ಭಾರತದ ಬಹು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ 'ಟಾಕ್ಸಿಕ್' ನಂ 1; 'ಧುರಂಧರ್ 2' ಕಥೆಯೇನು?

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' (Toxic) ಬಗ್ಗೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2' (Dhurandhar: The Revenge) ಕೂಡ ಮಾರ್ಚ್ 19ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ ಸಿನಿ ಪ್ರೇಮಿಗಳ ಕಣ್ಣು ಈ ಎರಡು ಸಿನಿಮಾಗಳ ಮೇಲೆ ಬಿದ್ದಿದೆ. ಬಾಕ್ಸಾಫೀಸ್‌ನಲ್ಲಿ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಈ ಎರಡು ಸಿನಿಮಾಗಳಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಬಹುದೆಂಬ ಲೆಕ್ಕಾಚಾರ ಬಹಳ ದಿನಗಳಿಂದಲೇ ನಡೆಯುತ್ತಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿತ್ತು. ಇರೋ ಬರೋ ದಾಖಲೆಗಳನ್ನು ಹೊಡೆದಾಕುತ್ತಾ ಮುಂದೆ ಸಾಗಿತ್ತು. ಅದರಲ್ಲಿ ರಾಕಿ ಭಾಯ್ ನಟನೆಯ 'ಕೆಜಿಎಫ್ 2' ಸಿನಿಮಾ ಕೂಡ ಒಂದು. ವಿಶ್ವದಾದ್ಯಂತ ₹1300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಮೇಲೆ ಸಿನಿಮಾತಂಡ ಕಾನ್ಫಿಡೆನ್ಸ್ ಬಂದಿದೆ. ಹೀಗಾಗಿ 'ಟಾಕ್ಸಿಕ್' ಎದುರು ರಿಲೀಸ್‌ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

IMDb s Most Anticipated Indian Movies and Shows Yash Toxic beat Dhurandhar 2 in No 1 spot

ಹೀಗಾಗಿ ರಿಲೀಸ್‌ಗೂ ಮುನ್ನ ಯಶ್‌ 'ಟಾಕ್ಸಿಕ್' ಹಾಗೂ ರಣ್‌ವೀರ್ 'ಧುರಂಧರ್ 2' ಇವೆರಡರಲ್ಲಿ ಯಾವ ಸಿನಿಮಾ ಕ್ರೇಜ್ ಹೆಚ್ಚಾಗುತ್ತೆ? ಅನ್ನೋದನ್ನು ಕುತೂಹಲದಿಂದ ನೋಡಲಾಗುತ್ತಿದೆ. ಇದೇ ವೇಳೆ IMDb ಈ ವರ್ಷದಲ್ಲಿ ಅತೀ ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಭಾರತೀಯ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಆಗಿದೆ. ಅದರಲ್ಲಿ 'ಟಾಕ್ಸಿಕ್' ನಂ 1 ಸ್ಥಾನದಲ್ಲಿದೆ.

ಎಲ್ಲೆಲ್ಲೂ 'ಟಾಕ್ಸಿಕ್' ಕ್ರೇಜ್

ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಸಿನಿಪ್ರಿಯರಿಗೆ ಕಿಕ್ ಕೊಡುತ್ತಿದೆ. ಇದೂವರೆಗೂ ಸಿನಿಮಾದ ಕ್ಯಾರೆಕ್ಟರ್ ಫಸ್ಟ್ ಲುಕ್ ಬಿಟ್ಟರೆ, ಒಂದು ತುಣುಕು ಹಾಗೂ ಒಂದು ಟೀಸರ್ ರಿಲೀಸ್ ಆಗಿದೆ. ಇಷ್ಟಕ್ಕೆ 'ಟಾಕ್ಸಿಕ್' ದೇಶಾದ್ಯಂತ ಚರ್ಚೆ ಮಾಡುತ್ತಿದೆ. ವಿವಾದಕ್ಕೆ ಸಿಕ್ಕಿಕೊಂಡಿದ್ದು ಕೂಡ ಸಿನಿಮಾಗೆ ಪ್ಲಸ್ ಆಗುತ್ತಿದೆ. ಸದ್ಯ ಬ್ಯುಸಿನೆಸ್ ಬಗ್ಗೆ ಟೀಮ್ ತಲೆ ಕೆಡಿಸಿಕೊಂಡಿದೆ. ವಿತರಕರು ಕೂಡ ಈ ಸಿನಿಮಾ ಖರೀದಿಗೆ ಮುಗಿಬಿದ್ದಿದ್ದಾರೆ.

IMDbಯಲ್ಲಿ ನಂ 1

ಯಶ್ ಸಿನಿಮಾ 'ಟಾಕ್ಸಿಕ್' IMDbಯ ಈ ವರ್ಷದ ಬಹು ನಿರೀಕ್ಷಿತ ಪಟ್ಟಿಯಲ್ಲಿ ಟಾಪ್‌ನಲ್ಲಿದೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಬಿಡುಗಡೆಗೂ ಮುನ್ನವೇ ಕಾದಾಡಬಹುದೆಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ, IMDb ರಿಲೀಸ್ ಮಾಡಿದ ಪಟ್ಟಿಯಲ್ಲಿ 'ಟಾಕ್ಸಿಕ್' ಶೇ.40.6 ರಷ್ಟು ಅಂಕಗಳೊಂದಿಗೆ ಟಾಪ್‌ನಲ್ಲಿದೆ. ಈ ಮೂಲಕ ಭಾರತದಲ್ಲಿ 'ಟಾಕ್ಸಿಕ್' ಬಗ್ಗೆ ಅತೀ ಹೆಚ್ಚು ಮಂದಿ 'ಟಾಕ್ಸಿಕ್' ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ.

2ನೇ ಸ್ಥಾನದಲ್ಲಿ 'ಧುರಂಧರ್ 2'

ಇನ್ನು 'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್ ದಾಖಲೆಯನ್ನು ಮುರಿದು ಕಾನ್ಫಿಡೆನ್ಸ್‌ನಲ್ಲಿರೋ 'ಧುರಂಧರ್' ತಂಡಕ್ಕೆ ಆಘಾತ ಆಗಿದೆ. IMDb ರಿಲೀಸ್ ಮಾಡಿರುವ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ 'ಧುರಂಧರ್ 2' ಎರಡನೇ ಸ್ಥಾನದಲ್ಲಿದೆ. ಅದೂ ಶೇ.22.6 ರಷ್ಟು ಮಂದಿ ಈ ಸಿನಿಮಾ ನೋಡುವುದಕ್ಕೆ ಆಸಕ್ತಿ ಹೊಂದಿದ್ದಾರೆ.

IMDb s Most Anticipated Indian Movies and Shows Yash Toxic beat Dhurandhar 2 in No 1 spot

'ಟಾಕ್ಸಿಕ್‌'ಗೂ 'ಧುರಂಧರ್ 2'ಗೂ ಭಾರೀ ಅಂತರ

IMDb ಪಟ್ಟಿಯಲ್ಲಿ ಯಶ್ 'ಟಾಕ್ಸಿಕ್' ಹಾಗೂ ರಣ್‌ವೀರ್ ಸಿಂಗ್ 'ಧುರಂಧರ್ 2' ನಡುವೆ ಭಾರೀ ಫೈಟ್ ಇರಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇಲ್ಲಿವರೆಗೂ ಕ್ರೇಜ್ ವಿಚಾರದಲ್ಲಿ 'ಟಾಕ್ಸಿಕ್' ಮುಂದಿದೆ. 'ಧುರಂಧರ್ 2' ಸಿನಿಮಾದ ಜನಪ್ರಿಯತೆಗಿಂತ 'ಟಾಕ್ಸಿಕ್' ಪಾಪುಲಾರಿಟಿ ಹೆಚ್ಚು ಕಡಿಮೆ ಶೇ.45ರಷ್ಟು ಹೆಚ್ಚಿದೆ. ಇನ್ನು ಇತ್ತೀಚೆಗೆ ರಿಲೀಸ್ ಆಗಿದ್ದ 'ಧುರಂಧರ್ 2' ಟೀಸರ್ ಜನರನ್ನು ಮೆಚ್ಚಿಸುವಲ್ಲಿ ಸೋತಿದೆ. ಇನ್ನೇನಿದ್ದರೂ ಟ್ರೈಲರ್ ರಿಲೀಸ್ ಬಳಿಕ ಎರಡು ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದನ್ನು ನೋಡಬೇಕಿದೆ.

ಟಾಪ್‌ 5 ಸ್ಥಾನದಲ್ಲಿರುವ ಸಿನಿಮಾಗಳು

ಇನ್ನು IMDb ಪಟ್ಟಿಯ ಮೊದಲ ಎರಡು ಸ್ಥಾನಗಳಲ್ಲಿ ಯಶ್ 'ಟಾಕ್ಸಿಕ್' ಹಾಗೂ ರಣ್‌ವೀರ್‌ ಸಿಂಗ್ 'ಧುರಂಧರ್ 2' ಇದೆ. ಇನ್ನು ಮೂರು ಸ್ಥಾನಗಳಲ್ಲಿರುವ ಸಿನಿಮಾಗಳ ಲಿಸ್ಟ್ ಹೀಗಿದೆ.

IMDb ಬಹುನಿರೀಕ್ಷಿತ ಸಿನಿಮಾಗಳು (Top 5)

ಟಾಕ್ಸಿಕ್ (Toxic) 40.6%
ಧುರಂಧರ್ 2 (Dhurandhar: The Revenge) 22.6%
ಅಸ್ಸಿ (Assi) 8.4%
ದಿ ಪ್ಯಾರಡೈಸ್ (The Paradise) 6.3%
ಲಿಕ್ (LIK: Love Insurance Kompany) 4.9%

More from Filmibeat

English summary
IMDb’s Most Anticipated Indian Movies and Shows Yash Toxic beat Dhurandhar 2 in No 1 spot.
Read more about: yash toxic imdb
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X