ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನೇ ಹೋಲುವ ಸಿನಿಮಾ ಟೀಸರ್ ರಿಲೀಸ್? ಇಷ್ಟು ಬೇಗ ಸಿನಿಮಾನೂ ಆಯ್ತಾ?

ಹಾಸನದ ಎಂಪಿ ಪ್ರಜ್ವಲ್ ರೇವಣ್ಣ ಪೆಬ್ ಡ್ರೈವ್ ಪ್ರಕರಣ ದೇಶಾದ್ಯಂತ ಹಲ್‌ಚಲ್ ಎಬ್ಬಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಸದ್ಯ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ವಿದೇಶಕ್ಕೆ ಹಾರಿದ್ದಾರೆ. ರಾಜ್ಯ ಸರ್ಕಾರ ಎಸ್‌ಐಟಿ ತಂಡವನ್ನು ರಚಿಸಿದ್ದು, ತನಿಖೆ ಮುಂದುವರೆದಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನ ವಾರಂಟ್​​​ ಜಾರಿಗೊಳಿಸಿದೆ. ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗಾಗಿ ಎಸ್‌ಐಟಿ ತಂಡ ಶೋಧವನ್ನು ನಡೆಸುತ್ತಿದೆ. ಭಾರತಕ್ಕೆ ಮರಳುತ್ತಿದ್ದಂತೆ ಪ್ರಜ್ವಲ್ ರೇವಣ್ಣರನ್ನು ಬಂಧಿಸಲಾಗುತ್ತೆ. ಈಗಾಗಲೇ ಅವರ ಪಾಸ್‌ಪೋರ್ಟ್ ರದ್ಧತಿಗೂ ಎಸ್‌ಐಟಿ ತಂಡ ಅರ್ಜಿಯನ್ನು ಸಲ್ಲಿಸಿದೆ.

Is there any connection to Kannada movie Simha Guhe and Prajwal Revanna s pendrive cases

ಒಂದು ಕಡೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದೇಶದೆಲ್ಲೆಡೆ ಹೊತ್ತಿ ಉರಿಯುತ್ತಿರುವಾಗಲೇ ಇದೇ ಪ್ರಕರಣವನ್ನು ಹೋಲುವ ಸಿನಿಮಾವೊಂದರ ಟೀಸರ್ ರಿಲೀಸ್ ಆಗಿದೆ. ಸದ್ಯಕ್ಕೀಗ ಇದು ಪ್ರಜ್ವಲ್ ರೇವಣ್ಣ ಪ್ರಕರಣವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿದೆ. ಅಲ್ಲಿಗೆ ಆ ಸಿನಿಮಾ ಯಾವುದು? ಈ ಬಗ್ಗೆ ಸಿನಿಮಾ ತಂಡ ಏನು ಹೇಳುತ್ತೆ ಅನ್ನೋದನ್ನು ತಿಳಿಯಲು ಮುಂದೆ ಓದಿ. .

ಕೆಲವು ದಿನಗಳಿಂದ ಹೊಸಬರ ಸಿನಿಮಾ 'ಸಿಂಹಗುಹೆ' ಪ್ರಚಾರ ಮಾಡುತ್ತಿದೆ. ಆದ್ರೀಗ ಈ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಲಾಗಿದೆ. ಈ ಟೀಸರ್‌ನಲ್ಲಿ ಇರುವ ತುಣುಕುಗಳು ಸದ್ಯ ಎಲ್ಲೆಡೆ ಸಂಚಲನ ಸೃಷ್ಟಿಸುತ್ತಿರುವ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನೇ ಹೋಲಿತ್ತಿದೆ. ಸದ್ಯ ರಿಲೀಸ್ ಆಗಿರುವ 'ಸಿಂಹಗುಹೆ' ಟೀಸರ್‌ಗೂ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಏನಾದರೂ ಸಂಬಂಧ ಇದೆಯೇ? ಅನ್ನೋದನ್ನು ಚಿತ್ರದ ನಿರ್ದೇಶಕ ಎಸ್‌ಜಿಆರ್ ಪ್ರತಿಕ್ರಿಯಿಸಿದ್ದಾರೆ.

"ಎಲ್ಲರಿಗೂ ಈಗ ಹಾಗೆ ಅನಿಸುತ್ತಿರಬಹುದು ಅಷ್ಟೇ. ನಾವು ಈ ಸಿನಿಮಾ ಮಾಡಿ ಒಂದೂವರೆ ವರ್ಷ ಆಯ್ತು. ಸೆನ್ಸಾರ್ 2022 ಡಿಸೆಂಬರ್ ಆಗಿದೆ. ನಮ್ಮ ಸಿನಿಮಾದಲ್ಲಿರುವ ಕಂಟೆಂಟ್ ಅಲ್ಲಿ ಕಾಣಿಸುತ್ತಿದೆ ಈಗ. ಸಿನಿಮಾದಲ್ಲಿ ಇರೋದನ್ನು ಬಿಟ್ಟು ಬೇರೆ ಏನೂ ಮಾಡುವುದಕ್ಕೆ ಹೋಗಿಲ್ಲ." ಎಂದು ನಿರ್ದೇಶಕ ಎಸ್‌ಜಿಆರ್ ಪ್ರತಿಕ್ರಿಯಿಸಿದ್ದಾರೆ.

Is there any connection to Kannada movie Simha Guhe and Prajwal Revanna s pendrive cases

'ಸಿಂಹಗುಹೆ' ಸಿನಿಮಾ ಪ್ರಜ್ವಲ್ ರೇವಣ್ಣ ಪ್ರಕರಣ ಹೊರಬಂದ ಬಳಿಕ ನಿರ್ಮಾಣ ಮಾಡಿದ್ದಲ್ಲ. ಈ ಹಿಂದೆನೇ ಸಿನಿಮಾ ಶೂಟಿಂಗ್ ಆಗಿದೆ. ಹೀಗಾಗಿ ತಮ್ಮ ಸಿನಿಮಾಗೂ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ. "ಈ ಸಿನಿಮಾ ಯಾವುದೇ ಸತ್ಯ ಘಟನೆಗಳನ್ನು ಆಧರಿಸಿದ ಸಿನಿಮಾ ಅಲ್ಲ. ನಾನು ಕಥೆ ಬರೆದು ಬಹಳ ವರ್ಷಗಳಾಗಿದ್ದವು. ಆಗ ಕೆಲವರೊಂದಿಗೆ ಚರ್ಚೆ ಮಾಡಿದಾಗ, ಇದು ಬೇರೆ ಲೆವೆಲ್ ಸಿನಿಮಾ. ಇಂಗ್ಲಿಷ್ ಸಿನಿಮಾ ರೇಂಜ್‌ಗೆ ಈ ಸಿನಿಮಾ ಇದೆ. ಇಲ್ಲಿನ ನೆಟಿವಿಗೆ ಒಗ್ಗುತ್ತಾ ಅಂತ ಹೆದರಿ ಹೆದರಿ ಇಲ್ಲಿವರೆಗೂ ಸಿನಿಮಾ ತೆಗೆದುಕೊಂಡು ಬಂದಿದೆ ಅಷ್ಟೇ. ಈ ಸಿನಿಮಾವನ್ನು ಮಾಡಿದ್ದರೆ, 2018ರಲ್ಲೇ ರಿಲೀಸ್ ಆಗುತ್ತಿತ್ತು." ಎಂದು 'ಸಿಂಹಗುಹೆ' ಚಿತ್ರದ ನಿರ್ದೇಶಕರು ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಮತ್ತೊಂದು ಹೋಲಿಕೆ ಇದೆ. ಈ ಸಿನಿಮಾದ ಹೀರೊ ಹಾಗೂ ನಿರ್ಮಾಪಕ ರವಿ ಶಿರೂರ್ ಕೂಡ ವಿದೇಶದಲ್ಲಿ ಇದ್ದಾರೆ. "ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಹಾಗೂ ನಮ್ಮ ಸಿನಿಮಾ ಎರಡೂ ಕಾಕತಾಳೀಯ ಅಷ್ಟೇ. ಅಲ್ಲದೆ ನಮ್ಮ ಸಿನಿಮಾ ನಾಯಕ ಕೂಡ ವಿದೇಶದಲ್ಲಿಯೇ ಇದ್ದಾರೆ. ಆದರೆ, ಅವರು ಇರೋದೇ ಅಲ್ಲಿ. ಅವರಿಗೆ ಅಲ್ಲಿ ಸ್ವಂತ ಮನೆಯಿದೆ. ಅವರಿಗೆ ಸಿನಿಮಾಗೆ ಆಫರ್ ಬಂದಾಗ ಅವರು ನಟಿಸಿ ಹೋಗುತ್ತಾರೆ." ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

More from Filmibeat

English summary
Is Simha Guhe Kannada movie based on Prajwal Revanna pendrive case?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X