ಅಮೂಲ್ಯ ಮದರಂಗಿ ಶಾಸ್ತ್ರದ ರಂಗು ರಂಗಿನ ಚಿತ್ತಾರ

By Suneel

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ರವರ ಮದುವೆ ಮೇ 12 ರಂದು ಆದಿಚುಂಚನಗಿರಿಯಲ್ಲಿ ನೆರವೇರಲಿದೆ. ಮದುವೆಗೂ ಮುನ್ನ ಇಂದು ರಾಜರಾಜೇಶ್ವರಿ ನಗರದಲ್ಲಿರುವ ನಟ ಗಣೇಶ್ ಮನೆಯಲ್ಲಿ ಅಮೂಲ್ಯ ರವರ ಮೆಹೆಂದಿ ಶಾಸ್ತ್ರ ನಡೆದಿದ್ದು, ಸಂಗೀತ ಕಾರ್ಯಕ್ರಮ ಶುರುವಾಗಿದೆ.[ಅಮೂಲ್ಯ ಮೆಹಂದಿ ಶಾಸ್ತ್ರಕ್ಕೆ ಸಿಂಗಾರಗೊಂಡ ಗಣೇಶ್ ಮನೆ: ಈ ದಿನದ ವಿಶೇಷತೆಗಳೇನು?]

ಅಮೂಲ್ಯ ರವರ ಮೆಹೆಂದಿ ಶಾಸ್ತ್ರದ ಪ್ರಯುಕ್ತ ನಡೆಯುತ್ತಿರುವ ಸಂಗೀತ ಕಾರ್ಯಕ್ರಮದ ಸಡಗರಕ್ಕೆ ಸ್ಯಾಂಡಲ್ ವುಡ್ ನ ಹಲವು ತಾರೆಯರು ಆಗಮಿಸಿದ್ದು, ಸಖತ್ತಾಗೆ ಸ್ಟೆಪ್ ಹಾಕಿದ್ದಾರೆ. ಮುಂದೆ ಓದಿ..

ಗಣೇಶ್ ಮನೆಯಲ್ಲಿ ಅಮ್ಮು ಗೆ ಮೆಹೆಂದಿ ಶಾಸ್ತ್ರ

ಗಣೇಶ್ ಮನೆಯಲ್ಲಿ ಅಮ್ಮು ಗೆ ಮೆಹೆಂದಿ ಶಾಸ್ತ್ರ

ರಾಜರಾಜೇಶ್ವರಿ ನಗರದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ನಟಿ ಅಮೂಲ್ಯಗೆ ಮೆಹೆಂದಿ ಶಾಸ್ತ್ರ ನಡೆದಿದೆ. ಮೆಹೆಂದಿ ಶಾಸ್ತ್ರದ ಪ್ರಯುಕ್ತ ಗಣೇಶ್ ರವರ ಮನೆಯಲ್ಲಿ ಅಮೂಲ್ಯಗೆ ಇಷ್ಟವಾಗುವ ಗುಲಾಬಿ, ಹಸಿರು ಮತ್ತು ಬಿಳಿ ಬಣ್ಣಗಳ ವಸ್ತ್ರಗಳಿಂದ ಸಿಂಗಾರ ಮಾಡಲಾಗಿತ್ತು.

ಮೆಹೆಂದಿ ಶಾಸ್ತ್ರದಲ್ಲಿ ಕಂಗೊಳಿಸಿದ ಅಮೂಲ್ಯ

ಮೆಹೆಂದಿ ಶಾಸ್ತ್ರದಲ್ಲಿ ಕಂಗೊಳಿಸಿದ ಅಮೂಲ್ಯ

ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶುಭ ಸಂದರ್ಭಕ್ಕೆ ಶಿಲ್ಪಾ ಗಣೇಶ್ ಮತ್ತು ಗಣೇಶ್ ರವರು ಉಡುಗೊರೆಯಾಗಿ ಆರೇಂಜ್ ಮಾಡಿದ್ದ ಮೆಹೆಂದಿ ಶಾಸ್ತ್ರದಲ್ಲಿ ಅಮೂಲ್ಯ ಕೆಂಪು ಬಣ್ಣದ ಉಡುಪು ಮತ್ತು ಫ್ಲವರ್ ಡಿಸೈನ್ ನೆಕ್ಲೆಸ್ ಧರಿಸಿ ಕಂಗೊಳಿಸಿದರು.

ಸಂಗೀತ ಕಾರ್ಯಕ್ರಮದಲ್ಲಿ ಗಣೇಶ್ ಅದ್ಧೂರಿ ಸ್ಟೆಪ್

ಸಂಗೀತ ಕಾರ್ಯಕ್ರಮದಲ್ಲಿ ಗಣೇಶ್ ಅದ್ಧೂರಿ ಸ್ಟೆಪ್

'ಚಮಕ್' ಚಿತ್ರೀಕರಣದ ಶೆಡ್ಯೂಲ್ ಮುಗಿಸಿ ಬಂದ ಗಣೇಶ್ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದ್ಧೂರಿ ಸ್ಟೆಪ್ ಹಾಕಿದರು.

ಪಂಜಾಬಿ ಡೋಲು ಶಬ್ಧಕ್ಕೆ ತಾರೆಯರು ಡ್ಯಾನ್ಸ್

ಪಂಜಾಬಿ ಡೋಲು ಶಬ್ಧಕ್ಕೆ ತಾರೆಯರು ಡ್ಯಾನ್ಸ್

ನಟಿ ಅಮೂಲ್ಯ ಮೆಹೆಂದಿ ಶಾಸ್ತ್ರದ ಅಮೂಲ್ಯ ಸಂಭ್ರಮಕ್ಕೆ ಸ್ಯಾಂಡಲ್ ವುಡ್ ತಾರೆಯರಾದ ಲವ್ಲಿ ಸ್ಟಾರ್ ಪ್ರೇಮ್, ನಟ ದುನಿಯಾ ವಿಜಯ್ ಹಲವರು ಪಾಲ್ಗೊಂಡು ಗಣೇಶ್ ಜೊತೆ ಪಂಜಾಬಿ ಡೋಲು ಸೌಂಡ್ ಗೆ ಹೆಜ್ಜೆ ಹಾಕಿದರು.

ಮೆಹೆಂದಿ ಸಂಭ್ರಮದಲ್ಲಿ ಸುಧಾರಾಣಿ, ಕಾರುಣ್ಯ ರಾಮ್

ಮೆಹೆಂದಿ ಸಂಭ್ರಮದಲ್ಲಿ ಸುಧಾರಾಣಿ, ಕಾರುಣ್ಯ ರಾಮ್

ಶಿಲ್ಪಾ ಗಣೇಶ್ ಆಯೋಜಿಸಿದ್ದ ಅಮೂಲ್ಯ ರ ಮೆಹೆಂದಿ ಶಾಸ್ತ್ರಕ್ಕೆ ನಟಿ ಸುಧಾರಾಣಿ, ಬಿಗ್ ಬಾಸ್ ಖ್ಯಾತಿಯ ಕಾರುಣ್ಯ ರಾಮ್ ಸಹ ಭಾಗವಹಿಸಿದ್ದರು. ಮ್ಯೂಸಿಕ್ ಈವೆಂಟ್ ವೇಳೆ ಗಣೇಶ್ ಮತ್ತು ಪ್ರೇಮ್ ಜೊತೆ ಸೇರಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಶರಣ್ ಉಪಸ್ಥಿತಿ

ಶರಣ್ ಉಪಸ್ಥಿತಿ

ಸಂಜೆಯ ಸಂಗೀತ ಕಾರ್ಯಕ್ರಮದ ವೇಳೆ ಕಾಮಿಡಿ ಕಿಂಗ್ ನಟ ಶರಣ್ ರವರು ಉಪಸ್ಥಿತರಿದ್ದರು.

ಗಣೇಶ್ ಮನೆಯಲ್ಲಿ ಬೆಳ್ಳಿತೆರೆ ಮತ್ತು ಕಿರುತೆರೆಯ ತಾರೆಯರು

ಗಣೇಶ್ ಮನೆಯಲ್ಲಿ ಬೆಳ್ಳಿತೆರೆ ಮತ್ತು ಕಿರುತೆರೆಯ ತಾರೆಯರು

ಉತ್ತರ ಭಾರತ ಶೈಲಿಯಲ್ಲಿ ಹಮ್ಮಿಕೊಂಡಿದ್ದ ಅಮೂಲ್ಯ ರವರ ಮೆಹೆಂದಿ ಶಾಸ್ತ್ರ ಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಪತ್ನಿ ಸಹ ಆಗಮಿಸಿದ್ದರು. ಮೆಹೆಂದಿ ಶಾಸ್ತ್ರ ನಂತರ ಶುರುವಾದ ಸಂಗೀತ ಕಾರ್ಯಕ್ರಮಕ್ಕೆ ಮಾಳವಿಕಾ ಅವಿನಾಶ್, ಪ್ರಿಯಾಂಕ ಉಪೇಂದ್ರ, ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ರವರು, ನಟಿ ಶೃತಿ ರವರು ಮತ್ತು ಇನ್ನೂ ಅನೇಕ ಬೆಳ್ಳಿತೆರೆ ಮತ್ತು ಕಿರುತೆರೆಯ ತಾರೆಯರು ಆಗಮಿಸಿ ಸಂಗೀತ ಕಾರ್ಯಕ್ರಮ ಎಂಜಾಯ್ ಮಾಡಲು ಭಾಗಿಯಾದರು.

More from Filmibeat

English summary
Kannada Actress Amulya mehendi ceremony held today at Ganesh's house. Check out these pictures of Amulya's Mehendi ceremony and Sangeet Event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X