ಕನ್ನಡದ ಈ ನಟನ ಮನೆಯಲ್ಲಿತ್ತು ದೆವ್ವ: ಓಪನ್ ಆಗಿದ್ದ ಮನೆಯ ಕಬೋರ್ಡ್‌ನಲ್ಲಿ ಸಿಕ್ಕಿದ್ದೇನು?

ಕೆಲವರು ದೆವ್ವ ಇದೆ ಅಂತಾರೆ. ಇನ್ನು ಕೆಲವರು ದೆವ್ವ ಇರುವುದನ್ನು ನಂಬುವುದಿಲ್ಲ. ಇದೆಲ್ಲ ಕಟ್ಟು ಕಥೆ ಅನ್ನೋರು ಇದ್ದಾರೆ. ಆದರೆ, ಅನುಭವ ಆದವರಿಗೆ ದೆವ್ವ, ಆತ್ಮಗಳ ಬಗ್ಗೆ ನಂಬಿಕೆ. ದೆವ್ವದ ಬಗ್ಗೆ ನಂಬಿಕೆ ಇಟ್ಟುಕೊಂಡವರಿಗೆ ಇಲ್ಲೊಂದು ಇಂಟ್ರೆಸ್ಟಿಂಗ್ ಕಥೆಯಿದೆ. ಬೆಂಗಳೂರಿನ ವೃತ್ತಿಪರ ಘೋಸ್ಟ್ ಹಂಟರ್ ಅಥವಾ ದೆವ್ವಗಳನ್ನು ಬಿಡಿಸುವ ವ್ಯಕ್ತಿ ಇಮ್ರಾನ್ ಪಾಷಾ ಇಂತಹದ್ದೊಂದಿಷ್ಟು ಅನುಭವ ಆಗಿದೆ.

ಬೆಂಗಳೂರಿನಲ್ಲಿ ದಿ ರಿಯಲ್ ಏಷ್ಯನ್ ಪ್ಯಾರನಾರ್ಮಲ್ ಸೊಸೈಟಿ ಅನ್ನುವ ಸಂಸ್ಥೆಯನ್ನು ಕಟ್ಟಿಕೊಂಡಿರುವ ಇಮ್ರಾನ್ ಪಾಷಾ ತಮ್ಮ ಬಿಡುವಿನ ವೇಳೆಯಲ್ಲಿ ದೆವ್ವಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ದೆಹಲಿ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಿ ದೆವ್ವಗಳನ್ನು ಬಿಡಿಸುವ ಕೆಲಸವನ್ನು ಇಮ್ರಾನ್ ಪಾಚಾ ಮಾಡುತ್ತಿದ್ದಾರೆ.

Imran Pasha ghostbuster in Bengaluru once found ghost in Kannada actor Prashanth Siddhi house

ಇತ್ತೀಚೆಗೆ ಇಮ್ರಾನ್ ಪಾಷಾ ದೆವ್ವಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕನ್ನಡದ ನಟನ ಮನೆಯಲ್ಲಿ ದೆವ್ವ ಇತ್ತು. ಅವರ ಮನೆಗೆ ಹೋದಾಗ ತಮ್ಮ ಮೊಬೈಲ್‌ನಲ್ಲಿ ಸೆರೆಯಾಗಿದ್ದಾಗಿ ಫೋಟೋವನ್ನು ಶೇರ್ ಮಾಡಿದ್ದು, ಆ ಸನ್ನಿವೇಶವನ್ನು ಸ್ವಾರಸ್ಯಕರವಾಗಿ ವಿರಿಸಿದ್ದಾರೆ.

ಘೋಸ್ಟ್ ಹಂಟರ್ ಇಮ್ರಾನ್ ಪಾಷಾ ಕನ್ನಡದ ನಟ ಪ್ರಶಾಂತ್ ಸಿದ್ಧಿ ಮನೆಗೆ ಹೋದಾಗ ಏನೆಲ್ಲ ಆಗಿತ್ತು ಅನ್ನುವುದನ್ನು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. "ಆರ್ ಆರ್‌ ನಗರದಲ್ಲಿ ಅವರದ್ದೊಂದು ರೂಮ್ ಇತ್ತು. ಅವರದ್ದೊಂದು ನಾಟಕ ಗ್ರೂಪ್ ಇದೆ. ಆ ಗ್ರೂಪ್ ಅಲ್ಲಿ ಉಳಿದುಕೊಳ್ಳುವುದು, ಪ್ರಾಕ್ಟೀಸ್ ಮಾಡುವುದು ಮಾಡುತ್ತೆ. ಆ ರೂಮ್ ಎಲ್ಲಿದೆ ಅಂದರೆ, ಅದರ ಹಿಂದೆ ಪಾಳು ಬಿದ್ದಿರುವಂತಹ ಹಾಸ್ಪಿಟಲ್ ಇದೆ. ಆ ಹಾಸ್ಪಿಟಲ್ ಹೆಸರನ್ನು ಮರೆತು ಹೋಗಿದ್ದೀನಿ. ಅದಕ್ಕೆ ಅಂಟಿಕೊಂಡು ಇವರ ಬಿಲ್ಡಿಂಗ್ ಇದೆ. ಆ ಬಿಲ್ಡಿಂಗ್‌ನ ಒಂದು ರೂಮ್‌ನಲ್ಲಿ ಇವರು ಇರೋದು. ಒಂದು ಸಿಂಗಲ್ ಬೆಡ್‌ ರೂಮ್ ಮನೆ" ಎಂದು ಪ್ರಶಾಂತ್ ಸಿದ್ಧ ಮನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

Imran Pasha ghostbuster in Bengaluru once found ghost in Kannada actor Prashanth Siddhi house

ರಾಧಿಕಾ ಕುಮಾರಸ್ವಾಮಿ ನಟಿಸುತ್ತಿದ್ದ 'ಬೈರಾದೇವಿ' ಸಿನಿಮಾದ ಚಿತ್ರೀಕರಣದ ವೇಳೆ ಮಹಿಳೆಯೊಬ್ಬರು ಪರಿಯವಾಗಿದ್ದರು. ಅವರು ತಮಗಾಗುತ್ತಿರುವ ಅನುಭವವನ್ನು ಹಂಚಿಕೊಂಡಿದ್ದರು. ಈ ವೇಳೆ ದೆವ್ವವನ್ನು ಹುಡುಕಿ, ಪ್ರಶಾಂತ್ ಸಿದ್ದಿ ಮನೆಗೆ ಹೋದಾಗ ಅಲ್ಲಿ ಏನಾಯ್ತು? ಅನ್ನೋದನ್ನು ಹೇಳಿದ್ದಾರೆ. "ಬೈರಾದೇವಿ ಶೂಟಿಂಗ್ ನಡೆಯುತ್ತಿತ್ತು. ರಾಧಿಕಾ ಕುಮಾರಸ್ವಾಮಿಯವರ ಸಿನಿಮಾ. ಆ ಶೂಟಿಂಗ್‌ನಲ್ಲಿ ಒಬ್ಬರು ಮಹಿಳೆ ಪರಿಚಯ ಆಗಿದ್ದರು. ಈತರ ಸಮಸ್ಯೆಯಿದೆ. ಮನೆಗೆ ಬಂದು ಚೆಕ್ ಮಾಡಿ ಅಂತ ಹೇಳಿದಾಗ, ನಾನು ನಮ್ಮ ಟೀಮ್ ಎಲ್ಲಾ ಹೋಗಿ ಚೆಕ್ ಮಾಡಿದಾಗ ಅಲ್ಲಿ ಸಿಕ್ಕಂತಹ ಫೋಟೋ ಇದು. ಅದು ಪ್ರಶಾಂತ್ ಸಿದ್ಧಯವರ ಮನೆ. ಅಲ್ಲಿ ಅವರ ಕಬೋರ್ಡ್‌ನಲ್ಲಿ ಸಿಕ್ಕಂತಹ ಫೋಟೋ ಇದೆ." ಎಂದು ಆ ಫೋಟೋವನ್ನು ತೋರಿಸಿದ್ದಾರೆ.

ಅಷ್ಟಕ್ಕೂ ಪ್ರಶಾಂತ್ ಸಿದ್ದಿ ಮನೆಯಲ್ಲಿದ್ದ ಆ ಮಹಿಳೆಗೆ ಕನಸಿನಲ್ಲಿ ಏನು ಕಾಡುತ್ತಿತ್ತು ಅನ್ನೋದನ್ನು ಅವರೇ ಹೇಳಿದ್ದಾರೆ ಕೇಳಿ. "ಆ ಲೇಡಿಗೆ ಏನು ಆಗ್ತಿತ್ತು ಅಂದರೆ, ಆ ಮಹಿಳೆಗೆ ಯಾರೋ ಒಬ್ಬ ಮಾಸ್ಕ್ ಹಾಕೊಂಡು, ಕೋಟ್ ಹಾಕೊಂಡು ಅವರನ್ನು ಫಾಲೋ ಮಾಡುತ್ತಿರುವುದು ಕನಸಿನಲ್ಲಿ ಕಾಣಿಸುತ್ತಿತ್ತಂತೆ. ಈ ಮಹಿಳೆ ಹೆದರಿಕೊಂಡು ಹೋಗುತ್ತಿರುವಂತಹ ಕನಸು ಬೀಳುತ್ತಿತ್ತು. ನಾವು ಆ ಹುಡುಗಿಗೆ ಹೀಲಿಂಗ್ ಬಾತ್ ಮಾಡಿಸಿ, ಪೂಜೆಗೆ ಕೂರಿಸಿದ್ವಿ. ಕಣ್ಣು ಮುಚ್ಚಿಕೊಂಡು ಕೂರಮ್ಮ ನಿನಗೆ ಏನು ಕಾಣುತ್ತೆ ಹೇಳು ಅಂತ ಕೇಳಿದ್ವಿ. ಆಗ ಆಕೆಗೆ ಸೇಮ್ ಅದೇ ವ್ಯಕ್ತಿ ಕಾಣಿಸಿಕೊಂಡ. ಆ ವ್ಯಕ್ತಿ ಯಾವುದೋ ಸ್ಮಶಾನದಿಂದ ಈಕೆಯನ್ನು ನೋಡಿ ಇಷ್ಟ ಆಗಿ ಬಂದಿರೋದು. ಅದನ್ನು ಮಾತಾಡಿ ಕ್ಲಿಯರ್ ಮಾಡಿದ್ವಿ" ಎಂದಿದ್ದಾರೆ.

ಮಹಿಳೆಯ ಕನಸಲ್ಲಿ ಬಂದ ಆ ವ್ಯಕ್ತಿಯನ್ನು ಓಡಿಸಿದ ಬಳಿಕ ಅದೇ ಮನೆಗೆ ವಾಪಾಸ್ ಬಂದು ನೋಡುತ್ತಾರೆ. ಆಗ ಅವರ ಕ್ಯಾಮರಾಗೆ ಸಿಕ್ಕ ಫೋಟೋ ನೋಡಿ ಶಾಕ್ ಆಗಿತ್ತು. "ಆ ಮನೆಗೆ ಎಲ್ಲಾ ಕ್ಲಿಯರ್ ಆಗಿದೆಯಾ ಚೆಕ್ ಮಾಡೋಣ ಅಂತ ಹೋಗಿದ್ವಿ. ಅವರ ಮನೆಯಲ್ಲಿ ಅಡುಗೆ ಮನೆಯನ್ನೆಲ್ಲ ಚೆಕ್ ಮಾಡಿಕೊಂಡು ಹಾಲ್‌ಗೆ ಹೋದ್ವಿ. ಅಲ್ಲಿ ಹಾಲ್‌ಗೆ ಹೋಗಿ ಕಿಟಕಿ ತೆಗೆದು ನೋಡಿದರೆ ಪಾಳು ಬಿದ್ದಿರುವ ಆಸ್ಪತ್ರೆ ಇತ್ತು. ಆಗ ಮನೆಯಲ್ಲಿ ಏನಾದರೂ ಸಿಗಬಹುದೇನೋ ಅಂತ ಫೋಟೋ ತೆಗೆದುಕೊಂಡಿದ್ದು, ಆಗ ನಮಗೆ ಸಿಕ್ಕಿದ್ದು ಈ ಫೋಟೋ. ಈತರನೂ ಫೋಟೋ ಸಿಗುತ್ತಾ ಅಂತ. ಆಗ ಕಬೋರ್ಡ್ ಓಪನ್ ಆಗಿತ್ತು. ಆಗ ಕ್ಲಿಕ್ ಮಾಡಿದಾಗ ಲೈಟ್ ಏನೂ ಹಾಕಿರಲ್ಲ. ಮೊಬೈಲ್ ಫ್ಲಾಶ್ ಆನ್ ಮಾಡಿ ತೆಗೆದಿದ್ದು. ಆಗ ಸಿಕ್ಕಿರುವ ಫೋಟೋ ಇದು." ಎಂದು ಪ್ರಶಾಂತ್ ಸಿದ್ಧಿ ಮನೆಯಲ್ಲಿ ಕಾಣಿಸಿಕೊಂಡ ದೆವ್ವದ ಬಗ್ಗೆ ವಿವರಿಸಿದ್ದಾರೆ.

More from Filmibeat

English summary
Imran Pasha ghostbuster in Bengaluru once found ghost in Kannada actor Prashanth Siddhi house
Read more about: actor ghost filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X