Don't Miss!
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಪ್ಪು ಫೋಟೊ ಮುಂದೆ ಶಾಂಪೇನ್: ಕ್ಷಮೆ ಕೇಳಿದ ರಕ್ಷಿತಾ
ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ತಂಡ ದೊಡ್ಡ ಪ್ರಮಾದ ಮಾಡಿ ವಿವಾದಕ್ಕೆ ಸಿಲುಕಿದೆ. ನಿನ್ನೆ (ನವೆಂಬರ್ 12) ಏಕ್ ಲವ್ ಯಾ ಸಿನಿಮಾದ ಮೂರನೇ ಹಾಡು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ರಚಿತಾ ರಾಮ್, ನಿರ್ಮಾಪಕಿ ರಚಿತಾ, ಗಾಯಕಿ ಮಂಗ್ಲಿ ಸೇರಿದಂತೆ ಇಡೀ ಚಿತ್ರತಂಡ ನೆರೆದಿತ್ತು. ಸಾಂಗ್ ರಿಲೀಸ್ ಮಾಡುವ ಖುಷಿಯಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಅವಮಾನ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಏಕ್ ಲವ್ ಯಾ ತಂಡದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪುನೀತ್ ರಾಜ್‌ಕುಮಾರ್ ಅಗಲಿದ ನೋವಲ್ಲಿರುವ ಅಭಿಮಾನಿಗಳಿಗೆ, ಅಣ್ಣಾವ್ರ ಕುಟುಂಬಕ್ಕೆ ಏಕ್ ಲವ್ ಯಾ ತಂಡ ಅವಮಾನ ಮಾಡಿದೆ ಎಂದು ಕಿಡಿಕಾರಿದ್ದಾರೆ. ಹೀಗಾಗಿ ಏಕ್ ಲವ್ ಯಾ ತಂಡ ಕ್ಷಮೆ ಕೋರಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಅಷ್ಟಕ್ಕೂ ಸಾಂಗ್ ಬಿಡುಗಡೆಯಾದ ವೇಳೆ ಆಗಿದ್ದೇನು? ಏಕ್ ಲವ್ ತಂಡದಿಂದ ಅಪ್ಪುಗಾದ ಅವಮಾನವೇನು? ರಕ್ಷಿತಾ ಪ್ರೇಮ್ ಕೇಳಿದ್ದು ಯಾಕೆ? ಅನ್ನುವ ವಿವರಕ್ಕೆ ಮುಂದೆ ಓದಿ.
ಅಪ್ಪು ಫೋಟೊ ಮುಂದೆ ಮೋಜು-ಮಸ್ತಿ
ಏಕ್ ಲವ್ ಯಾ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಮೂರನೇ ಹಾಡನ್ನು ಬಿಡುಗಡೆ ಮಾಡಬೇಕಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ಹಠಾತ್ ನಿಧನದಿಂದ ಇದು ಸಾಂಗ್ ರಿಲೀಸ್ ಮಾಡುವುದನ್ನು ಮುಂದೂಡಲಾಗಿತ್ತು. ಅಪ್ಪು ಅಗಲಿಕೆಯ ನೋವಿನಲ್ಲಿ ಇಡೀ ಕರ್ನಾಟಕ ಮುಳುಗಿದೆ. 'ಮೋಡ ಕವಿದ ಆಗಸ ಇನ್ನೂ ಸರಿ ಹೋಗಿಲ್ಲ. ಮೋಡದ ಮಧ್ಯೆ ಸೂರ್ಯನು ಇಣಿಕಿ ನೋಡುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ನಮ್ಮ ಏಕ್ ಲವ್ ಯಾ ಚಿತ್ರದ ಹಾಡಿನ ಸಂಭ್ರಮಾಚರಣೆ ಮಾಡಲು ಮನಸಾಗುತ್ತಿಲ್ಲ.' ಅಂತ ಸಾಂಗ್ ರಿಲೀಸ್ ಮಾಡುವುದನ್ನು ಪೋಸ್ಟ್‌ಪೋನ್ ಮಾಡಿದ್ದರು. ನಿನ್ನೆ (ನವೆಂಬರ್ 12)ರಂದು ಇದೇ ಹಾಡನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಲಾಗಿತ್ತು. ಈ ವೇಳೆ ಅಪ್ಪು ಫೋಟೊ ಮುಂದೆ ಮೋಜು ಮಸ್ತಿ ಮಾಡಿದ್ದಕ್ಕೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.
ಅಪ್ಪು ಫೋಟೊ ಮುಂದೆ ಶಾಂಪೇನ್ ಹಿಡಿದ ರಚಿತಾ ರಕ್ಷಿತಾ
ಕಾರ್ಯಕ್ರಮ ಆರಂಭದಲ್ಲಿ ಏಕ್ ಲವ್ ಯಾ ತಂಡದಿಂದ ಪುನೀತ್ ರಾಜ್‌ಕುಮಾರ್ ಫೋಟೊಗೆ ನಮನ ಸಲ್ಲಿಸಲಾಗಿತ್ತು. ಆದರೆ, ಅದೇ ಫೋಟೊ ಮುಂದೆ ವೇದಿಕೆಯಲ್ಲಿ ಶಾಂಪೇನ್ ಹಿಡಿದು ಸಂಭ್ರಮಿಸಿದ್ದಾರೆ. ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದ ಈ ವೇದಿಕೆ ಮೇಲೆ ನಿರ್ಮಾಪಕಿ ರಕ್ಷಿತಾ, ನಟಿ ರಚಿತಾ, ಎಣ್ಣೆ ಹಾಡು ಹಾಡಿದ ಮಂಗ್ಲಿ ಸೇರಿದಂತೆ ಮಹಿಳೆಯರು ಶಾಂಪೇನ್ ಹಿಡಿದ್ದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ಸಿಡಿದೆದ್ದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಕ್ಷಮೆ ಕೋರಿದ ರಕ್ಷಿತಾ
ಪುನೀತ್ ರಾಜ್‌ಕುಮಾರ್‌ಗೆ ಅವಮಾನ ಮಾಡಲಾಗಿದೆ. ಈ ಸಿನಿಮಾ ರಿಲೀಸ್ ಮಾಡಲು ಬಿಡಬಾರದು. ಇಡೀ ಚಿತ್ರತಂಡ ಬಹಿರಂಗವಾಗಿ ಕ್ಷಮೆ ಕೇಳಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅಪ್ಪು ಫ್ಯಾನ್ಸ್ ರಾಂಗ್ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡ ಏಕ್ ಲವ್ ಯಾ ಸಿನಿಮಾದ ನಿರ್ಮಾಪಕಿ ರಕ್ಷಿತಾ ಕ್ಷಮೆ ಕೋರಿದ್ದಾರೆ. "ಅಪ್ಪು ಅಗಲಿಕೆ ನೋವಿನಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಹಲವಾರು ವಿಷಯಗಳು ನನ್ನನ್ನು ಇನ್ನೂ ಕಾಡುತ್ತಿದೆ. ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮಾಡುವುದೂ ಇಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಧಾನ ಉಂಟಾಗಿದ್ದರೆ, ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆಯಾಚಿಸುತ್ತೇವೆ. ಇದು ಯಾವುದೂ ಉದ್ದೇಶಪೂರ್ವಕವಲ್ಲ. ಅಪ್ಪು ಇಂದಿಗೂ ಎಂದಿಗೂ ನಮ್ಮ ಮನಸಲ್ಲಿದ್ದಾರೆ." ಎಂದು ರಕ್ಷಿತಾ ಪೋಸ್ಟ್ ಮಾಡಿದ್ದಾರೆ.
'ಅದೇ ವೇದಿಕೆ ಮೇಲೆ ಕ್ಷಮೆ ಕೇಳಬೇಕು' ಸಾರಾ ಗೋವಿಂದು ಆಗ್ರಹ
"ಪುನೀತ್ ನಮನ ಕಾರ್ಯಕ್ರಮದ ಹಿನ್ನೆಲೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ವೇಳೆ ಏಕ್ ಲವ್ ಯಾ ತಂಡದಿಂದ ಅಪ್ಪುಗೆ ಅವಮಾನ ಮಾಡಲಾಗಿದೆ. ನಮ್ಮವರೇ ಹೀಗೆ ಅವಮಾನ ಮಾಡಿದರೆ ಹೇಗೆ? ಹೀಗಾಗಿ ಅದೇ ವೇದಿಕೆ ಮೇಲೆ ಏಕ್ ಲವ್ ಯಾ ತಂಡ ಕ್ಷಮೆ ಕೇಳಬೇಕು" ಎಂದು ನಿರ್ಮಾಪಕ ಸಾರಾ ಗೋವಿಂದು ಆಗ್ರಹಿಸಿದ್ದಾರೆ.