»   » ಅಮೂಲ್ಯ ಮೆಹೆಂದಿ ಶಾಸ್ತ್ರ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಸ್ತ್ ಡ್ಯಾನ್ಸ್

ಅಮೂಲ್ಯ ಮೆಹೆಂದಿ ಶಾಸ್ತ್ರ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಸ್ತ್ ಡ್ಯಾನ್ಸ್

Posted By:
Subscribe to Filmibeat Kannada

ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ ಅಮೂಲ್ಯ ರವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಉಡುಗೊರೆಯಾಗಿ ತಮ್ಮ ಮನೆಯಲ್ಲಿ ನಿನ್ನೆ (ಮೇ 10) ಮೆಹೆಂದಿ ಶಾಸ್ತ್ರ ಹಮ್ಮಿಕೊಂಡಿದ್ದರು. ಜೊತೆಗೆ ಮೆಹೆಂದಿ ಶಾಸ್ತ್ರಕ್ಕೆ ಬಂದ ಸ್ಯಾಂಡಲ್ ವುಡ್ ತಾರೆಯರ ಮನರಂಜನೆಗಾಗಿ ಉತ್ತರ ಭಾರತ ಶೈಲಿಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.[ಅಮೂಲ್ಯ ಮದರಂಗಿ ಶಾಸ್ತ್ರದ ರಂಗು ರಂಗಿನ ಚಿತ್ತಾರ]

ಮೆಹೆಂದಿ ಶಾಸ್ತ್ರದ ಪ್ರಯುಕ್ತ ಗಣೇಶ್ ಮನೆಯಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಚಂದನವನದ ಹಲವು ತಾರೆಯರು ಭೇಟಿ ನೀಡಿ ಪಾರ್ಟಿಯಲ್ಲಿ ಮಸ್ತ್ ಡ್ಯಾನ್ಸ್ ಮಾಡಿದರು. ಹಲವು ನಟಿಮಣಿಯರು ಅಮೂಲ್ಯ ಜೊತೆಗೆ ಮೆಹೆಂದಿ ಹಾಕಿಸಿಕೊಂಡು ಶುಭ ಸಂದರ್ಭವನ್ನು ಎಂಜಾಯ್ ಮಾಡಿದ್ದಾರೆ. ಮೆಹೆಂದಿ ಶಾಸ್ತ್ರ ಮತ್ತು ಸಂಗೀತ್ ಕಾರ್ಯಕ್ರಮದಲ್ಲಿ ಯಾರೆಲ್ಲಾ ತಾರೆಯರು ಭಾಗಿಯಾಗಿದ್ದರು ಎಂಬುದರ ಡೀಟೇಲ್ಸ್ ಫೋಟೋ ಸಹಿತ ಇಲ್ಲಿದೆ. ಮುಂದೆ ಓದಿ..

ಅಮ್ಮು ಮೆಹೆಂದಿ ಶಾಸ್ತ್ರದಲ್ಲಿ ಪ್ರೇಮ್ ಕುಟುಂಬ

ಅಮೂಲ್ಯ ಮೆಹೆಂದಿ ಶಾಸ್ತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ದಂಪತಿ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಅಮೂಲ್ಯ ರೊಂದಿಗೆ ಪ್ರೇಮ್ ಪತ್ನಿಯೂ ಸಹ ಮೆಹೆಂದಿ ಹಾಕಿಸಿಕೊಂಡು ಶುಭ ಸಂದರ್ಭವನ್ನು ಎಂಜಾಯ್ ಮಾಡಿದರು.

ಪ್ರಿಯಾಂಕ ಉಪೇಂದ್ರ

ಅಮೂಲ್ಯ ಮೆಹೆಂದಿ ಶಾಸ್ತ್ರಕ್ಕೆ ಬಂದಿದ್ದ ಪ್ರಿಯಾಂಕ ಉಪೇಂದ್ರ ರವರು ಸಹ ಅಮ್ಮು ನೆಚ್ಚಿನ ಕೆಂಪು ಬಣ್ಣದ ಉಡುಪಿನಲ್ಲಿ ಪೋಸ್ ಕೊಟ್ಟಿದ್ದು ಹೀಗೆ.

ಅಕುಲ್ ಬಾಲಾಜಿ ಪತ್ನಿ

ಅಮೂಲ್ಯ ಮೆಹೆಂದಿ ಸಮಾರಂಭಕ್ಕೆ ಅಕುಲ್ ಬಾಲಾಜಿ ಪತ್ನಿ ಜ್ಯೋತಿ ಸಮರ್ಥಿ ರವರು ಆಗಮಿಸಿ ಶುಭ ಸಂದರ್ಭಕ್ಕೆ ಸಾಕ್ಷಿಯಾದರು.

ಅಮೂಲ್ಯ ರೊಂದಿಗೆ ಫೋಟೋ

ಮೆಹೆಂದಿ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕ ಉಪೇಂದ್ರ ಮತ್ತು ಇತರರು ಅಮೂಲ್ಯ ರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಸಂದರ್ಭ.

ರಾಗಿಣಿ ಪೋಸ್

ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ನಟಿ ರಾಗಿಣಿ ರವರು ಮೆಹೆಂದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶಿಲ್ಪಾ ಗಣೇಶ್ ಜೊತೆ ಕಾಣಿಸಿಕೊಂಡಿದ್ದು ಹೀಗೆ.

ಗಣೇಶ್ ಮಗಳ ಮುಗುಳು ನಗೆ

ನಟಿ ಸುಧಾರಾಣಿ ಅವರೊಂದಿಗೆ ಗಣೇಶ್ ಮಗಳು ಚಾರಿತ್ರ್ಯ ಖುಷಿ ಖುಷಿಯಾಗಿ ಮುಗುಳು ನಗೆಯೊಂದಿಗೆ ಫೋಟೋಗೆ ಪೋಸ್ ಕೊಟ್ಟರು.

ಹರ್ಷಿಕಾ ಪೂಣಚ್ಚ

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ರವರು ತಮ್ಮ ಕೈಗಳಿಗೆ ಮೆಹೆಂದಿ ಹಚ್ಚಿಸಿಕೊಂಡು ಸಂಭ್ರಮವನ್ನು ಎಂಜಾಯ್ ಮಾಡಿದರು.

ಗಣೇಶ್ ಮನೆಯಲ್ಲಿ ಶೃತಿ ಮತ್ತು ಮಾಳವಿಕಾ ಅವಿನಾಶ್

ರಾಜ ರಾಜೇಶ್ವರಿ ನಗರದಲ್ಲಿರುವ ಗಣೇಶ್ ಮನೆಗೆ ಅಮ್ಮು ಮೆಹೆಂದಿ ಸಮಾರಂಭ ಪ್ರಯುಕ್ತ ನಟಿ ಶೃತಿ ಮತ್ತು ನಟಿ ಮಾಳವಿಕಾ ಅವಿನಾಶ್ ಸಹ ಆಗಮಿಸಿ ಮೆಹೆಂದಿ ಹಾಕಿಸಿಕೊಂಡು ಸಡಗರದಲ್ಲಿ ಭಾಗಿಯಾದರು.

ಸ್ಯಾಂಡಲ್ ವುಡ್ ನಟರು

ನಟ ದುನಿಯಾ ವಿಜಯ್, ನಟ ಶರಣ್, ಲವ್ಲಿ ಸ್ಟಾರ್ ಪ್ರೇಮ್ ರವರು ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಸ್ತ್ ಡ್ಯಾನ್ಸ್ ಮಾಡಿದರು.

ಮೆಹೆಂದಿ ಶಾಸ್ತ್ರದಲ್ಲಿ ಅಮೂಲ್ಯ

ಅಮೂಲ್ಯ ಮೆಹೆಂದಿ ಶಾಸ್ತ್ರದ ವೇಳೆ ಪ್ರಿಯಾಂಕ ಉಪೇಂದ್ರ ಹಾಜರಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ.

ಸಾಧು ಕೋಕಿಲ

ಅಮೂಲ್ಯ ಮೆಹೆಂದಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಸಂಗೀತ ರಸಸಂಜೆ ಎಂಜಾಯ್ ಮಾಡಲು ಸಾಧು ಕೋಕಿಲ ರವರು ಆಗಮಿಸಿದ್ದರು. ಇದೇ ವೇಳೆ ನವ ವಧು-ವರರಿಗೆ ಶುಭ ಕೋರಿದರು.

ಕುಣಿದು ಕುಪ್ಪಳಿಸಿದ ತಾರೆಯರು

ಶಿಲ್ಪಾ ಗಣೇಶ್ ಆಯೋಜಿಸಿದ್ದ ಉತ್ತರ ಭಾರತ ಶೈಲಿಯ ಸಂಗೀತ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸಿದರು.

ಪಾರ್ಟಿ ಮೂಡ್ ನಲ್ಲಿ ಗಣೇಶ್ ದಂಪತಿ

ಪಂಜಾಬಿ ಡೋಲು ಕುಣಿತ ಆರಂಭಕ್ಕೂ ಮುನ್ನ ಶಿಲ್ಪಾ ಗಣೇಶ್ ಮತ್ತು ಗಣೇಶ್ ಸೆಲ್ಫಿ ತೆಗೆದುಕೊಂಡ ಸಂದರ್ಭ.

ಅಮೂಲ್ಯ ಮೆಹೆಂದಿ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ರವರು ಮೆಹೆಂದಿ ಶಾಸ್ತ್ರಕ್ಕೆ ಆಗಮಿಸಿ ಅಮೂಲ್ಯ ಮತ್ತು ಜಗದೀಶ್ ಗೆ ಶುಭ ಕೋರಿದರು. ಈ ವೇಳೆ ಅಮೂಲ್ಯ ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

English summary
Kannada Actress Amulya mehendi ceremony held yesterday (May 10) at Ganesh's house. Check out these pictures of Amulya's Mehendi ceremony and celebrities dance in Sangeet Event.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada