For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು: ಲಂಡನ್‌ನಲ್ಲಿ ಭಾರತ-ಪಾಕ್ ಪಂದ್ಯ ನೋಡುತ್ತಿರುವ ಪಾರುಲ್

  By Suneel
  |

  ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಇಂದು ಲಂಡನ್ ನಲ್ಲಿ ನಡೆಯುತ್ತಿದೆ. ಈ ಎರಡು ದೇಶಗಳ ನಡುವಿನ ಕ್ರಿಕೆಟ್ ಪಂದ್ಯ ಅಂದ್ರೆ ಕೇವಲ ಈ ಎರಡು ದೇಶಗಳು ಮಾತ್ರವಲ್ಲದೇ ಪ್ರಪಂಚದಾದ್ಯಂತ ಕ್ರಿಕೆಟ್ ಪ್ರೇಮಿಗಳ ಕಿವಿ ನೆಟ್ಟಗಾಗಿರುತ್ತೇವೆ.[ಭಾರತ-ಪಾಕಿಸ್ತಾನ ಫೈನಲ್ ಮ್ಯಾಚ್ ಫೀವರ್ ನಲ್ಲಿ ನಟಿ ಪಾರೂಲ್.!]

  ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನೋಡಲು ಸಾಮಾನ್ಯವಾಗಿ ಕ್ರಿಕೆಟ್ ಎಂದರೇ ಹೆಚ್ಚು ಇಷ್ಟವಿರುವ ಸಿನಿ ತಾರೆಯರು ಕ್ರಿಕೆಟ್ ನಡೆಯುವ ಸ್ಥಳಕ್ಕೇ ಹೋಗುತ್ತಾರೆ. ಇನ್ನೂ ಕೆಲವರು ಶೂಟಿಂಗ್ ನಲ್ಲಿ ಬ್ಯುಸಿ ಇದ್ದಲ್ಲಿ, ಅವರೇನಾದರೂ ಕ್ರಿಕೆಟ್ ಪ್ರೇಮಿಗಳಾಗಿದ್ದಲ್ಲಿ ಟಿವಿ ಮುಂದೆ ಕೂರೋದು ಸಹಜ. ಆದ್ರೆ ನಟಿ ಪಾರುಲ್ ಯಾದವ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರೂ ಸಹ ಶೂಟಿಂಗ್ ನಿಂದ ಬ್ರೇಕ್ ಪಡೆದು ಲಂಡನ್ ನಲ್ಲಿ ಭಾರತ-ಪಾಕ್ ಮ್ಯಾಚ್ ನೋಡುತ್ತಿದ್ದಾರೆ. ಅವರು ಲೈವ್ ಆಗಿ ಭಾರತ-ಪಾಕ್ ಕ್ರಿಕೆಟ್ ಪಂದ್ಯ ನೋಡುವಾಗ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿರಿ

  ಲಂಡನ್ ನಲ್ಲಿ ಪಾರುಲ್ ಯಾದವ್

  ಲಂಡನ್ ನಲ್ಲಿ ಪಾರುಲ್ ಯಾದವ್

  ಭಾರತ-ಪಾಕ್ ಕ್ರಿಕೆಟ್ ಪಂದ್ಯ ನೋಡಲು ಲಂಡನ್ ಗೆ ತೆರಳುತ್ತಿರುವ ವಿಷಯವನ್ನು ಖುದ್ದಾಗಿ ಫೋಟೋ ಸಹಿತ ಮಾಹಿತಿ ನೀಡಿದ್ದ ನಟಿ ಪಾರುಲ್ ಯಾದವ್ ಕ್ರಿಕೆಟ್ ಪಂದ್ಯ ನಡೆಯುವ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

  ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಪಂದ್ಯ ವೀಕ್ಷಣೆ

  ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಪಂದ್ಯ ವೀಕ್ಷಣೆ

  ಲಂಡನ್ ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಚಾಂಪಿಯನ್ ಟ್ರೋಫಿಗಾಗಿ ನೇರ ಹಣಾಹಣಿ ನಡೆಯುತ್ತಿದೆ. ಕೆನಿಂಗ್ಟನ್ ಓವಲ್ ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿ ಪಾರುಲ್ ಯಾದವ್ ರವರು ಕಾಣಿಸಿಕೊಂಡಿದ್ದು ಹೀಗೆ.

  ಟೋಪಿ ಹಾಕಿಕೊಂಡು ಪಂದ್ಯ ವೀಕ್ಷಣೆ

  ಟೋಪಿ ಹಾಕಿಕೊಂಡು ಪಂದ್ಯ ವೀಕ್ಷಣೆ

  ನಟಿ ಪಾರುಲ್ ಯಾದವ್ ತಲೆಮೇಲೆ ಟೋಪಿ ಹಾಕಿಕೊಂಡು ಕೂಲಿಂಗ್ ಗ್ಲಾಸ್ ಧರಿಸಿ ಪಂದ್ಯ ವೀಕ್ಷಿಸುತ್ತಿರುವ ಫೋಟೋ ನೋಡಿ.

  ಭಾರತ ತಂಡಕ್ಕೆ ಬೆಂಬಲ

  ಭಾರತ ತಂಡಕ್ಕೆ ಬೆಂಬಲ

  ಕ್ರಿಕೆಟ್ ಪ್ರೇಮಿ ಆಗಿರುವ ಪಾರುಲ್ ಯಾದವ್ ಭಾರತ ತಂಡದ ಗೆಲುವಿನ ಮುನ್ನೋಟದಲ್ಲಿ ಪಂದ್ಯದ ನೇರ ವೀಕ್ಷಣೆ ಮಾಡುತ್ತಿದ್ದಾರೆ.

  English summary
  In Pics: Actress Parul Yadav spotted in london watching India vs Pakistan Champions Trophy FinalCricket Match.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X