For Quick Alerts
  ALLOW NOTIFICATIONS  
  For Daily Alerts

  'ಕಾಂತಾರ 2' ಬರುತ್ತಾ? ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಕೊಟ್ಟ ಸುಳಿವುಗಳೇನು?

  |

  ಸ್ಯಾಂಡಲ್‌ವುಡ್‌ನ ಲೇಟೆಸ್ಟ್ ಬ್ಲಾಕ್‌ಬಸ್ಟರ್ 'ಕಾಂತಾರ'. ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ ಬಳಿಕ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಈಗಾಗಲೇ 'ಕಾಂತಾರ' ಬಿಡುಗಡೆಯಾಗಿ ಇಂದಿಗೆ (ಅಕ್ಟೋಬರ್ 13) 14 ದಿನಗಳಾಗಿವೆ. ಆದರೂ, ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಅಬ್ಬರಿಸೋಕೆ ಸಾಧ್ಯವಾಗಿಲ್ಲ.

  'ಕಾಂತಾರ' ಬಿಡುಗಡೆಯಾದ ಬಹುತೇಕ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರತಿಯೊಂದು ಶೋಗಳೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಹಲವು ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದೆ.

  'ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್‌ಟಿಆರ್.. ಯಾಕಂದ್ರೆ ಅವರ ಅಮ್ಮನ ಊರು ನನ್ನೂರು'-ರಿಷಬ್ ಶೆಟ್ಟಿ!'ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್‌ಟಿಆರ್.. ಯಾಕಂದ್ರೆ ಅವರ ಅಮ್ಮನ ಊರು ನನ್ನೂರು'-ರಿಷಬ್ ಶೆಟ್ಟಿ!

  ಕನ್ನಡಿಗರಷ್ಟೇ ಅಲ್ಲ. ತೆಲುಗು, ತಮಿಳು, ಹಿಂದಿ ಸೇರಿದಂತೆ ಮಲಯಾಳಂ ಭಾಷೆಯ ಸಿನಿಪ್ರಿಯರೂ ಕೂಡ ಈ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಈ ಮಟ್ಟಿಗೆ ಸದ್ದು ಮಾಡುತ್ತಿರಬೇಕಾದರೆ, 'ಕಾಂತಾರ 2' ಬರುತ್ತಾ? ಅನ್ನೋ ಪ್ರಶ್ನೆ ಕಾಡದೆ ಇರೋದಿಲ್ಲ. ಅಸಲಿಗೆ ಸಿನಿಮಾ ನೋಡಿದವರಿಗೆ 'ಕಾಂತಾರ' ಸೀಕ್ವೆಲ್ ಬಗ್ಗೆ ಚಿತ್ರತಂಡ ಹಲವು ಸುಳಿವುಗಳನ್ನು ನೀಡಿದೆ. ಅಸಲಿಗೆ ಆ ಸುಳಿವುಗಳೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಕಾಂತಾರ 2' ಬರುತ್ತಾ?

  'ಕಾಂತಾರ 2' ಬರುತ್ತಾ?

  'ಕಾಂತಾರ' ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಕನ್ನಡದ ಮತ್ತೊಂದು ಸಿನಿಮಾ ದೇಶದೆಲ್ಲೆಡೆ ಸದ್ದು ಮಾಡುತ್ತಿರುವುದು ಹೆಮ್ಮೆ ಎನಿಸಿದೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನ ಎರಡಕ್ಕೂ ಅದೆಷ್ಟು ಮಂದಿ, ಅದೆಷ್ಟು ಬಾರಿ ಬಹುಪರಾಕ್ ಹೇಳಿದ್ದಾರೋ ಗೊತ್ತಿಲ್ಲ. ಒಂದ್ಕಡೆ ಸಿನಿಮಾ ಈ ಮಟ್ಟಿಗೆ ಯಶಸ್ಸು ಕಾಣುತ್ತಿರುವಾಗಲೇ 'ಕಾಂತಾರ 2' ಬರಬಹುದಾ? ಅನ್ನೋ ಪ್ರಶ್ನೆನೂ ಕಾಡುತ್ತಿದೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಈ ಬಗ್ಗೆ ಕೆಲವು ಸುಳಿವುಗಳನ್ನು ಸಿನಿಮಾ ತಂಡ ಕೊಟ್ಟಿದೆ.

  ನಾಯಕಿ ಪ್ರೆಗ್ನೆಂಟ್

  ನಾಯಕಿ ಪ್ರೆಗ್ನೆಂಟ್

  ಇನ್ನೇನು ಸಿನಿಮಾ ಮುಗೀತು ಅನ್ನುವಾಗಲೇ ರಿಷಬ್ ಶೆಟ್ಟಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ. 'ಕಾಂತಾರ' ಕೊನೆಯಲ್ಲಿ ಶಿವನ ಪತ್ನಿ ಗರ್ಭಿಣಿಯಾಗಿರುವುದನ್ನು ತೋರಿಸುತ್ತಾರೆ. ಇಲ್ಲಿಂದ 'ಕಾಂತಾರ 2'ಗೆ ಲೀಡ್‌ ಕೊಡುವಂತಹ ಒಂದಿಷ್ಟು ಸೀನ್‌ಗಳು ಪ್ರೇಕ್ಷಕರಿಗೆ ಎದುರಾಗುತ್ತಲೇ ಇರುತ್ತೆ. ಆ ಸೀನ್‌ಗಳಲ್ಲಿ ಮೊದಲ ಸುಳಿವು ಶಿವ ಹೆಂಡತಿ ಲೀಲಾ.

  ಶಿವ ಹೋದಲ್ಲೆಲ್ಲಿಗೆ?

  ಶಿವ ಹೋದಲ್ಲೆಲ್ಲಿಗೆ?

  ರಿಷಬ್ ಶೆಟ್ಟಿ ಬೇರೆ ಬೇರೆ ಕಾಲಘಟ್ಟದಲ್ಲಿ ಎರಡೆರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ಹಾಗೂ ಮಗನಾಗಿ ಕಾಣಿಸಿಕೊಳ್ಳುವ ರಿಷಬ್ ಶೆಟ್ಟಿ ಸಿನಿಮಾದಲ್ಲಿ ಏನಾದರು ಅನ್ನೋ ಕುತೂಹಲವಿದೆ. ಕ್ಲೈಮ್ಯಾಕ್ಸ್ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲದಿದ್ದರೂ, 'ಕಾಂತಾರ' ಸೀಕ್ವೆಲ್‌ಗೆ ರಿಷಬ್ ಶೆಟ್ಟಿ ಪಾತ್ರ ಸುಳಿವನ್ನು ನೀಡುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ಸೋಲೋ ಪರ್ಫಾಮೆನ್ಸ್ ನೀಡಿ ಮೆಚ್ಚುಗೆ ಗಳಿಸುವ ರಿಷಬ್ ಸೀಕ್ವೆಲ್‌ಗೆ ಬೇಕಾದ ಎಲ್ಲಾ ಸುಳಿವುಗಳನ್ನೂ ನೀಡಿದ್ದಾರೆ.

  'ಕಾಂತಾರ 2'ಗೆ ಶಿವ ಮಗ ಎಂಟ್ರಿ?

  'ಕಾಂತಾರ 2'ಗೆ ಶಿವ ಮಗ ಎಂಟ್ರಿ?

  ಅಪ್ಪನಿಂದ ಮಗನಿಗೆ.. ಮಗನಿಂದ ಮೊಮ್ಮ.. ಹೀಗೆ 'ಕಾಂತಾರ' ಪರಂಪರೆ ಮುಂದುವರೆಯುತ್ತೆ ಅನ್ನೋದು ಸ್ಪಷ್ಟವಾಗಿ ಸಿನಿಮಾದಲ್ಲಿ ಹೇಳಲಾಗಿದೆ. ಹೀಗಾಗಿ 'ಕಾಂತಾರ 2'ಗೆ ಶಿವನ ಮಗ ಸಾರಥ್ಯವಿರುತ್ತಾ? ಅನ್ನೋದು ಕೇವಲ ಗೆಸ್ಸಿಂಗ್ ಅಷ್ಟೇ. ಆದರೆ, ಈ ಆಲೋಚನೆಯನ್ನು ತಳ್ಳಿ ಹಾಕುವಂತಿಲ್ಲ.

  ಕೆಲವು ಪಾತ್ರಗಳಿಗೆ ಇನ್ನೂ ಜೀವವಿದೆ

  ಕೆಲವು ಪಾತ್ರಗಳಿಗೆ ಇನ್ನೂ ಜೀವವಿದೆ

  'ಕಾಂತಾರ'ದಲ್ಲಿ ಹಲವು ಪ್ರಮುಖ ಪಾತ್ರಗಳಿವೆ. ಅದರಲ್ಲಿ ಫಾರೆಸ್ಟ್ ಆಫೀಸರ್ ಕಿಶೋರ್‌, ರಿಷಬ್ ಶೆಟ್ಟಿ ಸ್ನೇಹಿತರು, ಊರಿನ ಮುಖಂಡರ ಪಾತ್ರಗಳು ಹಾಗೇ ಮುಂದುವರೆಯಬಹುದು. ಇನ್ನುಹೊಸ ವಿಲನ್ ಎಂಟ್ರಿ ಕೊಡಬಹುದು. ಊರಿನ ಸ್ವರೂಪ ಬದಲಾಗಬಹುದು ಅಷ್ಟೇ. ಆದರೆ, 'ಕಾಂತಾರ' ಸಕ್ಸಸ್ ಹಾಗೂ ಬೇರೆ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುತ್ತಿರುವುದರಿಂದ 'ಕಾಂತಾರ' ಸೀಕ್ವೆಲ್ ಬರುತ್ತೆ ಅನ್ನೋದು ಕನ್ಫರ್ಮ್. ಆದರೆ, ಯಾವಾಗ ಅನ್ನೋದು 'ಕೆಜಿಎಫ್ 3'ಯಷ್ಟೇ ಕುತೂಹಲ.

  'ಕಾಂತಾರ'ದ 'ವರಹ ರೂಪಂ' ಹಾಡು ಕದ್ದಿದ್ದು: ಮಲಯಾಳಂ ಸಾಂಗ್ ಸಾಕ್ಷಿ ಎಂದ ನೆಟ್ಟಿಗರು!'ಕಾಂತಾರ'ದ 'ವರಹ ರೂಪಂ' ಹಾಡು ಕದ್ದಿದ್ದು: ಮಲಯಾಳಂ ಸಾಂಗ್ ಸಾಕ್ಷಿ ಎಂದ ನೆಟ್ಟಿಗರು!

  English summary
  Is Kantara Sequel On Cards Here is the Possibility After Became Blockbuster, Know More.
  Friday, October 14, 2022, 9:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X