿ 'ಡಿಸಿ' ಬಗ್ಗೆ ಸರ್ಚ್ ಮಾಡಿದ್ದಾರೆ. ಹೀಗಾಗಿ ಇದು 4ನೇ ಸ್ಥಾನದಲ್ಲಿ ಇದೆ. ಶೇ.3.2 ಮಂದಿ 'ಆದರ್ಶ್ ಬಾಲ್ ವಿದ್ಯಾಲಯ' ಬಗ್ಗೆ ಸರ್ಚ್ ಮಾಡಿದ್ದು, ಟಾಪ್ 5ನಲ್ಲಿದೆ.

IMDb Most anticipated New Indian Movies and Shows Yash Toxic in top spot

'ಟಾಕ್ಸಿಕ್' ಸಮೀಪಕ್ಕೂ ಇಲ್ಲ

ಟಾಪ್‌ನಲ್ಲಿರುವ 'ಟಾಕ್ಸಿಕ್‌' ಬಗ್ಗೆ ಶೇ. 52.3 ರಷ್ಟು ಮಂದಿ ಹುಡುಕಾಡಿದ್ದಾರೆ. ಅದೇ 2ನೇ ಸ್ಥಾನದಲ್ಲಿರುವ 'ಆವಾರಪನ್ 2' ಅನ್ನು ಹುಡುಕಾಡಿದವರು ಕೇವಲ 10.5ರಷ್ಟು ಮಂದಿ ಮಾತ್ರ. ಹೀಗಾಗಿ ಉಳಿದ ನಾಲ್ಕು ಸಿನಿಮಾಗಳನ್ನು ಹುಡುಕಾಡಿದ ಜನರನ್ನು ಸಂಖ್ಯೆ 'ಟಾಕ್ಸಿಕ್'ಗೆ ಸಮ ಎಂದು ಹೇಳಬಹುದು. ಹೀಗಾಗಿ 'ಟಾಕ್ಸಿಕ್' ಫೀವರ್ ಜೋರಾಗಿದೆ. ಇನ್ನು ಒಂದೂವರೆ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಈಗಷ್ಟೇ ಪ್ರಚಾರ ಆರಂಭಿಸಿದ್ದು, ಇನ್ನೂ ಕಿಕ್ ಕೊಡಲಿದೆ.

'ಟಾಕ್ಸಿಕ್' ಹೈಲೈಟ್ಸ್

'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಪಾತ್ರಗಳಲ್ಲಿ ನಟಿಸಿದ್ದು, ಅಪ್ಪ ಹಾಗೂ ಮಗನ ರಿವೇಂಜ್ ಸ್ಟೋರಿ ಎಂದು ಖುದ್ದಾಗಿ ಯಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲೇ 60ರ ದಶಕದಲ್ಲಿ ಗೋವಾದ ಬ್ಯಾಕ್‌ ಡ್ರಾಪ್‌ನಲ್ಲಿ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಇದರಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಕ್ರೇಜಿ ಸ್ಟಾರ್‌ಕಾಸ್ಟ್‌ ಕಿಕ್ ಕೊಡೋದು ಗ್ಯಾರಂಟಿ.

English summary
IMDb Most anticipated New Indian Movies and Shows Yash Toxic in top spot.
Read more about: toxic yash imdb
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X