PVR- INOXನಲ್ಲಿ ಕನ್ನಡದ ಸೂಪರ್ ಹಿಟ್ ಸಿನಿಮಾಗಳು ರೀ-ರಿಲೀಸ್.. ಟಿಕೆಟ್ ಬೆಲೆ ಎಷ್ಟು?

ಚುನಾವಣೆ, ಐಪಿಎಲ್ ಅಬ್ಬರದಲ್ಲಿ ಹೊಸ ಸಿನಿಮಾಗಳು ಬಿಡುಗಡೆ ಆಗುವುದೇ ಕಮ್ಮಿಯಾಗಿದೆ. ಹೀಗಾಗಿ ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ಗೆ ಸೆಳೆಯುವುದರೊಂದಿಗೆ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾಗಳ ಸಂಭ್ರಮಿಸಲು ಮುಂದಾಗಿದೆ.

ಪಿವಿಆರ್ ಹಾಗೂ ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಸಂಭ್ರಮಿಸಲಾಗುತ್ತಿದೆ. ಈ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಆದರೂ ಪಿವಿಆರ್ ಹಾಗೂ ಐನಾಕ್ಸ್​ ಚಿತ್ರಮಂದಿರಗಳಲ್ಲಿ ಶುಲ್ಕ ಹೆಚ್ಚು ಅನ್ನುವ ಆರೋಪ ಆಗಾಗ ಕೇಳಿಬರುತ್ತೆ.

Re releasing Kannada Blockbuster Movies here is the list

ಈಗ ಪಿವಿಆರ್ ಹಾಗೂ ಐನಾಕ್ಸ್ ಎರಡೂ ಮಲ್ಟಿಪ್ಲೆಕ್ಸ್‌ ಜಂಟಿಯಾಗಿ ಕನ್ನಡ ಸಿನಿ ಪ್ರಿಯರಿಗೆ ಬಂಪರ್ ಆಫರ್ ಕೊಟ್ಟಿದೆ. ಮೇ 19 ರಿಂದ 25ರವರೆಗೆ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ರೀ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ.

ಪಿವಿಆರ್ ಹಾಗೂ ಐನಾಕ್ಸ್ ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾಗಳ ಸಂಭ್ರಮಾಚರಣೆ ಮಾಡುವುದಕ್ಕೆ ಮುಂದಾಗಿದೆ. 'ಕನ್ನಡ ಸ್ಪೆಷಲ್' ಟೈಟಲ್‌ನಲ್ಲಿ ಸಿನಿಪ್ರಿಯರಿಗೆ ವಿಶೇಷ ಆಫರ್ ನೀಡಿದೆ.

Re releasing Kannada Blockbuster Movies here is the list

ಈ ಎರಡೂ ಮಲ್ಟಿಪ್ಲೆಕ್ಸ್ ಥಿಯೇಟರ್‌ ಚೈನ್‌ಗಳು ಬ್ಲಾಕ್ ಬಸ್ಟರ್ ಚಿತ್ರಗಳನ್ನು ರೀ ರಿಲೀಸ್ ಮಾಡುತ್ತಿವೆ. ಅದೂ ಕಡಿಮೆ ಬೆಲೆಯಲ್ಲಿ. ಕೇವಲ 99 ರೂಪಾಯಿಂದ ಟಿಕೆಟ್ ಆರಂಭ ಆಗಲಿದೆ. ಪಿವಿಆರ್ ಹಾಗೂ ಐನಾಕ್ಸ್ ರೀ ರಿಲೀಸ್ ಮಾಡುತ್ತಿರುವ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.

1. ರಾಜಕುಮಾರ
2. ಯಜಮಾನ
3. ಕೆಜಿಎಫ್-1
4. ಮಫ್ತಿ
5. ಮಾಸ್ಟರ್ ಪೀಸ್
6. ಗಂಧದಗುಡಿ
7. ಗರುಡ ಗಮನ ವೃಷಭ ವಾಹನ

ಯಾವ್ಯಾವ ಸಿನಿಮಾ ಯಾವಾಗ ರಿಲೀಸ್

ಪವರ್ ಸ್ಟಾರ್‌ ಪುನೀತ್ ರಾಜ್ ಕುಮಾರ್ ನಟನೆಯ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ 'ರಾಜಕುಮಾರ' ಶುಕ್ರವಾರ ಮೇ 19 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಸ್ಯಾಂಡಲ್‌ವುಡ್‌ನ ದಾಖಲೆಗಳನ್ನು ಉಡೀಸ್ ಮಾಡಿತ್ತು. ಶನಿವಾರ (ಮೇ 20) ದರ್ಶನ್ ನಟನೆಯ ಯಜಮಾನ ಪ್ರದರ್ಶನ ಆಗಲಿದೆ.

ಭಾನುವಾರ (ಮೇ 21) ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್ ಚಾಪ್ಟರ್ ೧', ಸೋಮವಾರ (ಮೇ 22) ಶಿವಣ್ಣ ಹಾಗೂ ಶ್ರೀಮುರಳಿ ನಟನೆಯ 'ಮಫ್ತಿ', ಮಂಗಳವಾರ (ಮೇ 23) ಯಶ್ ಅಭಿನಯದ 'ಮಾಸ್ಟರ್ ಪೀಸ್', ಬುಧವಾರ (ಮೇ 24) ಅಪ್ಪು ಡ್ರೀಮ್ ಪ್ರಾಜೆಕ್ಟ್ 'ಗಂಧದಗುಡಿ' ಪ್ರದರ್ಶನ ಆಗಲಿದೆ.

ಕೊನೆಯ ದಿನ ಅಂದರೆ, ಗುರುವಾರ (ಮೇ 25) ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಗರುಡ ಗಮನ ವೃಷಭ ವಾಹನ ಬಿಡುಗಡೆಯಾಗಲಿವೆ. ಈ ಮೂಲಕ ಒಂದು ವಾರಗಳ ಪಿವಿಆರ್ ಹಾಗೂ ಐನಾಕ್ಸ್ ಕನ್ನಡ ಬ್ಲಾಕ್ ಬಸ್ಟರ್ಸ್ ಸಿನಿಮಾಗಳ ಭರ್ಜರಿ ಪ್ರದರ್ಶನವಿರುತ್ತೆ.

More from Filmibeat

English summary
Inox and Pvr Re releasing Kannada Blockbuster Movies here is the list, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X