ಬೆಂಗಳೂರಲ್ಲಿ 'ವಾರ್ 2' ಶೋ ತೆಗೆದು ಕೂಲಿಗೆ ಕೊಟ್ಟ ಮಲ್ಟಿಪ್ಲೆಕ್ಸ್;ಹೃತಿಕ್-ಎನ್‌ಟಿಆರ್‌ಗೆ ಕಹಿಯಾಗುತ್ತಾ ರಜೆಯ ಲೆಕ್ಕಾಚಾರ?

ಸೂಪರ್‌ಸ್ಟಾರ್‌ಗಳ ಕಣ್ಣು ಸದಾ ಕ್ಯಾಲೆಂಡರ್‌ ಮೇಲೆ ಇರುತ್ತೆ. ಒಂದರ ಹಿಂದೊಂದು ರಜೆ ಏನಾದರೂ ಬಂದಿರೆ, ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಸ್ಕೆಚ್ ಹಾಕುತ್ತಾರೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಕ್ಲ್ಯಾಶ್ ಆಗುತ್ತವೆ. ಕೆಲವೊಮ್ಮೆ ಥಿಯೇಟರ್‌ಗಳಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗುತ್ತೆ. ಇಂತಹದ್ದೇ ಒಂದು ಸನ್ನಿವೇಶವೀಗ ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ನಟನೆಯ 'ವಾರ್ 2' ಹಾಗೂ ರಜನಿಕಾಂತ್ ನಟನೆಯ 'ಕೂಲಿ'ಗೆ ಎದುರಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬ್ಯಾಕ್ ಟು ಬ್ಯಾಕ್ ರಜೆಗಳಿವೆ. ಹೀಗಾಗಿ ಈ ಎರಡೂ ಸಿನಿಮಾಗಳು ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ರಜೆಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿದೆ. ಒಂದೇ ದಿನ ಅಂದರೆ, ಆಗಸ್ಟ್ 14ರಂದು ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಆದರೆ, ಭಾರತೀಯ ಚಿತ್ರರಂಗದ ಈ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ರಜನಿಯ 'ಕೂಲಿ'ಗಿಂತ ಹೃತಿಕ್-ಜೂ.ಎನ್‌ಟಿಆರ್ ಜೋಡಿಯ 'ವಾರ್ 2' ಕೊಂಚಕ್ಕೆ ಉಳಿದುಕೊಂಡಿದೆ.

Independence Day affects War 2 in Bengaluru as multiplexes cancel shows for Rajnikanth s Coolie

ಅಡ್ವಾನ್ಸ್ ಬುಕಿಂಗ್‌ನಲ್ಲಿ ರಜನಿಯ 'ಕೂಲಿ' ಮುಂದೆ 'ವಾರ್ 2' ಹಿಂದೆ ಉಳಿದುಕೊಂಡಿದೆ. ದಕ್ಷಿಣ ಭಾರತದಲ್ಲಂತೂ 'ವಾರ್ 2'ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಈಗಾಗಲೇ ಮಲ್ಲಿಪ್ಲೆಕ್ಸ್‌ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರೂ 'ವಾರ್ 2' ಸಿನಿಮಾವನ್ನು ತೆಗೆದು 'ಕೂಲಿ'ಯನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದೂ ಬೆಂಗಳೂರಿನಲ್ಲಿ 'ವಾರ್ 2' ಸ್ಕ್ರೀನ್‌ಗಳನ್ನು ಕಿತ್ತು 'ಕೂಲಿ' ಕೊಟ್ಟಿರೋದರ ಬಗ್ಗೆ ಚರ್ಚೆಯಾಗುತ್ತಿದೆ.

ಕೆಲವು ಏರಿಯಾಗಳಲ್ಲಿ 'ವಾರ್ 2' ಹಾಗೂ 'ಕೂಲಿ' ಎರಡೂ ಸಿನಿಮಾಗಳ ಅಡ್ವಾನ್ಸ್‌ ಬುಕಿಂಗ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಅದು ಬಿಟ್ಟರೆ, ಬಹುತೇಕ ಕಡೆಗಳಲ್ಲಿ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ನೋಡುವುದಕ್ಕೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಹೀಗಾಗಿ ಮಲ್ಟಿಪ್ಲೆಕ್ಸ್‌ಗಳು ಈ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ನಿರ್ಧರಿಸಿದ್ದು, ಈಗಾಗಲೇ ಹೃತಿಕ್-ಜೂ.ಎನ್‌ಟಿಆರ್ ಸಿನಿಮಾ ಜೊತೆ ಮಾಡಿಕೊಂಡಿದ್ದ ಒಡಬಂಡಿಕೆಯನ್ನು ಮುರಿದುಕೊಂಡಿದೆ ಎನ್ನಲಾಗಿದೆ.

Independence Day affects War 2 in Bengaluru as multiplexes cancel shows for Rajnikanth s Coolie

ಕರ್ನಾಟಕದ ವಿತರಕರ ವಲಯದಲ್ಲಿ 'ವಾರ್ 2' ಹಾಗೂ 'ಕೂಲಿ' ನಡುವಿನ ಬಾಕ್ಸಾಫೀಸ್ ಫೈಟ್‌ ಬಗ್ಗೆನೇ ಚರ್ಚೆಯಾಗುತ್ತಿದೆ. ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ 'ವಾರ್ 2' ಪ್ರಸಾರ ಆಗಬೇಕಿತ್ತು. ಆದರೆ, 'ಕೂಲಿ'ಗೆ ಇರುವ ಕ್ರೇಜ್ ಅನ್ನು ಮನಗಂಡು ಅದಾಗಲೇ 'ವಾರ್ 2'ಗೆ ಕೊಟ್ಟಿದ್ದ ಸ್ಕ್ರೀನ್‌ಗಳನ್ನೂ ರಜನಿ ಸಿನಿಮಾಗೆ ನೀಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ವಿತರಕರ ವಲಯದ ಮೂಲಗಳು ಈ ಕಾರಣ ಕೊಡುತ್ತಿವೆ.

ವಿತರಕರೊಬ್ಬರ ಪ್ರಕಾರ, 'ವಾರ್ 2' ಬಿಡುಗಡೆಗೂ ಮುನ್ನವೇ ಮಲ್ಟಿಪ್ಲೆಕ್ಸ್ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡಿತ್ತು. ಐ ಮ್ಯಾಕ್ಸ್ ಸ್ಕ್ರೀನ್‌ನಲ್ಲಿ 'ವಾರ್ 2' ಬಿಟ್ಟರೆ, ಬೇರೆ ಸಿನಿಮಾ ಪ್ರದರ್ಶನ ಮಾಡುವಂತಿಲ್ಲ ಎಂದು ಮಾತುಕತೆ ನಡೆದಿತ್ತು. ಆದರೆ, 'ಕೂಲಿ' ಕ್ರೇಜ್ ನೋಡಿದ ಬಳಿಕ ಬೆಂಗಳೂರಿನಲ್ಲಿ 2:1ರ ಅನುಪಾತದಲ್ಲಿ ಸ್ಕ್ರೀನ್‌ಗಳನ್ನು ಶೇರ್ ಮಾಡಿದೆ ಎನ್ನುತ್ತಾರೆ. ಹಾಗೇ ಬೆಂಗಳೂರಿನಲ್ಲಿಸ ಮೊದಲು ಎಷ್ಟೆಷ್ಟು ಸ್ಕ್ರೀನ್‌ಗಳು ಇದ್ದವು? ಈಗ ಎಷ್ಟಿದೆ ಅನ್ನೋದನ್ನು ಹೊರ ಹಾಕಿವೆ.

'ವಾರ್ 2' ಸಿನಿಮಾ ಬೆಂಗಳೂರಿನಲ್ಲಿ ಸುಮಾರು 210 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಬೇಕಿತ್ತು. ಆದ್ರೀಗ ಅದನ್ನು 165ಕ್ಕೆ ಇಳಿಸಲಾಗಿದೆ. ಅದೇ ರಜನಿಕಾಂತ್ ಸಿನಿಮಾ 'ಕೂಲಿ'ಗೆ 240 ಸ್ಕ್ರೀನ್‌ಗಳನ್ನು ನೀಡಲಾಗಿತ್ತು. ಆದ್ರೀಗ 240 ರಿಂದ 290ಕ್ಕೆ ಏರಿಸಲಾಗಿದೆ ಎಂದು ವಿತರಕರೊಬ್ಬರು ಲೆಕ್ಕ ಕೊಡುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ 'ವಾರ್ 2' ಶೋಗಳು ಕ್ಯಾನ್ಸಲ್ ಆಗಿರೋದು ಕಂಡುಬರುತ್ತಿದೆ. ಸದ್ಯ ಈ ಬಗ್ಗೆ ಮಲ್ಟಿಪ್ಲೆಕ್‌ಗಳಾಗಲಿ, ಚಿತ್ರತಂಡ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

More from Filmibeat

English summary
Independence Day affects War 2 in Bengaluru, as multiplexes cancel shows for Rajnikanth's Coolie;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X