ಪರಭಾಷೆಯ ಸಿನಿಮಾಗಳಿಂದ 'ಭೈರತಿ ರಣಗಲ್'ಗೆ ಅನ್ಯಾಯ ಆಯಿತೇ? ಅಂದುಕೊಂಡಷ್ಟು ಸ್ಕ್ರೀನ್ ಸಿಗಲಿಲ್ಲವೇ?
ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಇರುವ ಸಮಸ್ಯೆ ಇನ್ನೂ ಸಮಸ್ಯೆ ಆಗಿಯೇ ಉಳಿದುಕೊಂಡಿದೆ. ಕನ್ನಡ ಸಿನಿಮಾಗಳಿಗೆ ಸಿಗಬೇಕಿದ್ದ ಸ್ಕ್ರೀನ್‌ಗಳು ಪರಭಾಷೆಯ ಸಿನಿಮಾಗಳ ಪಾಲಾಗುತ್ತವೆ ಅನ್ನೋ ಆರೋಪವಿದೆ. ಕಳೆದ ಒಂದೂವರೆ ದಶಕದಿಂದ ಕನ್ನಡ ಸಿನಿಮಾ ಮಂದಿಯ ಎದುರು ಇರುವ ಸಮಸ್ಯೆಗಳಲ್ಲಿ ಇದೂ ಒಂದು. ಈ ಸಮಸ್ಯೆ ಶಿವಣ್ಣನ ಸಿನಿಮಾಗಳನ್ನು ಕಾಡಿತೇ?
'ಭೈರತಿ ರಣಗಲ್' ರಿಲೀಸ್ ಬಳಿಕ ಇಂತಹದ್ದೊಂದು ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮತ್ತೆ ಕನ್ನಡ ಸಿನಿಮಾಗೆ ಅನ್ಯಾಯ ಆಗಿದೆ ಎಂದು ಧ್ವನಿ ಎತ್ತುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ಹೆಚ್ಚು ಸ್ಕ್ರೀನ್‌ಗಳನ್ನು ಕಬಳಿಸಿವೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಹಳ ದಿನಗಳ ಬಳಿಕ ಮತ್ತೆ ಇಂತಹದ್ದೊಂದು ಚರ್ಚೆ ಶುರುವಾಗಿದೆ.

ಅಂದ್ಹಾಗೆ 'ಭೈರತಿ ರಣಗಲ್' ಶಿವರಾಜ್‌ಕುಮಾರ್ ಹೋಮ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣ ಆಗಿರುವ ಸಿನಿಮಾ. ಗೀತಾ ಆರ್ಟ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇಂತಹ ದೊಡ್ಡ ನಟನಿಗೆ ಹೆಚ್ಚು ಸ್ಕ್ರೀನ್‌ಗಳು ಸಿಕ್ಕಿಲ್ಲ ಅನ್ನೋದು ನೆಟ್ಟಿಗರು ಆಕ್ರೋಶ. ಅಸಲಿಗೆ ಭೈರತಿ ರಣಗಲ್‌ಗೆ ಸಿಕ್ಕ ಸ್ಕ್ರೀನ್‌ಗಳೆಷ್ಟು? ಕಂಗುವ, ಗ್ಲಾಡಿಯೇಟರ್ 2, ಅಮರನ್, ಮಟ್ಕ ಸಿನಿಮಾಗಳಿಗೆ ಸ್ಕ್ರೀನ್ ಸ್ಕ್ರೀನ್‌ಗಳೆಷ್ಟು? ತಿಳಿಯಲು ಮುಂದೆ ಓದಿ.
'ಭೈರತಿ ರಣಗಲ್' ಸಿಕ್ಕಿದ ಸ್ಕ್ರೀನ್‌ಗಳೆಷ್ಟು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭೈರತಿ ರಣಗಲ್'ಗೆ ಹೆಚ್ಚು ಸ್ಕ್ರೀನ್‌ಗಳು ಸಿಗಬೇಕಿತ್ತು ಅನ್ನೋದು ನೆಟ್ಟಿಗರ ವಾದ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಸ್ಕ್ರೀನ್‌ಗಳು ಸಿಗುವುದಿಲ್ಲ ಅನ್ನುವ ಆರೋಪ ಮತ್ತೆ ಕೇಳಿ ಬರುತ್ತಿದೆ. ಶಿವಣ್ಣನ ಸಿನಿಮಾಗೆ ಕರ್ನಾಟಕದಲ್ಲಿ 372 ಸ್ಕ್ರೀನ್‌ಗಳು ಸಿಕ್ಕಿವೆ ಅನ್ನೋದು ಸದ್ಯದ ಲೆಕ್ಕ. ಜಾಸ್ತಿನೂ ಇರುಬಹುದು. ಇಲ್ಲವೇ ಕಮ್ಮಿನೂ ಇರಬಹುದು.
ಪರಭಾಷೆಯ ಸಿನಿಮಾಗಳಿಗೆಷ್ಟು ಸ್ಕ್ರೀನ್?
'ಭೈರತಿ ರಣಗಲ್'ಗೂ ಮುನ್ನ ತೆಲುಗು, ತಮಿಳು ಹಾಗೂ ಹಾಲಿವುಡ್ ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಸೂರ್ಯಾ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಂಗುವ'ಗೆ ಕರ್ನಾಟಕದಲ್ಲಿ 468 ಸ್ಕ್ರೀನ್‌ಗಳು ಸಿಕ್ಕಿವೆ ಅನ್ನೋದು ನೆಟ್ಟಿಗರ ವಾದ. ಹಾಗೇ ಹಾಲಿವುಡ್ ಸಿನಿಮಾ 'ಗ್ಲಾಡಿಯೆಟರ್ 2'ಗೆ 208 ಸ್ಕ್ರೀನ್, ಶಿವಕಾರ್ತಿಕೇಯನ್ ಸಿನಿಮಾ 'ಅಮರನ್' 205 ಸ್ಕ್ರೀನ್ ಹಾಗೂ ತೆಲುಗು ಸಿನಿಮಾ ಮಟ್ಕ 119 ಸ್ಕ್ರೀನ್ ಸಿಕ್ಕಿದೆ ಎಂದು ಅಂಕಿ ಅಂಶಗಳನ್ನು ಹಂಚಿಕೊಂಡಿದ್ದಾರೆ.

'ಭೈರತಿ ರಣಗಲ್' ತಂಡದ ನಿಲುವೇನು?
ತಮಗೆ ಕಡಿಮೆ ಸ್ಕ್ರೀನ್ ಸಿಕ್ಕಿದೆ ಎಂದು 'ಭೈರತಿ ರಣಗಲ್' ತಂಡ ಇದೂವರೆಗೂ ಎಲ್ಲೂ ಹೇಳಿಕೊಂಡಿಲ್ಲ. ಬಹುಶ: ಶಿವಣ್ಣನ ಸಿನಿಮಾ 372 ಸ್ಕ್ರೀನ್‌ಗಳು ಸಾಕು ಎನಿಸಿರಬೇಕು. ಇಲ್ಲವೇ ಇದಕ್ಕಿಂತ ಹೆಚ್ಚು ಸ್ಕ್ರೀನ್‌ಗಳು ಸಿಕ್ಕಿರಬಹುದು. ಕೆಲವೊಮ್ಮೆ ಮೊದಲ ವಾರ ಕಡಿಮೆ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಿ, ಸಿನಿಮಾಗೆ ಸಿಗುವ ರೆಸ್ಪಾನ್ಸ್ ನೋಡಿಕೊಂಡು ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚು ಮಾಡುವ ಸಾಧ್ಯತೆಯಿದೆ.
ಮುಂದಿನ ವಾರ ಹೆಚ್ಚಾಗುತ್ತಾ?
'ಭೈರತಿ ರಣಗಲ್' ಸಿನಿಮಾಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಬಗ್ಗೆನೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಮುಂದಿನ ವಾರ 'ಭೈರತಿ ರಣಗಲ್' ಸಿನಿಮಾದ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ವಾರ ಸಿನಿಮಾ ಸ್ಕ್ರೀನ್‌ಗಳು ಹೆಚ್ಚಾಗುತ್ತಾ? ಅನ್ನೋದನ್ನು ನೋಡಬೇಕಿದೆ.


Click it and Unblock the Notifications











