"ನಾನು ವಿಲನ್ ಸಾರ್, ನೀವು ಹೀರೊ, ಅಂತ ಕಾಲಿಗೆ ನಮಸ್ಕಾರ ಮಾಡಿದ ದೊಡ್ಡ ಮನುಷ್ಯ"; ನಟ ವಿನೋದ್ ರಾಜ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ಇದೇ ಖುಷಿಯನ್ನು ಹಂಚಿಕೊಳ್ಳುವುದಕ್ಕಾಗಿ ದರ್ಶನ್ ಆಪ್ತರೆಲ್ಲ ಸೇರಿ ಕಾರ್ಯಕ್ರಮವನ್ನು ಡಿ 25 ಅನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಚಿತ್ರರಂಗದ ತಾರೆಯರು ದರ್ಶನ್ ಅವರ ಗುಣಗಳನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೂ ಯುವ ನಟರು ದರ್ಶನ್ ನೀಡುತ್ತಿರುವ ಬೆಂಬಲದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಅದರೆ, ಇಂಟ್ರೆಸ್ಟಿಂಗ್ ಅಂತ ಅನಿಸಿದ್ದು ವಿನೋದ್ ರಾಜ್ ಅವರ ಮಾತುಗಳು. ದರ್ಶನ್ ಹಾಗೂ ವಿನೋದ್ ರಾಜ್ ಇಬ್ಬರೂ ಚಿತ್ರರಂಗಕ್ಕೆ ಹಳಬರೇ. ಆದರೆ, ಹೆಚ್ಚು ಬೆರೆತಿದ್ದು ಸಿನಿ ಪ್ರಿಯರ ಗಮನಕ್ಕೆ ಬಂದಿರಲಿಲ್ಲ. ದರ್ಶನ್ 25ನೇ ವರ್ಷದ ಸಿನಿ ಜರ್ನಿಯ ಸಂಭ್ರಮದ ಸಂದರ್ಭದಲ್ಲಿ ಇಬ್ಬರ ಒಡನಾಟ ಎಷ್ಟು ವರ್ಷದ್ದು ಅನ್ನೋದು ರಿವೀಲ್ ಆಗಿದೆ. ಇಬ್ಬರೂ ಒಬ್ಬರ ಬಗ್ಗೆ ಇನ್ನೊಬ್ಬರು ಇಟ್ಟುಕೊಂಡಿರುವ ಗೌರವ ಎಂತಹದ್ದು ಅನ್ನೋದು ಬೆಳಕಿಗೆ ಬಂದಿದೆ.

vinod Raj about drashan in d 25 event

ಡಿ 25 ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ವಿನೋದ್ ರಾಜ್ ಹೆಮ್ಮಿಯಿಂದ ಮಾತಾಡಿದ್ದಾರೆ. ತಮ್ಮ ತಾಯಿ ಲೀಲಾವತಿ ಹಾಸಿಗೆ ಹಿಡಿದಾಗ, ಅವರನ್ನು ಮಾತಾಡಿಸುವುದಕ್ಕೆ ದರ್ಶನ್ ಬಂದಿದ್ದರು. ಆ ವೇಳೆ ದರ್ಶನ್ ಹೇಳಿದ ಮಾತುಗಳನ್ನು ನೆನಪಿಸಿಕೊಂಡಿದ್ದರು. ಅದೇ ಇನ್ನೊಂದು ಕಡೆ ದರ್ಶನ್ ತನ್ನ ಮೊದಲ ಹೀರೊ ವಿನೋದ್ ರಾಜ್ ಎಂದು ಹೇಳಿದ್ದರು. ಈ ತೆರೆಮರೆಯ ಸ್ನೇಹ ಡಿ 25 ವೇದಿಕೆ ಮೇಲೆ ರಿವೀಲ್ ಆಗಿದೆ.

ವಿನೋದ್ ರಾಜ್ ದರ್ಶನ್ 'ಕಾಟೇರ' ಸಿನಿಮಾದ ಬಗ್ಗೆ ಮಾತಾಡುತ್ತಾ, ದರ್ಶನ್ ಅವರು ಇರುವ ಎತ್ತರಕ್ಕಿಂತ ಹೆಚ್ಚು ಬೆಳೆದು ನಿಂತಿದ್ದಾರೆ. ಅವರ ಮನಸ್ಸಿಗೆ ಆಗುವ ನೋವು ತೊಲಗಲಿ ಎಂದು ಹೇಳಿದ್ದಾರೆ. "ದರ್ಶನ್ ಅವರಿಗೆ ನನ್ನ ಪ್ರೀತಿಯ ಮಾತು ಏನು ಅಂದರೆ? ಕಾಟೇರ ಚಿತ್ರದಲ್ಲಿ ರೈತರ ಪರವಾಗಿ ನಿಂತಿದ್ದರಿಂದ ತುಂಬಾನೇ ಸಂತೋಷ ಆಯ್ತು. ಈ ದೇಶವನ್ನು ಕಾಯುವ ಯೋಧರ ಮೇಲೂ ಅವರಿಗೆ ಪ್ರೀತಿ ಇದೆ ಅಂತ ನಾನು ನಂಬುತ್ತೇನೆ. ದೇವರು ಅವರನ್ನು ಆಕಾಶದೆತ್ತರಕ್ಕೆ ಬೆಳೆಸಲಿ. ಅವರು ಬೆಳಗಲಿ. ಅವರು ಬಾಳಲಿ. ಅವರ ಮನಸ್ಸಿಗೆ ಆಗಿರುವ ನೋವೆಲ್ಲ ತೊಲಗಿ ಹೋಗಲಿ. ಅಭಿಮಾನದ ಪ್ರೀತಿಯ ಹೊಳೆಯಲ್ಲಿ ಆ ನೋವೆಲ್ಲ ಕೊಚ್ಚಿಕೊಂಡು ಹೋಗಲಿ. ಸಂತೋಷವಾಗಿ ಬಾಳಲಿ ಅಂತ ನೂರು ಬಾರಿ ಹೇಳುತ್ತೇನೆ." ಎಂದು ವೇದಿಕೆ ಮೇಲೆ ಹರಿಸಿದ್ದಾರೆ.

ಇದೇ ವೇಳೆ ತನ್ನ ತಾಯಿ ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ, ದರ್ಶನ್ ಅವರ ಆರೋಗ್ಯ ವಿಚಾರಿಸುವುದಕ್ಕೆ ಮನೆಗೆ ತೆರಳಿದ್ದರು. ಆವೇಳೆ ದರ್ಶನ್ ಆಡಿದ ಮಾತುಗಳನ್ನು ವಿನೋದ್ ರಾಜ್ ನೆನಪಿಸಿಕೊಂಡಿದ್ದಾರೆ. "ನನ್ನ ತಾಯಿಯವರು ನೋವಿನಲ್ಲಿ ಮಲಗಿದ್ದಾಗ, ಪ್ರೀತಿಯಿಂದ ಮಾತಾಡಿ, ನಾನು ವಿಲನ್ ಸಾರ್.. ನೀವು ಹೀರೊ ಸಾರ್ ಅಂತ ಕಾಲಿಗೆ ಬಿದ್ದು ನಮಸ್ಕಾರ ಮಾಡುವಂತಹ ದೊಡ್ಡ ಮನುಷ್ಯನ ಬಗ್ಗೆ ಏನ್ರೀ ಹೇಳುವುದಕ್ಕೆ ಆಗುತ್ತೆ. ಅಂತಹ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ನಾನು ಮಾತಾಡಿದ್ರೆ ತಪ್ಪೇನಿದೆ? ಏನು ತಪ್ಪಿದೆ? ತಪ್ಪಿಲ್ಲ. " ಎಂದು ಹೇಳಿದ್ದಾರೆ.

vinod Raj about drashan in d 25 event

ಹಾಗೇ ನಾವು ಊಟ ಮಾಡಿದ್ದು ಸಾಕು, ಪ್ರೀತಿ ಹಂಚೋಣ ಅಂತನೂ ಹೇಳಿದ್ದಾರೆ. "ಪ್ರೀತಿನಾ ಹಂಚೋಣ. ನಾವು ಊಟ ಮಾಡಿ ಆಯ್ತು. ಊಟ ಮಾಡೋರಿಗೆ ಅವಕಾಶ ಮಾಡಿ ಕೊಡೋಣ. ಅವರು ಹೊಟ್ಟೆ ತುಂಬಾ ಊಟ ಮಾಡಿ ಸಂತೋಷ ಪಟ್ಟರೆ, ನಾಳೆ ನಮ್ಮನ್ನು ಸಾಕ್ತಾರೆ. " ಎಂದಿದ್ದರು. ಇದು ಸಾಲುಗಳ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಅದೆಲ್ಲ ಏನೇ ಇದ್ದರೂ, ದರ್ಶನ್‌ಗೂ ವಿನೋದ್ ರಾಜ್ ಮೇಲೆ ಅಪಾರವಾದ ಪ್ರೀತಿಯಿದೆ. ವಿನೋದ್ ರಾಜ್‌ ನಟಿಸಿದ ಮಹಾಭಾರತದಲ್ಲಿ ದರ್ಶನ್ ಚಿಕ್ಕದೊಂದು ಪಾತ್ರ ಮಾಡಿದ್ದರು. ಹೀಗಾಗಿ ಅವರೇ ನನ್ನ ಮೊದಲ ಹೀರೊ ಅಂತ ವೇದಿಕೆ ಮೇಲೆ ಹೇಳಿದ್ದರು. "ವಿನೋದ್ ರಾಜ್ ಅವರನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಯಾಕಂದ್ರೆ, ಮಹಾಭಾರತದಲ್ಲಿ ಅವರು ನನಗೊಂದು ಪಾತ್ರ ಕೊಟ್ಟಿದ್ದರು. ಅವರು ನಾಯಕರು. ಅವರು ನನ್ನ ಮೊದಲ ಹೀರೊ. ಮಹಾಭಾರತದಲ್ಲಿ ಅವರು ನಾಯಕರು. ನನ್ನದೊಂದು ಪಾತ್ರವಿತ್ತು. ಆ ಪಾತ್ರ ಕೊಟ್ಟಿದ್ದು ಎಸ್ ನಾರಾಯಣ್ ಅವರು. " ಎಂದು ದರ್ಶನ್ ಹೇಳಿದ್ದಾರೆ.

More from Filmibeat

English summary
In the D25 event Vinod Raj remembered Darshan's words while coming to his house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X