ಇದು ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ಆಗುತ್ತಾ?
'ಕೃಷ್ಣಂ ಪ್ರಣಯ ಸಖಿ' ಅಂತಹ ಹಿಟ್ ಸಿನಿಮಾ ಕೊಟ್ಟ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಸಿನಿಮಾವನ್ನು ಎದುರು ನೋಡುತ್ತಿದ್ದರು. ತೆಲುಗಿನ ನಿರ್ಮಾಣ ಸಂಸ್ಥೆ ಗಣೇಶ್‌ಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಈಗಾಗಲೇ ಅನೌನ್ಸ್ ಮಾಡಿದೆ. ನಿರ್ಮಾಣ ಸಂಸ್ಥೆ ಬಿಟ್ಟುಕೊಡುತ್ತಿರುವ ಒಂದೊಂದು ಸುಳಿವು ನೋಡಿದರೆ, ಇದು ಗೋಲ್ಡನ್ ಸ್ಟಾರ್‌ನ ಮೊದಲ ಪೌರಾಣಿಕ ಸಿನಿಮಾ ಆಗಬಹುದಾ? ಅನ್ನೋ ಅನುಮಾನ ಹುಟ್ಟುತ್ತಿದೆ.
ಇನ್ನು ಎರಡೇ ದಿನಗಳಲ್ಲಿ ಅದಕ್ಕೂ ಕ್ಲಾರಿಟಿ ಸಿಗಲಿದೆ. ತೆಲುಗಿನ ನಿರ್ಮಾಪಕಟಿಜಿ ವಿಶ್ವ ಪ್ರಸಾದ್ ಅವರ ಪೀಪಲ್ ಮೀಡಿಯಾ ಫ್ಯಾಕ್ಟರಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ. ಈ ಸಂಸ್ಥೆ ಗಣೇಶ್‌ಗೆ ತನ್ನ 49ನೇ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಹೀಗಾಗಿ ಇದೊಂದು ಬಿಗ್ ಬಜೆಟ್ ಸಿನಿಮಾ ಆಗಬಹುದ ಅನ್ನೋ ನಿರೀಕ್ಷೆ ಹುಟ್ಟಿಸಿದೆ.

ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಣ ಸಂಸ್ಥೆ ರಿಲೀಸ್ ಮಾಡಿರುವ ಅನೌನ್ಸ್‌ಮೆಂಟ್ ಪೋಸ್ಟರ್ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂಸ್ಥೆ ಮತ್ತೊಂದು ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಟೈಟಲ್ ಅನೌನ್ಸ್‌ಮೆಂಟ್ ಪೋಸ್ಟರ್‌ನಲ್ಲಿರುವ ತ್ರಿಶೂಲ.
ಹೌದು, ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಸಂಸ್ಥೆ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದು ತನ್ನ 49ನೇ ಪ್ರಾಜೆಕ್ಟ್‌ನ 'ರೇಜ್ ಆಫ್ ರುದ್ರ' ಪೋಸ್ಟರ್ ರಿವೀಲ್ ಮಾಡಿದೆ. ಟಾಲಿವುಡ್‌ನಲ್ಲಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಈಗಾಗಲೇ ಹಲವು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದೆ. ಈಗ ಬಹು ನಿರೀಕ್ಷೆ ಹುಟ್ಟಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟಾಕುವುದಕ್ಕೆ ಮುಂದಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್‌ಗೆ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ದೊಡ್ಡ ಯಶಸ್ಸು ಕೊಟ್ಟಿದೆ. ಅದನ್ನು ಗೋಲ್ಡನ್ ಸ್ಟಾರ್ ಗಣೇಶ್ ಈಗ ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಮುಂದುವರೆಸುತ್ತಿದ್ದಾರೆ. ಹೀಗಾಗಿ ಗಣೇಶ್ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಹೊಸ ವರ್ಷದ ಖುಷಿಯಲ್ಲಿ 'ರೇಜ್ ಆಫ್ ರುದ್ರ' ಟೈಟಲ್ ಟೀಸರ್ ಅನ್ನು ಚಿತ್ರತಂಡ ರಿವೀಲ್ ಮಾಡುವುದಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ.
2025, ಹೊಸ ವರ್ಷ ಆರಂಭ ಆಗುತ್ತಿದ್ದಂತೆ ಗಣೇಶ್ ಸಿನಿಮಾ ಟೈಟಲ್ ಟೀಸರ್ ರಿವೀಲ್ ಮಾಡುವುದಕ್ಕೆ ಸಜ್ಜಾಗಿದೆ. ಇದೇ ಜನವರಿ 2 ರಂದು ಈ ಸಿನಿಮಾ ಟೈಟಲ್ ಟೀಸರ್ ರಿವೀಲ್ ಆಗುತ್ತಿದ್ದಂತೆ ಹೊಸ ಜಗತ್ತನ್ನು ಪರಿಚಯಿಸುವುದಕ್ಕೆ ಪೀಪಲ್ ಮೀಡಿಯಾ ಫ್ಯಾಕ್ಟರಿ ರೆಡಿಯಾಗಿದೆ. ಈಗಾಗಲೇ 'ರಾಂಪೇಜ್ ಆಫ್ ಕ್ಷುದ್ರ' ಪೋಸ್ಟರ್ ಕುತೂಹಲ ಕೆರಳಿಸಿತ್ತು. ಅದರಂತೆ ಈ ಸಿನಿಮಾ, ಟೈಟಲ್ ಟೀಸರ್‌ನಲ್ಲಿ ರುದ್ರ ಮತ್ತು ಕ್ಷುದ್ರನ ಪರಿಚಯವಾಗುತ್ತಿದೆ. ಹಿಂದೆಂದೂ ಕಾಣದ ಅದ್ಭುತ ಪಾತ್ರದಲ್ಲಿಕಾಣಿಸುತ್ತಿದ್ದಾರೆ.
ಈ ಸಿನಿಮಾವನ್ನು ಈಗಾಗಲೇ ನೃತ್ಯ ನಿರ್ದೇಶನದ ಮೂಲಕ ಗಮನ ಸೆಳೆದಿರುವ ಧನಂಜಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. 'ರೇಜ್ ಆಫ್ ರುದ್ರ' ಪ್ರೇಕ್ಷಕನಿಗೆ ದೊಡ್ಡ ಸರ್ಪ್ರೈಸ್ ನೀಡಲಿದೆ ಅನ್ನೋ ನಂಬಿಕೆಯಲ್ಲಿ ಚಿತ್ರತಂಡವಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ಜಂಟಿಯಾಗಿದ್ದು, ಸ್ಯಾಂಡಲ್‌ವುಡ್‌ಗೆ ಹೊಸ ಮೈಲಿಗಲ್ಲಾಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











