For Quick Alerts
  ALLOW NOTIFICATIONS  
  For Daily Alerts

  ಯಶ್‌ ಸಿನಿಮಾಗೆ ಎಂದು ಇಟ್ಟಿದ್ದ 'ರಾಣ' ಟೈಟಲ್ ಕೆ ಮಂಜು ಪುತ್ರನ ಪಾಲಾಗಿದ್ದೇಗೆ?

  |

  ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಜೋರಾಗಿದೆ. ಈ ಮಧ್ಯೆ ಹೊಸಬರ ಸಿನಿಮಾಗಳೂ ಕೂಡ ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ. ಇವುಗಳಲ್ಲಿ ಕೆಲವು ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗಮನ ಸೆಳೆಯದೇ ಹೋದರೂ, ಕನ್ನಡಿಗರ ಮನಗೆಲ್ಲುತ್ತಿವೆ.

  ಈ ವಾರ ಕೂಡ ಕನ್ನಡದಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಲ್ಲಿ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರೋ ಮೂರನೇ ಸಿನಿಮಾ 'ರಾಣ' ಕೂಡ ರಿಲೀಸ್‌ ಆಗುತ್ತಿದೆ. ಈಗಾಗೇ ಆಕ್ಷನ್ ಹಾಗೂ ಡ್ಯಾನ್ಸ್‌ನಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

  'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!

  ಆಕ್ಷನ್ ಹಾಗೂ ಡ್ಯಾನ್ಸ್ ಜೊತೆಗೆ 'ರಾಣ' ಟೈಟಲ್ ಕೂಡ ಗಮನ ಸೆಳೆಯುತ್ತಿದೆ. ಈ ಟೈಟಲ್ ಅಸಲಿಗೆ ರಾಕಿಂಗ್‌ ಸ್ಟಾರ್ ಯಶ್‌ ಸಿನಿಮಾಗೆ ಅಂತ ಫಿಕ್ಸ್ ಆಗಿತ್ತು. ಆದರೆ, ಅದೀಗ ಯಶ್ ಪುತ್ರ ಶ್ರೇಯಸ್ ಪಾಲಾಗಿದೆ. ಅಸಲಿಗೆ ಯಶ್‌ಗೆ ಯಾರು ಡೈರೆಕ್ಟ್ ಮಾಡಬೇಕಿತ್ತು? ಈ ಪವರ್‌ಫುಲ್ ಟೈಟಲ್ ಯಶ್ ಬಿಟ್ಟುಕೊಟ್ಟಿದ್ದೇಕೆ? ಅದು ರಾಣಾ ಕೈ ಸೇರಿದ್ದು ಹೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಯಶ್ ಸಿನಿಮಾಗೆ ಅಂತಿದ್ದ ಟೈಟಲ್ 'ರಾಣ'

  ಯಶ್ ಸಿನಿಮಾಗೆ ಅಂತಿದ್ದ ಟೈಟಲ್ 'ರಾಣ'

  ಅಸಲಿಗೆ 'ರಾಣ' ಅನ್ನೋ ಟೈಟಲ್ ಕನ್ನಡದ ಮತ್ತೊಬ್ಬ ನಿರ್ಮಾಪಕ ರಮೇಶ್ ಕಶ್ಯಪ್ ಅವರ ಬಳಿ ಇತ್ತು. ಈ ಟೈಟಲ್ ಇಟ್ಟು ಯಶ್ ಜೊತೆ ಸಿನಿಮಾ ಮಾಡಬೇಕು ಅಂದ್ಕೊಂಡಿದ್ದರು. ರಾಕಿಂಗ್‌ ಸ್ಟಾರ್‌ ಯಶ್‌ಗೆ 'ಭಜರಂಗಿ' ಖ್ಯಾತಿಯ ಎ ಹರ್ಷ ನಿರ್ದೇಶನ ಮಾಡಬೇಕಿತ್ತು. ಯಶ್ ಮ್ಯಾನರಿಸಂಗೆ ಈ ಟೈಟಲ್ ಸರಿ ಹೊಂದುವಂತೆಯೇ ಇತ್ತು. ಆದರೆ, ಅದ್ಯಾಕೋ ಸಿನಿಮಾ ಟೇಕಾಫ್‌ ಆಗಲಿಲ್ಲ. ಹೀಗಾಗಿ ರಮೇಶ್ ಕಶ್ಯಪ್ 'ರಾಣ' ಸಿನಿಮಾವನ್ನು ಅಲ್ಲಿಗೆ ಕೈ ಬಿಟ್ಟಿದ್ದರು. ಬಳಿಕ ಅದೇ ಟೈಟಲ್ ಅನ್ನು ನಿರ್ಮಾಪಕ ಕೆ ಮಂಜುಗೆ ಕೊಟ್ಟಿದ್ದರು.

  ದಿಲ್ ರಾಜುಗಾಗಿ ಮತ್ತೆ ಒಂದೇ ವೇದಿಕೆ ಏರುತ್ತಾರಾ ಯಶ್-ಸೂರ್ಯ?ದಿಲ್ ರಾಜುಗಾಗಿ ಮತ್ತೆ ಒಂದೇ ವೇದಿಕೆ ಏರುತ್ತಾರಾ ಯಶ್-ಸೂರ್ಯ?

  'ರಾಣ' ಕೆ ಮಂಜುಗೆ ಸಿಕ್ಕಿದ್ದೇಗೆ?

  'ರಾಣ' ಕೆ ಮಂಜುಗೆ ಸಿಕ್ಕಿದ್ದೇಗೆ?

  ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಮೂರನೇ ಸಿನಿಮಾವನ್ನು ಪುರುಷೋತ್ತಮ್ ನಿರ್ಮಾಣ ಮಾಡಲು ಮುಂದಾಗಿದ್ದರು. ನಂದ ಕಿಶೋರ್ ನಿರ್ದೇಶಕರು ಅಂತ ಫಿಕ್ಸ್ ಆಗಿದ್ದರು. ಆಗ ಪವರ್‌ಫುಲ್ ಟೈಟಲ್ ಇಡಬೇಕು ಅಂದುಕೊಂಡಿದ್ದರು. ಆಗಲೇ 'ರಾಣ' ಟೈಟಲ್ ಇಡಬೇಕು ಅಂದುಕೊಂಡಿದ್ದರು. ಅದು ರಮೇಶ್ ಕಶ್ಯಪ್ ಅವರ ಬಳಿ ಇತ್ತು. ಅವರಿಗೆ ಕೆ ಮಂಜು ಈ ಟೈಟಲ್ ತೆಗೆದುಕೊಂಡು ಮಗನ ಸಿನಿಮಾ ಇಟ್ಟಿದ್ದಾರೆ. ಒಂದ್ವೇಳೆ ಯಶ್ ಒಪ್ಪಿದ್ದರೆ, 'ರಾಣ' ಟೈಟಲ್ ಅವರ ಹೆಸರಿನಲ್ಲಿಇರುತ್ತಿತ್ತು.

  'ರಾಣ' ಪವರ್‌ಫುಲ್ ಟೈಟಲ್ ಯಾಕೆ?

  'ರಾಣ' ಪವರ್‌ಫುಲ್ ಟೈಟಲ್ ಯಾಕೆ?

  'ರಾಣ' ಅನ್ನೋ ಟೈಟಲ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಇತ್ತು. ಯಾಕಂದ್ರೆ, ಇದೊಂದು ಮಾಸ್‌ ಟೈಟಲ್. 'ರಾಣ' ಅಂತ ಕರೆದ ಕೂಡಲೇ ಒಂದು ಪವರ್ ಇದೆ ಅಂತ ಅನಿಸುತ್ತೆ. ಈ ಮಾತನ್ನೇ ನಟ ಶ್ರೇಯಸ್ ಕೂಡ ಹೇಳುತ್ತಾರೆ. "ರಾಣಾ ಅಂದ್ರೆ ವಾರಿಯರ್. ನಾನು ಮೊದಲ ರಾಣಾ ಅನ್ನೋ ಟೈಟಲ್ ಕೇಳಿದಾಗ, ಅದು ಏನು ಅಂತ ಕೇಳಿದ್ದೆ. ವಾರಿಯರ್ ಅಂತ ಹೇಳಿದ್ರು. ಅಂದ್ರೆ, ಎಲ್ಲರ ವಿರುದ್ಧ ನಿಂತು ಹೋರಾಡುವವನಿಗೆ ರಾಣಾ ಅನ್ನೋದು ಒಂದು ಹೆಸರು." ಎನ್ನುತ್ತಾರೆ.

  'ರಾಣ' ಪಕ್ಕಾ ಆಕ್ಷನ್ ಥ್ರಿಲ್ಲರ್

  'ರಾಣ' ಪಕ್ಕಾ ಆಕ್ಷನ್ ಥ್ರಿಲ್ಲರ್

  ಶ್ರೇಯಸ್ ಮಂಜು ಅಭಿನಯದ ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ನಂದ ಕಿಶೋರ್ ಡೈರೆಕ್ಷನ್ ಅಂದ್ಮೇಲೆ ಮಾಸ್ ಡೈಲಾಗ್, ಭರ್ಜರಿ ಆಕ್ಷನ್ ಅಂತೂ ಇದ್ದೇ ಇರುತ್ತೆ. ಈ ಕಾರಣಕ್ಕೆ ನವೆಂಬರ್ 11 ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ. 'ಏಕ್‌ಲವ್‌ಯಾ' ಸಿನಿಮಾದಲ್ಲಿ ನಟಿಸಿರೋ ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Initially Rana Title belongs to Yash Movie Later It Goes to K Manju Son Shreyas, Know More.
  Tuesday, November 8, 2022, 22:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X