ಅಗಲಿದ ಹಿರಿಯ ನಟಿ ಸರೋಜಾ ದೇವಿ 'ವಿಲ್‌'ಗೆ ರಾಕ್‌ಲೈನ್, ವಿಜಯಲಕ್ಷ್ಮಿ ಸಾಕ್ಷಿ? ಇದೆಲ್ಲ ಯಾವಾಗಾಯ್ತು?

ಬಹುಭಾಷಾ ನಟಿ ಸರೋಜಾ ದೇವಿ ಇತ್ತೀಚೆಗೆ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಹಾಗೂ ತಮಿಳು ಚಿತ್ರರಂಗ ಗಣ್ಯರಿಗೆ ಶಾಕ್‌ನಲ್ಲಿದ್ದರು. ಅದರಲ್ಲೂ ಇಡೀ ಕನ್ನಡ ಚಿತ್ರರಂಗ ಸರೋಜಾ ದೇವಿಯವರಿಗೆ ಅಂತಿಮ ನಮನ ಸಲ್ಲಿಸಿದ್ದರು. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿಗೆ ಅಭಿಮಾನಿಗಳು ಗೌರವದಿಂದ 'ಅಭಿನಯದ ಸರಸ್ವತಿ' ಎಂದು ಕರೆದಿದ್ದರು.

'ಅಭಿನಯದ ಸರಸ್ವತಿ' ಸರೋಜಾ ದೇವಿ ಕೇವಲ ಬಹುಭಾಷಾ ನಟಿಯಷ್ಟೇ ಅಲ್ಲ. ಇವರು ಅತ್ಯಂತ ಶ್ರೀಮಂತ ನಟಿ ಕೂಡ ಹೌದು. ಇವರನ್ನು ಹತ್ತಿರದಿಂದ ಬಲ್ಲವರು ಅವರ ಶ್ರೀಮಂತಿಕೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ, ಆ ಶ್ರೀಮಂತಿಯನ್ನು ಎಂದಿಗೂ ತೋರಿಸಿಕೊಂಡವರು ಅಲ್ಲ. ತನ್ನ ಬಳಿಕ ಅದೆಷ್ಟೇ ಆಸ್ತಿಯಿದೆ ಅನ್ನೋದು ಅವರ ತೀರಾ ಆಪ್ತರಿಗೆ ಬಿಟ್ಟರೆ, ಹೊರ ಜಗತ್ತಿಗೆ ಗೊತ್ತಿದ್ದಿದ್ದು ತೀರಾ ವಿರಳ.

Is Rockline Venkatesh Vijayalakshmi Singh Involved in Saroja Devi s Property Will

ಸರೋಜಾ ದೇವಿ ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ. ಅಮ್ಮ ರುದ್ರಮ್ಮ ಆ ವೇಳೆ ಸರೋಜಾ ದೇವಿ ದುಡಿದ ಹಣವನ್ನು ಜೋಪಾನ ಮಾಡಿದ್ದರು. ಸಂಭಾವನೆಯ ಹಣದಿಂದ ಚಿನ್ನ ಹಾಗೂ ಭೂಮಿಯನ್ನು ಖರೀದಿ ಮಾಡಿದ್ದರು. ಹಿರಿಯ ಪತ್ರಕರ್ತ ಕೆಜೆ ಕುಮಾರ್ ಫಿಲ್ಮಿಬೀಟ್‌ ಕನ್ನಡದ ಜೊತೆ ಹಂಚಿಕೊಂಡಿದ್ದರು. ಆದರೆ, ಇನ್ನೊಂದು ವಿಷಯವನ್ನು ಹೊಸ ದಿಗಂತ ಪತ್ರಿಕೆಯಲ್ಲಿ ಹಂಚಿಕೊಂಡಿದ್ದಾರೆ. ಅದುವೇ ಸರೋಜಾ ದೇವಿಯವರ 'ವಿಲ್'.

ಮುಂದೆ ಓದಿ

ಸರೋಜಾ ದೇವಿ ತಮ್ಮ ಆಸ್ತಿಯ ಬಗ್ಗೆ ವಿಲ್ ಬರೆಸಿದ್ದರೇ?

6 ಮಂದಿ ವಕೀಲಗೆ ಒಂದೊಂದು ವಿಲ್ ಬರೆಯಲು ಸೂಚಿಸಿದರೇ?

ರಾಕ್‌ಲೈನ್ ವೆಂಕಟೇಶ್,ವಿಜಯಲಕ್ಷ್ಮಿ ಸಾಕ್ಷಿ ಹಾಕಿದ್ದಾರೆಯೇ?

ಚಿತ್ರರಂಗದ ಇಬ್ಬರು ದಿಗ್ಗಜರಿಗೆ ಈ ವಿಲ್ ಬಗ್ಗೆ ಮಾಹಿತಿ ಇದೆಯೇ?

ಹಿರಿಯ ನಟಿ ಸರೋಜಾ ದೇವಿ ದಕ್ಷಿಣ ಭಾರತದ ಶ್ರೀಮಂತ ನಟಿಯರಲ್ಲಿ ಒಬ್ಬರು. ಇವರ ಅಮ್ಮನ ಮುಂದಾಲೋಚನೆಯಿಂದ ಸರೋಜಾ ದೇವಿಯ ದಕ್ಷಿಣ ಭಾರತದ ಶ್ರೀಮಂತ ನಟಿ ಎನಿಸಿಕೊಂಡಿದ್ದರು. ತಾಯಿ ರುದ್ರಮ್ಮ ಮುಂದಾಲೋಚನೆ ಸರೋಜಾ ದೇವಿಯವರನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿತ್ತು. ಹಿರಿಯ ಪತ್ರಕರ್ತ ಕೆ ಜೆ ಕುಮಾರ್ ಅವರು ಅಂದಾಜಿಸುವಂತೆ ಈ ನಟಿಯ ಆಸ್ತಿ ಬರೋಬ್ಬರು ₹500 ಕೋಟಿ ಆಸುಪಾಸಿನಲ್ಲಿ ಇರಬಹುದು. ಇವರ ಅಗಲಿಕೆ ಬಳಿಕ ಅಪಾರ ಪ್ರಮಾಣ ಆಸ್ತಿ ಏನಾಗುತ್ತೆ? ಯಾರ ಪಾಲಿಗೆ ಸೇರುತ್ತೆ? ಎನ್ನುವ ಕುತೂಹಲವನ್ನು ಹುಟ್ಟಾಕಿದೆ.

ಸರೋಜಾ ದೇವಿಯವರ ಮದುವೆ ಶ್ರೀಹರ್ಷ ಎಂಬುವವರ ಜೊತೆ ನಡೆದಿತ್ತು. ಈ ದಂಪತಿಗೆ ಸಂಸಾರ ಅನ್ಯೋನ್ಯತೆಯಿಂದ ಕೂಡಿದ್ದರೂ, ಮಕ್ಕಳು ಇರಲಿಲ್ಲ. ಹೀಗಾಗಿ ಸರೋಜಾ ದೇವಿ ಅವರ ಸಂಬಂಧದಲ್ಲಿಯೇ ಭುವನೇಶ್ವರಿ ಎಂಬ ಹೆಣ್ಣು ಮಗಳನ್ನು ದತ್ತು ಪಡೆದಿದ್ದರು. ಅವರಿಗೆ ಆದರೆ, ಭುವನೇಶ್ವರಿಯವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬರು ಇಂದಿರಾ, ಇನ್ನೊಬ್ಬರು ಗೌತಮ್. ಸರೋಜಾ ದೇವಿಯ ಕೊನೆಯ ಕಾಲದಲ್ಲಿ ಮೊಮ್ಮಕ್ಕಳು ಇವರೊಂದಿಗೆ ಇದ್ದರು. ಇದು ಸರೋಜಾ ದೇವಿಯವರು ಕುಟುಂಬ.

Is Rockline Venkatesh Vijayalakshmi Singh Involved in Saroja Devi s Property Will

ಹಿರಿಯ ಪತ್ರಕರ್ತ ಕೆ ಜೆ ಕುಮಾರ್ ಅವರ ವರದಿಯಲ್ಲಿ ಒಂದು ವಿಷಯವನ್ನು ಹಂಚಿಕೊಂಡಿದ್ದಾರೆ. ಸರೋಜಾ ದೇವಿ ಹಾಗೂ ಪ್ರತಿಮಾ ದೇವಿ ಇಬ್ಬರೂ ಉತ್ತಮ ಸ್ನೇಹಿತರು. ಹೀಗೊಮ್ಮೆ ಪ್ರತಿಮಾ ದೇವಿಯವರು ನಿನ್ನ ಬಳಿಕ ಈ ಆಸ್ತಿ ಯಾರಿಗೆ ಸೇರಬೇಕು ಎಂದು ಯೋಚಿಸಿದ್ದೀಯಾ ಎಂದು ಸರೋಜಾ ದೇವಿಯವರಿಗೆ ಪ್ರಶ್ನೆ ಮಾಡಿದ್ದರು. ಆ ವೇಳೆ ಏನೂ ಪ್ರತಿಕ್ರಿಯಿಸದೆ ಅಲ್ಲಿಂದ ಹೊರಟುಬಿಡುತ್ತಾರೆ. ಇದಾದ ಸ್ವಲ್ಪ ದಿನಕ್ಕೆ ಪ್ರತಿಮಾ ದೇವಿ ನಿಧನರಾಗುತ್ತಾರೆ. ಆಗ ಸರೋಜಾ ದೇವಿ ಈ ಬಗ್ಗೆ ಒಂದು ಗಂಭೀರ ನಿರ್ಧಾರಕ್ಕೆ ಬರುತ್ತಾರೆ ಎಂದು ವರದಿ ಮಾಡಿದ್ದಾರೆ.

ತುಂಬಾನೇ ಗುಟ್ಟಿನಲ್ಲಿ ತನ್ನ ಬಳಿಕ ಈ ನೂರಾರು ಕೋಟಿ ರೂಪಾಯಿ ಆಸ್ತಿಗೆ ಯಾರಿಗೆ ಸೇರಬೇಕು ಎಂದು ತೀರ್ಮಾನಕ್ಕೆ ಬರುತ್ತಾರೆ. ತನಗೆ ಗೊತ್ತಿದ್ದ ವಕೀಲರನ್ನು ಸಂಪರ್ಕಿಸುತ್ತಾರೆ. ತನ್ನ ಸಂಪತ್ತು ಯಾರಿಗೆ ಸಿಗಬೇಕು? ಹೇಗೆ ಸಿಗಬೇಕು ಎಂದು ಬರಸುತ್ತಾರೆ. 2022ರಲ್ಲಿ ಯಾರಿಗೂ ಗೊತ್ತಾಗದ ಹಾಗೇ ಇದೆಲ್ಲ ಮುಗಿದು ಹೋಗುತ್ತೆ. ವಿಲ್‌ಗೆ ಇಬ್ಬರು ಸಾಕ್ಷಿದಾರರನ್ನು ಹುಡುಕುತ್ತಾರೆ. ಆಗ ಸಿಗುವುದೇ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ವಿಜಯಲಕ್ಷ್ಮಿ ಸಿಂಗ್. ಆರು ಮಂದಿ ವಕೀಲರಿಂದ ವಿಲ್ ಬರೆಸುತ್ತಾರೆ. ಇಬ್ಬರಿಗೆ ಗೊತ್ತಿದ್ದದ್ದು ಇನ್ನೊಬ್ಬರಿಗೆ ತಿಳಿದಿರುವುದಿಲ್ಲ. ರಾಕ್‌ಲೈನ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಇಬ್ಬರೂ ಕೇವಲ ಸಾಕ್ಷಿಯಾಗಿ ಸಹಿ ಹಾಕುತ್ತಾರೆ. ಆದರೆ ಅವರಿಗೂ ಈ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ವರದಿ ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X