Ashwini Puneeth Rajkumar: 'ಜೇಮ್ಸ್' ಸಿನಿಮಾ ನೋಡುತ್ತಾರಾ ಅಪ್ಪು ಪತ್ನಿ ಅಶ್ವಿನಿ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ 'ಜೇಮ್ಸ್'. ಈ ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳು ಬಾಕಿ ಇವೆ. ಫಸ್ಟ್ ಡೇ ಫಸ್ಟ್ ಶೋ 'ಜೇಮ್ಸ್' ಸಿನಿಮಾ ನೋಡಬೇಕು ಅಂತ ಪುನೀತ್ ಅಭಿಮಾನಿಗಳು ಕಾದು ಕೂತಿದ್ದಾರೆ. ಹಿಂದೆಂದೂ ಕಾರಣದ ಪುನೀತ್ ರಾಜ್‌ಕುಮಾರ್‌ರನ್ನು ಅಭಿಮಾನಿಗಳು ತೆರೆಮೇಲೆ ಕಣ್ತುಂಬಿಕೊಳ್ಳಲಿದ್ದಾರೆ.

ಅಪ್ಪು ಇಷ್ಟ ಪಟ್ಟು ನಟಿಸಿದ ಸಿನಿಮಾವಿದು. ಈ ಚಿತ್ರವನ್ನು ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲು ಬಯಸಿದ್ದರು. ಅಷ್ಟರಲ್ಲೇ ಪುನೀತ್ ದಿಢೀರನೇ ಕಣ್ಮರೆಯಾಗಿಬಿಟ್ಟರು. ಅಭಿಮಾನಿಗಳಂತೂ ಮೊದಲ ದಿನವೇ 'ಜೇಮ್ಸ್' ಸಿನಿಮಾ ನೋಡಲಿದ್ದಾರೆ. ಆದರೆ, ಪ್ರಶ್ನೆ ಇದಲ್ಲಾ? ಅಪ್ಪು ಅಭಿನಯದ ಕೊನೆಯ ಸಿನಿಮಾವನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಣೆ ಮಾಡುತ್ತಾರಾ? ಇಲ್ವಾ? ಅನ್ನುವ ಕುತೂಹಲ ಎದ್ದಿದೆ.

'ಜೇಮ್ಸ್' ಸಿನಿಮಾ ನೋಡುತ್ತಾರಾ ಅಪ್ಪು ಪತ್ನಿ ಅಶ್ವಿನಿ?

'ಜೇಮ್ಸ್' ಸಿನಿಮಾ ನೋಡುತ್ತಾರಾ ಅಪ್ಪು ಪತ್ನಿ ಅಶ್ವಿನಿ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್'. ಇದು ಕನ್ನಡಿಗರಿಗೆ ಭಾವನಾತ್ಮಕ ಸಿನಿಮಾ. ಈ ಕಾರಣಕ್ಕೆ ಅಭಿಮಾನಿಗಳು ಒಂದು ತಿಂಗಳಿನಿಂದಲೇ ಸಿನಿಮಾ ನೋಡಲು ತಯಾರಿ ನಡೆಸಿದ್ದರು. ಆದರೆ, ಅಪ್ಪು ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನೋಡುತ್ತಾರಾ? ಅನ್ನುವ ಪ್ರಶ್ನೆಗೆ ಅವರನ್ನು ಹತ್ತಿರದಿಂದ ಬಲ್ಲರು ಇಲ್ಲಾ ಅಂತಾರೆ. ನಮಗೆ ಈ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಅಂದ್ಮೇಲೆ ಅಶ್ವಿನಿಯವರು ಈ ಸಿನಿಮಾ ನೋಡುತ್ತಾರೆ ಅನ್ನೋದು ಅನುಮಾನ ಎನ್ನುತ್ತಾರೆ 'ಜೇಮ್ಸ್' ಚಿತ್ರದ ನಿರ್ಮಾಪಕ.

ಮೊದಲೇ ಸಿನಿಮಾ ನೋಡಿದ್ದ ಅಶ್ವಿನಿ

ಮೊದಲೇ ಸಿನಿಮಾ ನೋಡಿದ್ದ ಅಶ್ವಿನಿ

ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸಿನಿಮಾ ನೋಡಿದ್ದಾರಾ? ಇಲ್ಲವಾ? ಅನ್ನುವುದನ್ನು ನಿರ್ಮಾಪಕ ಕಿಶೋರ್ ತಿಳಿಸಿದ್ದಾರೆ. ಈ ಮೊದಲೇ ಅಪ್ಪು ಪತ್ನಿ ಅಶ್ವಿನಿ ಸಿನಿಮಾದ ತುಣುಕುಗಳನ್ನು ನೋಡಿದ್ದಾರಂತೆ. " ಅಣ್ಣಂಗೆ ಈ ಸಿನಿಮಾ ತುಂಬಾನೇ ಇಷ್ಟ ಆಗಿತ್ತು. 'ಜೇಮ್ಸ್' ಸಿನಿಮಾದ ಎಲ್ಲಾ ಫೈಟ್, ಎಲ್ಲಾ ಸಾಂಗ್, ಎಲ್ಲಾ ಸೀನ್ಸ್ ಅಪ್ಪು ಸರ್ ಮೊಬೈಲ್‌ನಲ್ಲಿದೆ. ಅದೆಲ್ಲವನ್ನೂ ಮೇಡಂ ಆವಾಗಲೇ ನೋಡಿದ್ದಾರೆ. ಮೊದಲ ದಿನದಿಂದಲೇ ಮೇಡಂಗೆ ಅಪ್‌ಡೇಟ್ ಇದೆ. ಆವಾಗಲೇ ನೋಡಿದ್ದಾರೆ. ಆರ್‌ ಆರ್ ಆದ್ಮೇಲೆ ಮೇಡಂ ಸಿನಿಮಾ ನೋಡಿಲ್ಲ. ಈ ಸಿನಿಮಾವನ್ನು ಯಾವಾಗ ನೋಡುತ್ತಾರೋ ಗೊತ್ತಿಲ್ಲ." ಎನ್ನುತ್ತಾರೆ ನಿರ್ಮಾಪಕ ಕಿಶೋರ್.

ಅಶ್ವಿನಿ ಸಿನಿಮಾ ನೋಡ್ತಾರಾ ಗೊತ್ತಿಲ್ಲ

ಅಶ್ವಿನಿ ಸಿನಿಮಾ ನೋಡ್ತಾರಾ ಗೊತ್ತಿಲ್ಲ

'ಜೇಮ್ಸ್' ಸಿನಿಮಾ ಎಡಿಟಿಂಗ್ ಆದ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೋಡಿಲ್ಲ. ಆದರೆ, ನಾಳೆ ಬಿಡುಗಡೆಯಾಗುತ್ತಿರುವ ಸಿನಿಮಾವನ್ನು ಅಪ್ಪು ಪತ್ನಿ ನೋಡಿ ಅರಗಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇಲ್ಲ ಎನ್ನುತ್ತಾರೆ ನಿರ್ಮಾಪಕ ಕಿಶೋರ್. "ನನಗೆ ಎಡಿಟಿಂಗ್ ಆದ್ಮೇಲೆ ಸಿನಿಮಾ ನೋಡಲು ಆಗಿಲ್ಲ. ನನಗೆ ಗೊತ್ತಿದ್ದ ಹಾಗೇ ಮೇಡಂಗೆ ಈ ಸಿನಿಮಾ ಡೈಜೆಸ್ಟ್ ಆಗಲ್ಲ. ನನಗೆ ಆಗುತ್ತಿಲ್ಲ. ಅವರಿಗೆ ಬಹಳ ಕಷ್ಟ ಆಗುತ್ತೆ." ಎನ್ನುತ್ತಾರೆ ಕಿಶೋರ್.

10 ಬಾರಿ ಬ್ರೇಕ್ ತೆಗೆದುಕೊಂಡಿದ್ದೇನೆ

10 ಬಾರಿ ಬ್ರೇಕ್ ತೆಗೆದುಕೊಂಡಿದ್ದೇನೆ

" ನಾನು ಫಸ್ಟ್ ಹಾಫ್‌ ನೋಡುವುದಕ್ಕೆ ಸುಮಾರು 10 ಬಾರಿ ಬ್ರೇಕ್ ತೆಗೆದುಕೊಂಡಿದ್ದೇನೆ. ನನಗೆ ಸಿನಿಮಾ ನೋಡಲು ಸಾಧ್ಯವಾಗುತ್ತಿರಲಿಲ್ಲ. 10 ನಿಮಿಷ ನೋಡುತ್ತಿದ್ದೆ. ಅಳು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಅದಕ್ಕೆ ಎದ್ದು ಬರುತ್ತಿದ್ದೆ. ಮತ್ತೆ ಮೂರು ದಿನ ಆದ್ಮೇಲೆ 'ಜೇಮ್ಸ್' ಸಿನಿಮಾ ನೋಡಿದೆ." ಅಂತ 'ಜೇಮ್ಸ್' ಚಿತ್ರದ ಬಗ್ಗೆ ನಿರ್ಮಾಪಕ ಕಿಶೋರ್ ಮನಬಿಚ್ಚಿ ಮಾತಾಡಿದ್ದಾರೆ.

More from Filmibeat

English summary
Is Puneeth Wife Ashwini will be watching James Kannada Movie? Ashwini Puneeth Rajkumar will be visiting Veeresh theater at march 17th 5am.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X