4 ದಿನಗಳಲ್ಲೇ ವಿಜಯ್, ಅಜಿತ್, ಬಾಲಯ್ಯ, ಚಿರುಗೆ ಟಕ್ಕರ್ ಕೊಡ್ತಾ 'ಕ್ರಾಂತಿ'? ಏನಿದು ಬಾಕ್ಸಾಫೀಸ್ ಲೆಕ್ಕ?

ದರ್ಶನ್ ಸಿನಿಮಾ 'ಕ್ರಾಂತಿ' ಬಿಡುಗಡೆಗೂ ಮುನ್ನ ಸಿಕ್ಕಪಟ್ಟೆ ಕ್ರೇಜ್ ಇತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ದೊಡ್ಡ 'ಕ್ರಾಂತಿ'ಯನ್ನೇ ಮಾಡುತ್ತೆ ಅನ್ನೋ ಲೆಕ್ಕಾಚಾರ ಹಾಕಲಾಗಿತ್ತು. ಹೀಗಾಗಿ ಈ ವರ್ಷ ಕನ್ನಡದಲ್ಲಿ ತೆರೆಕಂಡ ಮೊದಲ ಸೂಪರ್‌ಸ್ಟಾರ್ ಸಿನಿಮಾದ ಕಲೆಕ್ಷನ್ ಬಗ್ಗೆ ಇಡೀ ಚಿತ್ರರಂಗವೇ ಕಣ್ಣಿಟ್ಟಿದೆ.

'ಕ್ರಾಂತಿ' ಸಿನಿಮಾ 6ನೇ ದಿನ ಪ್ರದರ್ಶನ ಕಾಣುತ್ತಿದೆ. ಮೊದಲ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಗಳಿಸಿದ ಕಲೆಕ್ಷನ್ ಎಷ್ಟು ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರನ್ನೂ ಇದೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ಕಲೆಕ್ಷನ್ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಮಾಹಿತಿ ಹರಿದಾಡುತ್ತಿದೆ.

ಈಗಾಗಲೇ 'ಕ್ರಾಂತಿ' ಕಲೆಕ್ಷನ್ ವಿಚಾರವಾಗಿ ಚರ್ಚೆ ಶುರುವಾಗಿದೆ. ಈಗಾಗಲೇ 'ಕ್ರಾಂತಿ' 100 ಕೋಟಿ ಕ್ಲಬ್ ಸೇರಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಲ್ಲದೆ ದರ್ಶನ್ ಮತ್ತು ಅವರ ತಂಡ ಸಿನಿಮಾ ಸಕ್ಸಸ್‌ ಅನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಮಧ್ಯೆ ಕ್ರಾಂತಿ ನಾಲ್ಕು ದಿನಗಳಲ್ಲಿ ಕಲೆಕ್ಷನ್ ವಿಜಯ್, ಅಜಿತ್, ಬಾಲಯ್ಯ, ಚಿರಂಜೀವಿ ಸಿನಿಮಾಗಳ ದಾಖಲೆಯನ್ನೇ ಮೀರಿಸಿದೆ ಅನ್ನೋ ಪೋಸ್ಟ್ ಒಂದು ಹರಿದಾಡುತ್ತಿದೆ. ಅಸಲಿಗೆ ಈ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

4 ದಿನಗಳ 'ಕ್ರಾಂತಿ' ಬಾಕ್ಸಾಫೀಸ್ ಎಷ್ಟು?

4 ದಿನಗಳ 'ಕ್ರಾಂತಿ' ಬಾಕ್ಸಾಫೀಸ್ ಎಷ್ಟು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ. ನಿರೀಕ್ಷಿಸಿದಂತೆ ಮೊದಲ ವಾರದಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿಯೇ ಇದೆ. ಮೊದಲ ನಾಲ್ಕು ದಿನಗಳಲ್ಲಿ 'ಕ್ರಾಂತಿ' ಸಿನಿಮಾ 100 ಕೋಟಿ ರೂ. ಅಧಿಕ ಗಳಿಕೆ ಮಾಡಿದೆ ಅನ್ನೋ ಪೋಸ್ಟ್‌ ಒಂದು ಹರಿದಾಡುತ್ತಿದೆ. ಆದರೆ, ಚಿತ್ರತಂಡ ಈ ಬಾಕ್ಸಾಫೀಸ್ ನಂಬರ್ ಅನ್ನು ಖಚಿತ ಪಡಿಸಬೇಕಿದೆ. ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, 'ಕ್ರಾಂತಿ' 109 ಕೋಟಿ ರೂ. ಕಲೆ ಹಾಕಿದೆ ಎನ್ನಲಾಗಿದೆ.

ಸೂಪರ್‌ಸ್ಟಾರ್ ಸಿನಿಮಾಗಳಿಗೆ ಟಕ್ಕರ್ ಕೊಡ್ತಾ?

ಸೂಪರ್‌ಸ್ಟಾರ್ ಸಿನಿಮಾಗಳಿಗೆ ಟಕ್ಕರ್ ಕೊಡ್ತಾ?

'ಕ್ರಾಂತಿ' 109 ಕೋಟಿ ರೂ. ಕಲೆಕ್ಷನ್ ಮಾಡಿರೋ ಸುದ್ದಿ ಹರಿದಾಡಿದ್ಮೇಲೆ ಸೂಪರ್‌ಸ್ಟಾರ್ ಸಿನಿಮಾಗಳ ಜೊತೆ ಹೋಲಿಕೆ ಶುರುವಾಗಿದೆ. 'ಕ್ರಾಂತಿ' ರಿಲೀಸ್‌ಗೆ ಒಂದು ವಾರ ಮುನ್ನ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ', ಚಿರಂಜೀವಿ ಅಭಿನಯದ 'ಥುನಿವು', ದಳಪತಿ ವಿಜಯ್ ಸಿನಿಮಾ 'ವಾರಿಸು' ಹಾಗೂ ಅಜಿತ್ ಸಿನಿಮಾ 'ಥುನಿವು' ರಿಲೀಸ್ ಆಗಿತ್ತು. ಈ ಎಲ್ಲಾ ಸಿನಿಮಾಗಳ ಪ್ರಾದೇಶಿಕ ದಾಖಲೆಯನ್ನು ದರ್ಶನ್ 'ಕ್ರಾಂತಿ' ಸಿನಿಮಾ ಮುರಿದಿದೆ ಅನ್ನೋ ಸುದ್ದಿ ಒಡಾಡುತ್ತಿದೆ.

ಸೂಪರ್‌ಸ್ಟಾರ್‌ಗಳು Vs 'ಕ್ರಾಂತಿ' ಕಲೆಕ್ಷನ್

ಸೂಪರ್‌ಸ್ಟಾರ್‌ಗಳು Vs 'ಕ್ರಾಂತಿ' ಕಲೆಕ್ಷನ್

ಸಂಕ್ರಾಂತಿಗೆ ರಿಲೀಸ್ ಆಗಿದ್ದ ನಾಲ್ವರು ಸೂಪರ್‌ಸ್ಟಾರ್ ಸಿನಿಮಾಗಳ ಕಲೆಕ್ಷನ್ 100 ಕೋಟಿ ರೂ. ದಾಟಿತ್ತು. ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' 4 ದಿನಗಳಿಗೆ 104 ಕೋಟಿ ರೂ., ಅಜಿತ್ ಸಿನಿಮಾ 'ಥುನಿವು' 100 ಕೋಟಿ ರೂ., ದಳಪತಿ ವಿಜಯ್ ಸಿನಿಮಾ ವಾರಿಸು 102 ಕೋಟಿ ರೂ., ಚಿರಂಜೀವಿ ಸಿನಿಮಾ 'ವಾಲ್ತೇರು ವೀರಯ್ಯ' ಸಿನಿಮಾ 108 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಈಗ 'ಕ್ರಾಂತಿ' ಇದೇ ನಾಲ್ಕು ದಿನಗಳಲ್ಲಿ 109 ಕೋಟಿ ರೂ. ಗಳಿಸಿದ್ದು, ಸೂಪರ್ ಸಿನಿಮಾಗಳ ದಾಖಲೆಯನ್ನು ಮುರಿದಿದೆ ಅನ್ನೋ ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಈ ಅಂಕಿಗಳನ್ನು ಯಾರೂ ಇದೂವರೆಗೂ ಧೃಡಸಿಲ್ಲ.

'ಕ್ರಾಂತಿ' ಭವಿಷ್ಯವೇನು?

'ಕ್ರಾಂತಿ' ಭವಿಷ್ಯವೇನು?

ಕೆಲವರು ದರ್ಶನ್ ಸಿನಿಮಾ 'ಕ್ರಾಂತಿ' 100 ಕೋಟಿ ರೂ. ಗಳಿಕೆ ಮಾಡಿದ್ದನ್ನು ಒಪ್ಪಿಕೊಂಡಿಲ್ಲ. ಅಷ್ಟೆಲ್ಲ ದಾಖಲೆ ಗಳಿಕೆ ಕಂಡಿಲ್ಲ ಎಂದೇ ವಾದ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಹಾಗೂ ಅವರ ತಂಡ 'ಕ್ರಾಂತಿ' ಸಕ್ಸಸ್ ಅನ್ನು ಸೆಲೆಬ್ರೆಟ್ ಮಾಡಿದ್ದಾರೆ. ಸದ್ಯ 'ಕ್ರಾಂತಿ' ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಅನ್ನೋದು ಅಧಿಕೃತ ಮಾಹಿತಿ ಇಲ್ಲ. ಅಲ್ಲದೆ, ಈ ವಾರ ಈ ಸಿನಿಮಾ ಕಲೆಕ್ಷನ್ ಸ್ಟಡಿಯಾಗಿದ್ದರೆ, ಲಾಭದಲ್ಲಿದೆ ಅನ್ನೋದನ್ನು ಗೆಸ್ ಮಾಡಬಹುದು.

More from Filmibeat

English summary
Is Really Darshan Kranti Movie 4 Days Regional Collection Beat Thalapathy Vijay, Ajith,Balakrishan, Chiranjeevi?, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X