»   » ಅರಿಶಿನ ಶಾಸ್ತ್ರ ಮುಕ್ತಾಯ: ಆದಿಚುಂಚನಗಿರಿ ತಲುಪಿದ ಅಮ್ಮು-ಜಗ್ಗಿ ಕುಟುಂಬ

ಅರಿಶಿನ ಶಾಸ್ತ್ರ ಮುಕ್ತಾಯ: ಆದಿಚುಂಚನಗಿರಿ ತಲುಪಿದ ಅಮ್ಮು-ಜಗ್ಗಿ ಕುಟುಂಬ

Posted By:
Subscribe to Filmibeat Kannada

ನಿನ್ನೆ ರಾಜರಾಜೇಶ್ವರಿ ನಗರದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಮೆಹೆಂದಿ(ಮದರಂಗಿ) ಶಾಸ್ತ್ರ ಮುಗಿಸಿರುವ ನಟಿ ಅಮೂಲ್ಯಗೆ ಇಂದು ಅರಿಶಿನ ಶಾಸ್ತ್ರ ನೇರವೇರಿದೆ.[ಅಮೂಲ್ಯ ಮೆಹೆಂದಿ ಶಾಸ್ತ್ರ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಸ್ತ್ ಡ್ಯಾನ್ಸ್]

in pics Kannada Actress Amulya Arishina Shastra

ಮದುಮಗಳು ಅಮೂಲ್ಯ ರವರಿಗೆ ಶೇಷಾದ್ರಿಪುರಂ ನಲ್ಲಿರುವ ಅವರ ಮನೆಯಲ್ಲಿ ಇಂದು ಕುಟುಂಬದವರು ಬೆಳಿಗ್ಗೆಯಿಂದಲೇ ಹಲವು ಸಂಪ್ರದಾಯಿಕ ಶಾಸ್ತ್ರಗಳನ್ನು ಶುರು ಮಾಡಿ ಅರಿಶಿನ ಶಾಸ್ತ್ರ ಪೂರೈಸಿದರು. ಹಾಗೆಯೇ ವರ ಜಗದೀಶ್ ಮನೆಯಲ್ಲಿಯೂ ವಾದ್ಯ ಮೇಳ ಝೇಂಕಾರದೊಂದಿಗೆ ಹಲವು ಶಾಸ್ತ್ರಗಳನ್ನು ಮಾಡಲಾಯಿತು.

in pics Kannada Actress Amulya Arishina Shastra

ಅರಿಶಿನ ಶಾಸ್ತ್ರ ಪೂರೈಸಿದ ನಂತರ ಅಮೂಲ್ಯ ಮತ್ತು ಜಗದೀಶ್ ಕುಟುಂಬದವರು ಕಲ್ಯಾಣ ನಡೆಯುವ ಸ್ಥಳ ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಕ್ಷೇತ್ರಕ್ಕೆ ಹೋಗಿ ತಲುಪಿದ್ದಾರೆ. ನಾಳೆ ಅಮ್ಮು ಮತ್ತು ಜಗ್ಗಿ ಮದುವೆ ಹಿಂದೂ ಸಂಪ್ರದಾಯದಂತೆ ಆದಿ ಚುಂಚನಗಿರಿಯ ಕಾಲಬೈರವೇಶ್ವರ ಸನ್ನಿಧಿಯಲ್ಲಿ ನಡೆಯಲಿದೆ. ವಧು-ವರರು ಹಸಮಣೆ ಏರಲಿರುವ ಸಂದರ್ಭಕ್ಕೆ ಇಬ್ಬರ ಕುಟುಂಬದವರು, ಸಂಬಂಧಿಗಳು, ನಟ ಗಣೇಶ್- ಶಿಲ್ಪಾ ಗಣೇಶ್ ಮತ್ತು ಇತರೆ ಆಹ್ವಾನಿತರು ಸಾಕ್ಷಿಯಾಗಲಿದ್ದಾರೆ.

English summary
Kannada Actress Amulya Arishina Shastra done in her home at Sheshadri Puram. Check out these pictures of Kannada Actress Amulya Arishina Shastra

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X