ಕಚ್ಚಾ ಬಾದಾಮ್ ಗಾಯಕ ಭುಬನ್ ಕನ್ನಡ ಸಿನಿಮಾದಲ್ಲಿ ಹಾಡಿದ್ದು ನಿಜವೇ?
ರಾತ್ರೊ ರಾತ್ರಿ ಇಂಟರ್‌ನೆಟ್‌ನಲ್ಲಿ ಕಚ್ಚಾ ಬಾದಾಮ್ ಹಾಡು ಸೆನ್ಸೇಷನ್ ಸೃಷ್ಟಿಸಿತ್ತು. ಈ ಹಾಡನ್ನು ದೇಶದ ಮೂಲೆ ಮೂಲೆಯಲ್ಲೂ ರಿಮೇಕ್ ಮಾಡಿ ಯುವಕ ಯುವತಿಯರು ಹೆಜ್ಜೆ ಹಾಕಿದ್ದರು. ಅದೇ ಸೆನ್ಸೇಷನಲ್ ಗಾಯಕ ಭಬನ್ ಕನ್ನಡ ಸಿನಿಮಾದಲ್ಲೂ ಹಾಡಿದ್ದಾರೆ ಎಂದು ಸದ್ದಿಯಾಗಿತ್ತು. ಕೆಲವು ದಿನಗಳಿಂದ ಪೋಸ್ಟರ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡಿತ್ತು.
ಕನ್ನಡ ಸಿನಿಮಾ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾದಲ್ಲಿ ಕಚ್ಚಾ ಬಾದಾಮ್ ಗಾಯಕ ಭುವನ್ ಹಾಡಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಕನ್ನಡ ಸಿನಿಮಾ ಹಾಡಿಲ್ಲ. ಬದಲಿಗೆ ಚಿತ್ರತಂಡವೇ ಕಚ್ಚಾ ಬಾದಾಮ್ ಗಾಯಕ ಧ್ವನಿ ಬಳಸಿ ಅದೇ ಮಾದರಿಯಲ್ಲೇ ಹಾಡೊಂದನ್ನು ಸಿದ್ಧ ಪಡಿಸಿದ ಪ್ರಚಾರಕ್ಕೆ ಬಳಸಿಕೊಂಡಿತ್ತು. ಅದೇ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
'ಗಜಾನನ ಅಂಡ್ ಗ್ಯಾಂಗ್' ಸಿನಿಮಾದಲ್ಲಿ ಯುವ ನಾಯಕ ನಟ ಶ್ರೀಮಹದೇವ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೂನ್ 3 ರಂದು ರಾಜ್ಯಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರೈಲರ್ ಹಾಗೂ ಹಾಡುಗಳಿಂದ ಈ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ನಿರ್ದೇಶಕ ಅಭಿಷೇಕ್ ಶೆಟ್ಟಿ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. "ಹೊಸತನದ ಹಂಬಲದಲ್ಲಿ ಚಿತ್ರತಂಡವಿದೆ. ಇದು ಎರಡು ವರ್ಷದ ಜರ್ನಿ. ಸಿನಿಮಾ ಸೂಪರ್ ಆಗಿದೆ. ಶೇ. 80ರಷ್ಟು ಸಿನಿಮಾಗಳನ್ನು ಮಾಡುತ್ತಿರುವವರು ನಮ್ಮಂತವರು. ಪ್ರೋತ್ಸಾಹ ಕೊಟ್ರೆ 20 ಇದ್ದಿದ್ದು40 ಆಗುತ್ತದೆ. ಪ್ರತಿಯೊಬ್ಬರು ಸಿನಿಮಾಗೆ ಸಪೋರ್ಟ್ ಮಾಡಿ." ಅಂತ ನಿರ್ದೇಶಕರು ಕೇಳಿಕೊಂಡಿದ್ದಾರೆ.
"ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಮಾಡಿದ್ದು ಒಂದು ಬ್ಯೂಟಿಫುಲ್ ಜರ್ನಿ. ಕಾಲೇಜ್ ಗ್ಯಾಂಗ್ ಸ್ಟೋರಿ ಬಂದು ಅದೆಷ್ಟೋ ವರ್ಷಗಳಾಗಿವೆ. ಮತ್ತೆ ಇಂತಹ ಸಿನಿಮಾ ನೋಡಬೇಕು ಎನ್ನುವವರಿಗೆ ಈ ಸಿನಿಮಾ ಖುಷಿಕೊಡುತ್ತೆ. ನಿರ್ಮಾಪಕರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ." ಎನ್ನುತ್ತಾರೆ ಅದಿತಿ ಪ್ರಭುದೇವ.

Recommended Video

ಶ್ರೀ ಮಹಾದೇವ್ ಸಿನಿಮಾಗಾಗಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರಂತೆ. ವಿಶೇಷ ಅಂದ್ರೆ ಈ ಸಿನಿಮಾ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ ಹಾಡೊಂದು ಮೂಡಿ ಬಂದಿದೆ. ಗಜಾನನ & ಗ್ಯಾಂಗ್' ಒಂದು ಕಾಲೇಜ್ ಲವ್ ಸ್ಟೋರಿ ಆಧಾರಿತ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಈ ಸಿನಿಮಾದಲ್ಲಿದೆ. ನಮ್ ಗಣಿ ಬಿಕಾಂ ಪಾಸ್' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಭಿಷೇಕ್ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾ ನಿರ್ದೇಶಿಸಿದ್ದಾರೆ. ಜೊತೆ ಚಿತ್ರದ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ.


Click it and Unblock the Notifications











