27 ವರ್ಷಗಳ ಹಿಂದೆ ಶಿವಣ್ಣ ವೈದ್ಯರಾಗಿ ನಟಿಸಿದ್ದ ಸಿನಿಮಾ ಯಾವುದು? ಈಗ ಸೆಟ್ಟಿರೋದ್ಯಾವುದು?

ಸ್ಯಾಂಡಲ್ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸದ ಪಾತ್ರವಿಲ್ಲ. ಶಿವಣ್ಣ ಮಚ್ಚು ಹಿಡಿಯೋಕೂ ಸೈ. ಹೂವು ಹಿಡಿಯೋಕೂ ಜೈ. ಹಾಗೇ ವೈದ್ಯನಾಗಿ ಸ್ಟೆತೋಸ್ಕೋಪ್ ಹಿಡಿಯೋ ರೆಡಿ. ಆದರೆ, ಸೆಂಚುರಿ ಸ್ಟಾರ್ ವೈದ್ಯನಾಗಿ ಕೊನೆಯದಾಗಿ ನಟಿಸಿದ ಸಿನಿಮಾ ಯಾವುದು ಗೊತ್ತಾ?

ಶಿವಣ್ಣ ಡಾಕ್ಟರ್ ಪಾತ್ರದಲ್ಲಿ ಹಿಟ್ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಆ ಸಿನಿಮಾ ಯಾವುದು ಅಂತ ನೋಡೋಣ. ಅದಕ್ಕೂ ಮುನ್ನ ಹೊಸದಾಗಿ ಸೆಟ್ಟೇರಿದ ಸಿನಿಮಾದಲ್ಲಿ ಮತ್ತೆ ವೈದ್ಯರಾಗಿ ನಟಿಸುತ್ತಿದ್ದಾರೆ. ಆ ಸಿನಿಮಾ ಯಾವುದು? ಅಂತ ನೋಡೋಣ. ನಿರ್ದೇಶಕರು ಯಾರು? ಯಾರೆಲ್ಲ ನಟಿಸುತ್ತಿದ್ದಾರೆ? ಯಾವಾಗಿನಿಂದ ಶೂಟಿಂಗ್ ಶುರು ಅನ್ನೋ ಮಾಹಿತಿ ಇಲ್ಲಿದೆ.

In which movie did Shivarajkumar play the doctor role 27 years back

ಶಿವರಾಜ್‌ಕುಮಾರ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಇಂದು (ಆಗಸ್ಟ್ 18) ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಅಂದ್ಹಾಗೆ ಆ ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಆಗಿದೆ. ನಿರ್ದೇಶಕರು ಈ ಸಿನಿಮಾಗೆ 'ಡ್ಯಾಡ್' ಎಂದು ಟೈಟಲ್ ಇಟ್ಟಿದ್ದು, ಸಿನಿಮಾ ಸೆಟ್ಟೇರಿದೆ. ಈ ಸ್ಥಳ ಕೂಡ ಶಿವಣ್ಣ ವೃತ್ತಿ ಬದುಕಿನ ಮಹತ್ವದ ಸ್ಥಾನ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ 'ಡ್ಯಾಡ್' ಸಿನಿಮಾ ಮುಹೂರ್ತ ನೆರವೇರಿದೆ. ಗೀತಾ ಶಿವರಾಜಕುಮಾರ್ ಈ ಸಿನಿಮಾದ ಫಸ್ಟ್ ಶಾಟ್‌ಗೆ ಆರಂಭ ಫಲಕ ತೋರಿ ತಂಡಕ್ಕೆ ಶುಭ ಕೋರಿದ್ದಾರೆ. ಸುಮಾರು 32 ವರ್ಷಗಳ ಹಿಂದೆ ಶಿವಣ್ಣ ನಟಿಸಿದ 'ಜಗ ಮೆಚ್ಚಿದ ಹುಡುಗ' ಸಿನಿಮಾ ಇಲ್ಲೇ ಅದ್ಧೂರಿಯಾಗಿ ಸೆಟ್ಟೇರಿತ್ತು. ಈಗ ಅದೇ ನಂದಿ ದೇವಸ್ಥಾನದಲ್ಲಿ ಶಿವಣ್ಣ ನಟನೆಯ ಹೊಸ ಸಿನಿಮಾ 'ಡ್ಯಾಡ್'ಗೆ ಚಾಲನೆ ಸಿಕ್ಕಿರೋದು ವಿಶೇಷ.

ಅಂದ್ಹಾಗೆ ಈ 'ಡ್ಯಾಡ್' ಸಿನಿಮಾವನ್ನು ತೆಲುಗಿನಲ್ಲಿ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಹರೀಶ್ ಪೆದ್ದಿ ಮೈರಾ ಕ್ರಿಯೇಷನ್ಸ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. 'ಭಗವಂತ್‍ ಕೇಸರಿ', 'ಉಗ್ರಂ', 'ಟಕ್‍ ಜಗದೀಶ್‍' ಅಂತಹ ಜನಪ್ರಿಯ ಸಿನಿಮಾಗಳನ್ನು ಹರೀಶ್ ಪೆದ್ದಿ ನಿರ್ಮಿಸಿದ್ದಾರೆ. ಹಾಗೇ ತೆಲುಗಿನಲ್ಲಿ 'ಅಸಾಧ್ಯುಡು', 'ಮಿಸ್ಟರ್ ನೂಕಯ್ಯ' ಮತ್ತು 'ಹಿಡಿಂಬ' ಎಂಬ ಸಿನಿಮಾಗಳನ್ನು ನಿರ್ದೇಶಿಸಿರುವ ಅನಿಲ್‍ ಕನ್ನೆಗಂಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರಿಗೂ ಇದು ಕನ್ನಡದಲ್ಲಿ ಮೊದಲ ಸಿನಿಮಾ.

In which movie did Shivarajkumar play the doctor role 27 years back

ಈ ಸಿನಿಮಾದಲ್ಲಿ ಶಿವಣ್ಣ ವೈದ್ಯರಾಗಿ ನಟಿಸುತ್ತಿದ್ದಾರೆ. ಥ್ರಿಲ್ಲಿಂಗ್ ಎಲಿಮೆಂಟ್ಸ್‌ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಹೆಚ್ಚಿರಲಿವೆ. ಸುಮಾರು ಎರಡೂವರೆ ದಶಕಗಳ ಬಳಿಕ ಶಿವರಾಜ್‌ಕುಮಾರ್ ಮತ್ತೆ ವೈದ್ಯರಾಗಿ ನಟಿಸುತ್ತಿದ್ದಾರೆ. 27 ವರ್ಷಗಳ ಹಿಂದೆ ಶಿವಣ್ಣ ವೈದ್ಯರಾಗಿದ್ದ ನಟಿಸಿದ್ದ ನಿಮಗೆ ನೆನಪಿದೆಯಾ? ಹೌದು 27 ವರ್ಷಗಳ ಹಿಂದೆ 'ಗಡಿಬಿಡಿ ಕೃಷ್ಣ' ಸಿನಿಮಾದಲ್ಲಿ ಶಿವಣ್ಣ ಡಾಕ್ಟರ್ ಆಗಿ ನಟಿಸಿದ್ದರು. ಈ ಚಿತ್ರ ಹಿಟ್ ಲಿಸ್ಟ್ ಸೇರಿತ್ತು.

1998ರಲ್ಲಿ 'ಗಡಿಬಿಡಿ ಕೃಷ್ಣ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಒಂದು ಪಾತ್ರದಲ್ಲಿ ಕೃಷ್ಣನಾಗಿ ನಟಿಸಿದ್ದರೆ, ಇನ್ನೊಂದು ಪಾತ್ರದಲ್ಲಿ ಡಾ. ಶಿವರಾಮ್ ಪಾತ್ರದಲ್ಲಿ ನಟಿಸಿದ್ದರು. ಓಂ ಸಾಯಿ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ರೇವತಿ ಹಾಗೂ ಇಂದ್ರಜಾ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಇದು ತೆಲುಗಿನ 'ಸೊಮ್ಮೊಕಾಡಿದಿ ಸೊಕೊಕಾಡಿದಿ' ಸಿನಿಮಾದ ರಿಮೇಕ್.

ಇನ್ನು ಈಗ ಸೆಟ್ಟಿರುವ 'ಡ್ಯಾಡ್' ಸಿನಿಮಾದಲ್ಲೂ ಶಿವಣ್ಣನನ್ನು ವೈದ್ಯನ ಪಾತ್ರದಲ್ಲಿ ಅಭಿಮಾನಿಗಳು ನೋಡಬಹುದು. ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್‍ ವೆಂಜರಮೂಡು ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿದೆ. ಅರ್ಜುನ್‍ ಜನ್ಯ ಟ್ಯೂನ್ ಹಾಕುತ್ತಿದ್ದಾರೆ.

More from Filmibeat

English summary
In which movie did Shivarajkumar play the doctor role 27 years back?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X