ಕಿಚ್ಚ ಸುದೀಪ್ ಮುದ್ದಿನ ಮಗಳ ಬಾಯ್‌ಫ್ರೆಂಡ್ ಹೆಸರೇನು ? ಮದ್ವೆಯಾಗುವ ಹುಡುಗನ ಬಗ್ಗೆ ಮಾತನಾಡಿದ ಸಾನ್ವಿ ..!
ಸುದೀಪ್.. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದವರು ಸುದೀಪ್.
ಹೆಚ್ಚು ಕಡಿಮೆ ಒಂದೂವರೆ ದಶಕಗಳಿಂದ ಬಾಲಿವುಡ್ಡು.. ಕಾಲಿವುಡ್ಡು .. ಟಾಲಿವುಡ್ಡು .. ಅಂಗಳದಲ್ಲಿ ಓಡಾಡಿರೋ ಅಭಿನಯ ಚಕ್ರವರ್ತಿ ಸುದೀಪ್ ಅವರಿಗ ಮಗಳೆಂದರೆ ಪಂಚ ಪ್ರಾಣ. ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಇರಲಿ ಸುದೀಪ್ ಮಗಳಿಗಾಗಿ ಓಡೋಡಿ ಬರುತ್ತಾರೆ. ಮಗಳ ಜೊತೆ ಕಾಲವನ್ನು ಕಳೆಯುತ್ತಾರೆ.

ಶೀಘ್ರದಲ್ಲೇ ಬಣ್ಣ ಹಚ್ಚಲಿದ್ದಾರೆ ಸುದೀಪ್ ಪುತ್ರಿ ಸಾನ್ವಿ; ಹೇಗಿದೆ ಗೊತ್ತಾ ತಯಾರಿ?
ಸಾನ್ವಿ ಕೂಡ ತಂದೆಗೆ ತಕ್ಕ ಮಗಳು. ತಂದೆಯಂತೆಯೇ ಸಾನ್ವಿ ಅದ್ಭುತ ಗಾಯಕಿ ಕೂಡ ಹೌದು. ನಾನಾ ವೇದಿಕೆಗಳಲ್ಲಿ ಸಾನ್ವಿ ತಮ್ಮ ಕಂಠಸಿರಿಯಿಂದ ಅನೇಕರ ಹೃದಯವನ್ನು ಗೆದ್ದಿದ್ದಾರೆ. ಇಂಥಾ ಸಾನ್ವಿ ಚಿತ್ರರಂಗಕ್ಕೆ ನಾಯಕಿಯಾಗಿ ಕಾಲಿಡುತ್ತಾರಾ ಎನ್ನುವ ಅನುಮಾನ ಅನೇಕರಲ್ಲಿದೆ. ಇದಕ್ಕೆ ಉತ್ತರ ಬಹುಶಃ ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಿ ಸಿಗಬಹುದಾದರೂ ಸದ್ಯ ಸಾನ್ವಿ ಕೆಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ತಮ್ಮ ಬಾಯ್‌ಫ್ರೆಂಡ್ ಬಗ್ಗೆ ಕೂಡ ಮಾತನಾಡಿದ್ದಾರೆ.
ಹೌದು, ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಾನ್ವಿ ಸುದೀಪ್ ತಮ್ಮ ಫಾಲೋವರ್ಸ್ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸೆಷನ್‌ನಲ್ಲಿ ಹಲವರು ಸಾನ್ವಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪೈಕಿ ಒಬ್ಬ ವ್ಯಕ್ತಿ ನಿಮ್ಮ ಬಾಯ್‌ಫ್ರೆಂಡ್ ಹೆಸರೇನು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರವನ್ನು ನೀಡಿರುವ ಸಾನ್ವಿ ಸುದೀಪ್ ನನಗೆ ಬಾಯ್‌ಫ್ರೆಂಡ್ ಇಲ್ಲಾ ಬಾಸ್ ಎಂದು ಹೇಳಿದ್ದಾರೆ.
ಇದೇ 'ಆಸ್ಕ್ ಮಿ ಎನಿಥಿಂಗ್' ಸೆಷನ್ ನಲ್ಲಿ ಮತ್ತೊಬ್ಬ ವ್ಯಕ್ತಿ ನೀವು ಯಾವುದಾದರೂ ಕಾಲ್ಪನಿಕ ಪಾತ್ರವಾಗಿ ಬದಲಾಗಬೇಕು ಎಂದು ಬಯಸಿದರೆ ಯಾವ ಪಾತ್ರದಲ್ಲಿ ಬದಲಾಗುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾನ್ವಿ ಸುದೀಪ್ ಪುಷ್ಪದಲ್ಲಿ ರಶ್ಮಿಕಾ ನಿರ್ವಹಿಸಿದ್ದ ಶ್ರೀವಲ್ಲಿ ಪಾತ್ರವನ್ನು ಹೆಸರಿಸಿದ್ದಾರೆ. ಇಷ್ಟೇ ಅಲ್ಲ ಅದಕ್ಕೆ ಕಾರಣವನ್ನು ನೀಡಿರುವ ಸಾನ್ವಿ ಪುಷ್ಪರಾಜ್‌ನಂತಹ ಗಂಡ ಸಿಕ್ಕರೆ ಅದಕ್ಕಿಂತ ಇನ್ನೇನು ಬೇಕು ಎಂದು ತಮಾಷೆಯನ್ನು ಮಾಡಿದ್ದಾರೆ.
ಇನ್ನು ಬಿಗ್ ಬಾಸ್‌ಗೆ ಸುದೀಪ್ ಗುಡ್ ಬೈ ಹೇಳಿರುವುದು ಎಲ್ಲರಿಗೆ ಗೊತ್ತೇ ಇದೆ. ಸುದೀಪ್ ಸ್ಥಾನವನ್ನು ಆ ವೇದಿಕೆಯಲ್ಲಿ ಯಾರು ತುಂಬುತ್ತಾರೆ ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ. ಇದಕ್ಕೆ ಆನೇಕರ ಹೆಸರುಗಳು ಕೇಳಿ ಬರುತ್ತಿವೆ. ಗಣೇಶ್, ಡಾಲಿ ಧನಂಜಯ್, ರಮೇಶ್ ಅರವಿಂದ್, ರಿಷಬ್ ಶೆಟ್ಟಿ ಹೆಸರುಗಳು ಕೂಡ ಚಾಲ್ತಿಯಲ್ಲಿವೆ. ಇದರ ನಡುವೆ ಮತ್ತೊಬ್ಬ ವ್ಯಕ್ತಿಯೊಬ್ಬರಿಗೆ ಸಾನ್ವಿ ಅವರನ್ನು ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರ ಸ್ಥಾನದಲ್ಲಿ ನೋಡುವ ಆಸೆಯಾಗಿದೆ. ಹೀಗಾಗಿ ತಡಮಾಡದೇ ಮುಂದಿನ ಬಿಗ್ ಬಾಸ್ ಹೋಸ್ಟ್ ನೀವು ಆಗಬಹುದು ಎಂದು ಪ್ರಶ್ನೆಯನ್ನು ವ್ಯಕ್ತಿ ಕೇಳಿದ್ದಾರೆ. ಇದಕ್ಕೆ ಸಾನ್ವಿ ನನಗೆ ಅಷ್ಟು ತಾಳ್ಮೆ ಇಲ್ಲ ಬಾಸ್ ಸಾರಿ ಎಂದು ಉತ್ತರವನ್ನು ನೀಡಿದ್ದಾರೆ. ಹೀಗೆ ಸಾನ್ವಿ ಸುದೀಪ್ ತಮಗೆ ಕೇಳಲಾದ ಬಹುತೇಕ ಪ್ರಶ್ನೆಗಳಿಗೆ ಮುಚ್ಚು ಮರೆಯಿಲ್ಲದೇ ಉತ್ತರವನ್ನು ನೀಡಿದ್ದಾರೆ. ತಮಾಷೆ ಕೂಡ ಮಾಡಿದ್ದಾರೆ.


Click it and Unblock the Notifications











