ರಾಕಿ ಭಾಯ್ ಸಾವಿನ ಬಗ್ಗೆ ವಿಜಯೇಂದ್ರ ಇಂಗಳಗಿ ಸುಳ್ಳು ಹೇಳಿರಬಹುದೇ? ಯಾಕೀ ಅನುಮಾನ?
'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕಳೆದ ವರ್ಷ ಏಪ್ರಿಲ್ 14ರಂದು ಗ್ರ್ಯಾಂಡ್ ಆಗಿ ತೆರೆಕಂಡಿದ್ದ ಈ ಸಿನಿಮಾ ಹಲವು ದಾಖಲೆಗಳನ್ನು ಮಾಡಿದೆ. ಕೋಲಾರ ಗೋಲ್ಡ್ ಫೀಲ್ಡ್‌ನಲ್ಲಿ ಸೆಟ್ಟೇರುವ ಈ ಕಥೆ ರಾಕಿ ಭಾಯ್ ಚರಿತ್ರೆಯನ್ನು ಬಿಚ್ಚಿಟ್ಟಿತ್ತು.
ರಾಕಿ ಭಾಯ್ ತನ್ನ ತಾಯಿ ಸಾವಿನ ಬಳಿಕ ಆಕೆ ಆಸೆಯನ್ನು ಈಡೇರಿಸಲು ಮುಬೈಗೆ ಬರುತ್ತಾನೆ. ಅಲ್ಲಿ ಮಾಫಿಯಾ ಗ್ಯಾಂಗ್ ಜೊತೆ ಸೇರಿಕೊಂಡ ರಾಕಿ ಹೇಗೆ ಬೆಳೆದ, ಆತ ಕೆಜಿಎಫ್ ಕೋಟಿಯೊಳಗೆ ಬಂದ ಅನ್ನೋದನ್ನು 'ಕೆಜಿಎಫ್'ನಲ್ಲಿ ನೋಡಿದ್ದಾಗಿದೆ. ಅದೇ 'ಕೆಜಿಎಫ್ ಚಾಪ್ಟರ್ 2'ನಲ್ಲಿ ರಾಕಿ ಭಾಯ್ ಹೇಗೆ ಬೆಳೆದ ಅನ್ನೋದನ್ನು ತೋರಿಸಲಾಗಿದೆ.

'ಕೆಜಿಎಫ್ 2' ಕ್ಲೈಮ್ಯಾಕ್ಸ್‌ನಲ್ಲಿ ರಾಕಿಭಾಯ್ ಸಾವು ಸಿನಿಮಾಗೆ ಕಿಕ್ ಕೊಟ್ಟಿತ್ತು. ಇಲ್ಲಿಗೆ ರಾಕಿ ಭಾಯ್ ಚರಿತ್ರೆ ಮುಗಿದೇ ಹೋಯ್ತಾ? 'ಕೆಜಿಎಫ್ ಚಾಪ್ಟರ್ 3' ಬರೋದಿಲ್ವಾ? ಅನ್ನೋ ಗೊಂದಲಕ್ಕೆ ಹುಟ್ಟಿಕೊಂಡಿತ್ತು. ಇದೇ ವೇಳೆ ಸಿನಿಮಾದ ಕ್ಲೈಮ್ಯಾಕ್ ಪಾರ್ಟ್ 3 ಬಗ್ಗೆನೂ ಸುಳಿವು ನೀಡಲಾಗಿತ್ತು. ಈಗ ಒಂದು ವರ್ಷದ ಬಳಿಕ 'ಕೆಜಿಎಫ್ 3' ಆರಂಭದ ಸುಳಿವನ್ನು ನೀಡಲಾಗಿದೆ.
'ಕೆಜಿಎಫ್ 2' ಕ್ಲೈಮ್ಯಾಕ್ಸ್ ಸುಳ್ಳಾ?
ಪ್ರಶಾಂತ್ ನೀಲ್ ಕಲ್ಪನೆಯಲ್ಲಿ 'ಕೆಜಿಎಫ್ 2' ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದರು. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಭಾಯ್ ಅನ್ನು ಯಾಕೆ ಸಾಯಿಸಿದ್ರು? ಕಥೆ ಇಲ್ಲಿಗೆ ಕೊನೆಯಾಗುತ್ತಾ? ಅನ್ನೋ ಪ್ರಶ್ನೆಗೆ ಪ್ರಶಾಂತ್ ಕೆಲವು ದಿನಗಳ ಹಿಂದೇನೆ ಸುಳಿವು ನೀಡಿದ್ದರು. 'ಕೆಜಿಎಫ್ 3' ಮಾಡಬಹುದಾದ ಸಾಧ್ಯತೆ ಇದೆ ಎಂದು ಪ್ರಶಾಂತ್ ಸುಳಿವು ಬಿಟ್ಟು ಕೊಟ್ಟಿದ್ದರು.
ಇನ್ನೊಂದು ಕಡೆ ಯಶ್ ಕೂಡ 'ಕೆಜಿಎಫ್ 3' ಸುಳಿವು ಬಿಟ್ಟುಕೊಟ್ಟಿದ್ದರೂ, ಸಿನಿಮಾ ಮಾಡಿಯೇ ಮಾಡುತ್ತೇವೆ ಅಂತ ಹೇಳಿರಲಿಲ್ಲ. ಈಗ ಒಂದು ವರ್ಷ ಬಳಿಕ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಕೆಜಿಎಫ್ 3 ಬಗ್ಗೆ ಸುಳಿವು ನೀಡಲಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರವಾದ ಚರ್ಚೆ ಆರಂಭ ಆಗಿದೆ. ಆನಂದ್ ಇಂಗಳಗಿಯ ಮಗ ವಿಜಯೇಂದ್ರ ಇಂಗಳಗಿ ರಾಕಿ ಸಾವಿನ ಬಗ್ಗೆ ಸುಳ್ಳು ಹೇಳಿದ್ದಾರೆ ಅಂತಾನೇ ಚರ್ಚೆಯಾಗುತ್ತಿದೆ.
ವಿಜಯೇಂದ್ರ ಇಂಗಳಗಿ ಸುಳ್ಳು ಹೇಳಿದ್ದಾರಾ?
'ಕೆಜಿಎಫ್ 2' ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಭಾಯ್ ಮೇಲೆ ಭಾರತೀಯ ನೌಕಾ ಸೇನೆ ಅಟ್ಯಾಕ್ ಮಾಡುತ್ತೆ. ಆ ದಾಳಿಯಲ್ಲಿ ರಾಕಿ ಭಾಯ್ ಸಾಯುತ್ತಾನೆ. ಆದ್ರೀಗ ರಾಕಿ ಭಾಯ್ ಬದುಕಿರುವ ಬಗ್ಗೆ ಅಭಿಮಾನಿಗಳಿಗೆ ಒಂದು ಸುಳಿವು ಸಿಕ್ಕಿದೆ. ಹೀಗಾಗಿ ರಾಕಿ ಭಾಯ್ ಕಥೆ ಹೇಳುವ ವಿಜಯೇಂದ್ರ ಇಂಗಳಗಿ ಸುಳ್ಳು ಹೇಳಿದ್ದಾರೆ ಅಂತ ಚರ್ಚೆಯಾಗುತ್ತಿದೆ.
ಆನಂದ್ ಇಂಗಳಗಿ (ಅನಂತ್ ನಾಗ್) ಪುತ್ರ ವಿಜಯೇಂದ್ರ ಇಂಗಳಗಿ (ಪ್ರಕಾಶ್ ರೈ)ಯನ್ನು 'ಕೆಜಿಎಫ್ ಚಾಪ್ಟರ್ 2' ಪರಿಚಯ ಮಾಡಲಾಗಿತ್ತು. ಆನಂದ್ ಇಂಗಳಗಿಗೆ ರಾಕಿ ಭಾಯ್ ಹಾಗೂ ಕೆಜಿಎಫ್ ಬಗ್ಗೆ ಇದ್ದಂತಹ ಆಸಕ್ತಿ ವಿಜೇಯೇಂದ್ರ ಇಂಗಳಗಿಗೆ ಇಲ್ಲ. ವಿಜಯೇಂದ್ರ ಇಂಗಳಗಿ ಕಥೆಯನ್ನು ತಿರುಚಿದ್ದಾನೆ ಎಂದು ವಾದ ಮಾಡುತ್ತಿದ್ದಾರೆ. ಅಲ್ಲದೆ ಕೆಜಿಎಫ್ ಹಾಗೂ ಮಾಳವಿಕಾ ಅವಿನಾಶ್ ಕುತೂಹಲಕ್ಕೆ ಬ್ರೇಕ್ ಹಾಕುವ ಸಲುವಾಗಿ ರಾಕಿ ಪಾತ್ರವನ್ನು ಸಾಯಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದು ಥಿಯೇರಿ ಏನು?
ಇನ್ನೊಂದು ಕಡೆ ವಿಜಯೇಂದ್ರ ಇಂಗಳಗಿ ಸುಳ್ಳನ್ನೇ ಹೇಳಿಲ್ಲ. ಅವರು ತನ್ನ ತಂದೆ ಬರೆದ ಕಥೆಯನ್ನು ಪ್ರಾಮಾಣಿಕವಾಗಿ ಹೇಳಿರಬಹುದು. ಆದರೆ, ಆನಂದ್ ಇಂಗಳಗಿಗೆ ರಾಕಿ ಭಾಯಿನೇ ತನ್ನ ಸಾವಿನ ಬಗ್ಗೆ ಬರೆಯುವಂತೆ ಯಾಕೆ ಹೇಳಿರಬಾರದು ಅಂತಾನೂ ಸೋಶಿಯಲ್ ಮೀಡಿಯಾದಲ್ಲಿ ವಾದ ಮಾಡುತ್ತಿದ್ದಾರೆ.
ಇಂದು (ಏಪ್ರಿಲ್ 14) ಹೊಂಬಾಳೆ ರಿಲೀಸ್ ಮಾಡಿರುವ ವಿಡಿಯೋದ ಕೊನೆಯಲ್ಲಿ ರಿವರ್ಸ್ ವಿಡಿಯೋ ಹಾಕಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಇಷ್ಟೆಲ್ಲಾ ಥಿಯೇರಿ ಮಂಡಿಸುತ್ತಿದ್ದಾರೆ. ಆದರೆ, 'ಕೆಜಿಎಫ್ 2' ಕೊನೆಯಲ್ಲೇ ಈ ಬಗ್ಗೆ ಸುಳಿವು ನೀಡಲಾಗಿತ್ತು. ಈಗ ಒಂದು ವರ್ಷದ ಬಳಿಕ 3 ಎಂದು ತೋರಿಸುವ ಮೂಲಕ ಹೊಂಬಾಳೆ ಸಿನಿಮಾ ಸೆಟ್ಟೇರುವ ಬಗ್ಗೆ ಸುಳಿವು ನೀಡಿದ್ದಾರೆ.


Click it and Unblock the Notifications











