ಗಣೇಶ್ ಜೊತೆ ಸೇರಿ 'ಮುಂಗಾರು ಮಳೆ'ಯಲ್ಲಿ ಕಳೆದ ಹೋಗಿದ್ದೇನನ್ನೋ ಹುಡುಕ್ತಾ ಇದ್ದಾರಾ ರಮೇಶ್?
ಸುಮಾರು 18 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ದಿಕ್ಕನೇ ಬದಲಿಸಿದ ಸಿನಿಮಾ 'ಮುಂಗಾರು ಮಳೆ'. ಇನ್ನೇನು ಕನ್ನಡ ಚಿತ್ರರಂಗದ ಕತೆ ಮುಗಿದೇ ಹೋಯ್ತು ಅನ್ನುವ ವೇಳೆ ತೆರೆಕಂಡ 'ಮುಂಗಾರು ಮಳೆ' ಥಿಯೇಟರ್‌ಗಳಲ್ಲಿ ಒಂದು ವರ್ಷ ಸದ್ದು ಮಾಡಿತ್ತು. ಇಂದಿಗೂ ಆ ಸಿನಿಮಾ ಒಂದು ಸೀನ್ ಅನ್ನೂ ಕಣ್ಣಿಗೆ ಕಟ್ಟಿದಂತೆ ಹೇಳುವ ಸಿನಿಮಾ ಪ್ರೇಮಿಗಳು ಇದ್ದಾರೆ.
ಯೋಗರಾಜ್ ಭಟ್ ನಿರ್ದೇಶಿಸಿದ ಈ ಸಿನಿಮಾ ಸಿನಿಪ್ರಿಯರ ಫೇವರಿಟ್ ಸಿನಿಮಾ. ಈ ಸಿನಿಮಾ ಮೂಲಕ ಗಣೇಶ್ ಕನ್ನಡ ಚಿತ್ರರಂಗಕ್ಕೆ ಗೋಲ್ಡನ್ ಸ್ಟಾರ್ ಆಗಿ ಫೇಮಸ್ ಆದರು. ಅಲ್ಲಿವರೆಗೂ ರಮೇಶ್ ಅರವಿಂದ್‌ಗೆ ಇದ್ದ ತ್ಯಾಗರಾಜ ಅನ್ನೋ ಪಟ್ಟ ಗಣೇಶ್‌ಗೂ ಬಂದಿತ್ತು. ಬೆಳ್ಳಿ ಪರದೆ ಮೇಲೆ ಪ್ರೇಮ ತ್ಯಾಗ ಮಾಡಿದ ಈ ಇಬ್ಬರು ದಿಗ್ಗಜರು ಒಂದೇ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ.

ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಇಬ್ಬರೂ 'ಮುಂಗಾರು ಮಳೆ' ಸಿನಿಮಾದಲ್ಲಿ ಕಳೆದು ಹೋಗಿದ್ದು ಏನನ್ನೋ ಹುಡುಕುವುದಕ್ಕೆ ಹೊರಟಿದ್ದಾರೆ ಅಂತ ಸುದ್ದಿಯಾಗಿದೆ. ಸ್ವತ: ರಮೇಶ್ ಅರವಿಂದ್ ಅವರೇ ಶೇರ್ ಮಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಸಲಿಗೆ ಈ ವಿಡಿಯೋ ಗುಟ್ಟೇನು? ತಿಳಿಯಲು ಮುಂದೆ ಓದಿ.
ರಮೇಶ್ ಅರವಿಂದ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಕೆಲವೇ ಸೆಕೆಂಡುಗಳ ವಿಡಿಯೋ ಅದು. ಒಂದು ಮ್ಯಾನ್ ಹೋಲ್‌ನಲ್ಲಿ ರಮೇಶ್ ಅರವಿಂದ್ ಹಾಗೂ ಗಣೇಶ್ ಇಬ್ಬರೂ ಏನನ್ನೋ ಹುಡುಕುತ್ತಿರೋ ಹಾಗಿದೆ. ಆದರೆ, ಆ ವಿಡಿಯೋ ಇಬ್ಬರೂ ಜೊತೆಯಲ್ಲಿ ನಿಂತಿರುವ ವಿಡಿಯೋ ಅದು. ಆ ವಿಡಿಯೋಗೆ ನೆಟ್ಟಿಗರು 'ಮುಂಗಾರು ಮಳೆ'ಯಲ್ಲಿ ಕಳೆದು ಹೋಗಿದ್ದ ವಾಚ್ ಅನ್ನು ಇಬ್ಬರೂ ಸೇರಿ ಹುಡುಕುತ್ತಿದ್ದಾರೆ ಅಂತ ತಮಾಷೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಅಷ್ಟಕ್ಕೂ ಇದು ರಮೇಶ್ ಅರವಿಂದ್ ಹಾಗೂ ಗಣೇಶ್ ನಟಿಸುತ್ತಿರುವ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಸಿನಿಮಾದ ಮೇಕಿಂಗ್ ವಿಡಿಯೋ. ಸಿನಿಮಾ ಶೂಟಿಂಗ್ ವೇಳೆ ತೆಗೆದು ವಿಡಿಯೋ ತುಣುಕನ್ನು ರಮೇಶ್ ಅರವಿಂದ್ ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋಗೆ ಅವರ ಅಭಿಮಾನಿಗಳು ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವುಗಳನ್ನು ಓದುವುದಕ್ಕೆ ಮಜವಾಗಿದೆ.
"ಮಹನೀಯರೇ ಅಲ್ಲೇನು ಮಾಡುತ್ತಿದ್ದೀರಿ?" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಇಬ್ರು ಪ್ರೇಮತ್ಯಾಗರು.. ಪ್ರೇಮ ನಾ ಬೇರೆಯವರಿಗೆ ಬಿಟ್ಟು ಕೊಡೋದ್ರಲ್ಲಿ ನಿಪುಣರು" ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೊಬ್ಬರು "ಮುಂಗಾರು ಮಳೆ ವಾಚ್ ಹುಡುಕ್ತಿರಬೇಕು" ಅಂತ ಕಾಮೆಂಟ್ ಮಾಡಿದ್ದಾರೆ. ಹಾಗೇ "ರಮೇಶ್ ಅರವಿಂದ ಮುಂಗಾರು ಮಳೆಯಲ್ಲಿ ಕಳೆದ ಹೋದ ವಾಚ್ ಹುಡುಕುತ್ತಿರಬಹುದು" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ "ರಮೇಶ್ ಸರ್ ಇನ್ನೂ ಕ್ಯಾರೆಕ್ಟರ್ ಇಂದ ಆಚೆ ಬಂದಿಲ್ಲ ಅನಿಸುತ್ತೆ" ಎಂದು ಹೇಳಿದ್ದಾರೆ.
ಅಂದ್ಹಾಗೆ, ಸದ್ಯ ರಮೇಶ್ ಅರವಿಂದ್ ಹಾಗೂ ಗಣೇಶ್ ಇಬ್ಬರೂ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿವರೆಗೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ವಿಖ್ಯಾತ್ ಈ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ಈಗಾಗಲೇ ಸಿನಿಮಾ ಟ್ರೈಟಲ್ ರಿವೀಲ್ ಮಾಡುವ ವೇಳೆ ತುಣುಕುಗಳನ್ನು ಹೊರ ಬಿಟ್ಟಿದ್ದರು. ಅದೇ ಸಿನಿಮಾದ ಶೂಟಿಂಗ್ ವೇಳೆ ತೆಗೆದ ಒಂದು ವಿಡಿಯೋ ಇದು.


Click it and Unblock the Notifications











