'ಪುಷ್ಪ 2' ಸಿನಿಮಾದ ಪೀಲಿಂಗ್ಸ್ ಸಾಂಗ್ ಕನ್ನಡದ ಅಣ್ಣಮ್ಮದೇವಿ ಕದ್ದಿದ್ದಾ? ಕಾಪಿ ಮಾಡಿದರೇ ಡಿಎಸ್‌ಪಿ?

ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ಎಷ್ಟು ಸದ್ದು ಮಾಡುತ್ತಿದೆಯೋ? ಹಾಗೇ ವಿವಾದದಿಂದಲೂ ಸದ್ದು ಮಾಡುತ್ತಿದೆ. ಒಂದಲ್ಲ ಒಂದು ವಿವಾದಗಳು ಗದ್ದಲ ಎಬ್ಬಿಸಿದೆ. 'ಕೆಜಿಎಫ್ 2' ಮುಂದಿಟ್ಟುಕೊಂಡು ಟೀಕೆಗಳನ್ನು ಮಾಡುತ್ತಿದ್ದ 'ಪುಷ್ಪ 2' ತಂಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಬಿಡುಗಡೆವರೆಗೂ ಯಶ್ ಸಿನಿಮಾದ ದಾಖಲೆಯನ್ನು ಹಿಂದಿಕ್ಕುವುದೇ ತನ್ನ ಗುರಿ ಎನ್ನುವಂತೆ ತಂಡ ಹೇಳಿಕೆಗಳನ್ನು ನೀಡುತ್ತಿತ್ತು.

ಇನ್ನು ಬಿಡುಗಡೆ ವೇಳೆ ಅಲ್ಲು ಅರ್ಜುನ್ ತಮಿಳುನಾಡು, ಕೇರಳದಲ್ಲೆಲ್ಲ ಪ್ರಚಾರ ಮಾಡಿ ಬಂದಿದ್ದರು. ಆದರೆ, ಕರ್ನಾಟಕದಲ್ಲಿ ಮಾತ್ರ ಪ್ರಿ-ರಿಲೀಸ್ ಇವೆಂಟ್ ಮಾಡಿರಲಿಲ್ಲ. ಇದೂ ಕೂಡ ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಬೇರೆ ಎಲ್ಲಾ ಕಡೆಗೂ ಹೋಗಿ ಸಿನಿಮಾ ಪ್ರಚಾರ ಮಾಡಿದವರು ಕರ್ನಾಟಕಕ್ಕೆ ಮಾತ್ರ ಬಂದಿರಲಿಲ್ಲ.

Is Allu Arjun Pushpa 2 Peelings track copy of Kannada devotional Annamma Devi song

ಈಗ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಅಣ್ಣಮ್ಮ ದೇವಿ ಸಾಂಗ್ ಅನ್ನು 'ಪುಷ್ಪ 2' ಸಂಗೀತ ನಿರ್ದೇಶಕ ಕದ್ದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಕೆಲವು ದಿನಗಳಿಂದ ಒಂದು ವಿಡಿಯೋ ಹರಿದಾಡುತ್ತಿದ್ದು, 'ಪುಷ್ಪ 2' ಸಿನಿಮಾ ಪೀಲಿಂಗ್ಸ್ ಸಾಂಗ್ ಅನ್ನು ಅಣ್ಣಮ್ಮ ದೇವಿ ಸಾಂಗ್‌ನಿಂದ ಕದ್ದು ಮಾಡಿದ್ದಾರೆ ಅನ್ನೋ ಮಾತು ಓಡಾಡುತ್ತಿದೆ. ಅಷ್ಟಕ್ಕೂ ತೆಲುಗಿನ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅಣ್ಣಮ್ಮದೇವಿ ಸಾಂಗ್ ಕದ್ದಿದ್ದಾರೆಯೇ ಆ ಹಾಡು ಯಾವುದು? ವಿಡಿಯೋ ನೋಡಲು ಮುಂದೆ ಓದಿ.

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅಣ್ಣದೇವಿ ಸಾಂಗ್ ತುಂಬಾನೇ ಫೇಮಸ್. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಅಣ್ಣಮ್ಮದೇವಿ ಹಾಡು ಕೇಳಿವುದಕ್ಕೆ ಸಿಗುತ್ತೆ. ಅಣ್ಣಮ್ಮ ದೇವಿ ಉತ್ಸವದಲ್ಲಿ ಜನರು ಮೈ ಮರೆತು ದೇವಿಯ ಹಾಡಿಗೆ ಕುಣಿಯುತ್ತಾರೆ. ಅಣ್ಣಮ್ಮ ದೇವಿ ಉತ್ಸವದಲ್ಲಿ ಎಲ್ಲಾ ಭಾಷೆಯ ಜನರು ಈ ಹಾಡಿಗೆ ಹಲವು ವರ್ಷಗಳಿಂದ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಅಣ್ಣದೇವಿ ಸಾಂಗ್‌ಗೆ ಜನರಲ್ಲಿ ವಿಶೇಷ ಸ್ಥಾನವಿದೆ.

ಇಂತಹ ಭಕ್ತಿ ಪ್ರಧಾನ ಗೀತೆಯನ್ನು ಚೂರು ಪಾರು ಬದಲಾವಣೆ ಮಾಡಿ, 'ಪುಷ್ಪ 2' ಸಿನಿಮಾದಲ್ಲಿ ಫಿಲಿಂಗ್ಸ್ ಸಾಂಗ್ ಅನ್ನು ರೊಮ್ಯಾಂಟಿಕ್ "ಫಿಲಿಂಗ್ಸ್" ಸಾಂಗ್ ಆಗಿ ಪರಿವರ್ತಿಸಲಾಗಿದೆ. ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಾದ ಮಾಡುತ್ತಿದ್ದಾರೆ. ಎರಡೂ ಹಾಡುಗಳನ್ನು ಹೋಲಿಕೆ ಮಾಡಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ 'ಪುಷ್ಪ 2' ಸಿನಿಮಾದ "ಪೀಲಿಂಗ್ಸ್.." ಸಾಂಗ್‌ಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ತೆಲುಗಿನ ರಾಕ್‌ ಸ್ಟಾರ್ ದೇವಿ ಶ್ರೀ ಪ್ರಸಾದ್ ಕಂಪೋಸ್ ಮಾಡಿರುವ ಈ ಹಾಡು ವೀಕ್ಷಕರಿಗೆ ಕಿಕ್ ಕೊಟ್ಟಿದೆ. ಥಿಯೇಟರ್‌ನಲ್ಲಿ ಎಂಜಾಯ್ ಕೂಡ ಮಾಡುತ್ತಿದ್ದಾರೆ. ಆದರೆ, ಸಿನಿಮಾ ರಿಲೀಸ್ ಆದ ಬಳಿಕ ಕನ್ನಡಿಗರು "ಅಣ್ಣಮ್ಮ ದೇವಿಯ ಗುಡಿಗೆ ಬನ್ನಿ.." ಹಾಡಿನ ಪ್ರೇರಣೆಯಿಂದಲೇ "ಪೀಲಿಂಗ್ಸ್" ಸಾಂಗ್ ಮಾಡಿದ್ದಾರೆಂದು ಹೇಳುತ್ತಿದ್ದಾರೆ.

ನೆಟ್ಟಿಗರು ಈ ಹಾಡನ್ನು ನೋಡಿ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ದೇವರ ಹಾಡನ್ನು ಬಿಡಲ್ವಲ್ಲೋ.. ಏನ್ರೋ ಬಂದಿರೋದು ನಿಮಗೆ", "ಅದ್ಯಾವ ರೇಂಜ್‌ಗೆ ಹುಡುಕಿದ್ದೀಯಾ ಗುರು ನೀನು", "ಕನ್ನಡದ್ದೇ ಒರಿಜಿನಲ್ ಸಾಂಗ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು " ಪುಷ್ಪ ಸಿನಿಮಾ ಕಮ್ಯೂನಿಟಿಯನ್ನು ನಾಶ ಮಾಡಿಬಿಟ್ಟೆ" ಎಂದು ಕಾಮೆಂಟ್ ಮಾಡಿದ್ದಾರೆ. "ತಮ್ಮ ಬತ್ತಳಿಕೆ ಮುಗಿದು ಕನ್ನಡದ ಹಳೆಯ ಹಾಡು ಕದ್ದು ಹೊಸ ಪದ ಮಾಡಿದ್ದಾರೆ" ಎಂದೆಲ್ಲ ಬರೆದಿದ್ದಾರೆ.

More from Filmibeat

English summary
Is Allu Arjun Pushpa 2 Peelings track copy of Kannada devotional Annamma Devi song;
Read more about: allu arjun pushpa 2 copycat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X