ಸಾಕ್ಷ್ಯ ನಾಶಕ್ಕೆ ದರ್ಶನ್‌ಗೆ ಹಣ ಬಂದಿದ್ದು ಎಲ್ಲಿಂದ? ₹84ಲಕ್ಷ ಕೊಟ್ಟಿದ್ದು ಯಾರ್‍ಯಾರು?
ದರ್ಶನ್ ಜೈಲು ಸೇರಿ ಮೂರು ತಿಂಗಳುಗಳ ಮೇಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜಾಮೀನು ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದರು. ಅಷ್ಟರಲ್ಲೇ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡುವುದಕ್ಕೆ ಲಕ್ಷ ಲೆಕ್ಕದಲ್ಲಿ ಹಣ ಬಳಕೆಯಾಗಿದ್ದರ ಬಗ್ಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 27ರಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಶೀಘ್ರವೇ ದರ್ಶನ್‌ಗೆ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅಷ್ಟರಲ್ಲೇ ದರ್ಶನ್ ಐಟಿ ಶಾಕ್ ಎದುರಾಗಿದೆ. ಬಳ್ಳಾರಿಯಲ್ಲಿ ಇಂದು (ಸೆಪ್ಟೆಂಬರ್ 26) & ನಾಳೆ (ಸೆಪ್ಟೆಂಬರ್ 27) ದರ್ಶನ್‌ಗೆ 84 ಲಕ್ಷ ರೂಪಾಯಿ ಹಣ ಎಲ್ಲಿಂದ ಬಂತು? ಹಣದ ಮೂಲವೇನು ಅನ್ನೋದನ್ನು ಪತ್ತೆ ಹಚ್ಚಲು ವಿಚಾರಣೆ ಮಾಡುತ್ತಿದ್ದಾರೆ.

ಈಗಾಗಲೇ ಐಟಿ ಅಧಿಕಾರಿಗಳು ದರ್ಶನ್ ಇರುವ ಬಳ್ಳಾರಿ ಜೈಲಿಗೆ ಆಗಮಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ದರ್ಶನ್ ಕಡೆಯಿಂದ ಆಡಿಟರ್ ಕೂಡ ಬಂದಿದ್ದಾರೆ. ಹೀಗಾಗಿ ಎರಡು ದಿನಗಳ ಕಾಲ ನಿರಂತರವಾಗಿ ದರ್ಶನ್ ಬಳಿಯಿಂದ ಅಷ್ಟೊಂದು ಹಣ ಎಲ್ಲಿಂದ ಬಂತು ಅನ್ನೋ ಬಗ್ಗೆ ಮಾಹಿತಿ ಕಲೆ ಹಾಕಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ಸಾಕ್ಷ್ಯನಾಶಕ್ಕೆ ದೊಡ್ಡ ಮೊತ್ತದ ಹಣವನ್ನು ಚಲಾವಣೆ ಮಾಡಲಾಗಿದೆ ಎಂಬ ವಿಷಯ ತನಿಖೆ ವೇಳೆ ರಿವೀಲ್ ಆಗಿತ್ತು. ಪೊಲೀಸರ ತನಿಖೆ ವೇಳೆ ಸುಮಾರು 84 ಲಕ್ಷ ರೂಪಾಯಿಯಷ್ಟು ಹಣವನ್ನು ವಶ ಪಡೆದಿದ್ದರು. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವಶಕ್ಕೆ ಪಡೆದ ಬಳಿಕ ಐಟಿ ಅಧಿಕಾರಿಗಳು ಮಾಹಿತಿಯನ್ನು ತಿಳಿಸಲಾಗಿತ್ತು.
ಈ ಸಂಬಂಧ ಐಟಿ ಅಧಿಕಾರಿಗಳು ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್‌ನಿಂದ ಐಟಿ ಅಧಿಕಾರಿಗಳು ಅನುಮತಿ ಪಡೆದ ಬಳಿಕ ವಿಚಾರಣೆಗೆ ಆಗಮಿಸಿದ್ದಾರೆ. ಇಂದು ಮತ್ತು ನಾಳೆ ಬಳ್ಳಾರಿ ಜೈಲಿನಲ್ಲಿ ಇಂಚಿಂಚು ವಿಚಾರಣೆ ನಡೆಯಲಿದೆ. ಈ ಮಧ್ಯೆ ದರ್ಶನ್‌ಗೆ ಹಣವನ್ನು ಕೊಟ್ಟವರು ಯಾರು ಅನ್ನೋ ಪ್ರಶ್ನೆ ಎದುರಾಗಲಿದೆ. ಈಗಾಗಲೇ ಮಾಜಿ ಕಾರ್ಪೋರೇಟರ್ ಮೋಹನ್ ರಾಜ್ ಹಣ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ಹೀಗಿದ್ದರೂ ದರ್ಶನ್‌ಗೆ ಇಷ್ಟು ದೊಡ್ಡ ಮೊತ್ತ ಒಬ್ಬರಿಂದಲೇ ಬಂದಿರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ದರ್ಶನ್‌ಗೆ ನಗದು ರೂಪದಲ್ಲಿ ಯಾರೆಲ್ಲ ಹಣವನ್ನು ನೀಡಿದ್ದಾರೆ ಅನ್ನೋದು ಈ ವಿಚಾರಣೆ ವೇಳೆ ಹೊರಬೀಳುವ ಸಾಧ್ಯತೆಯಿದೆ. ದರ್ಶನ್ ಬಂಧನ ಆಗುವ ವೇಳೆ ನಿರ್ದೇಶಕ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ 'ಡೆವಿಲ್' ದರ್ಶನ್ ಭಾಗಿಯಾಗಿದ್ದರು. ಹೀಗಾಗಿ ಮಿಲನಾ ಪ್ರಕಾಶ್ ಕಡೆಯಿಂದಲೂ ದರ್ಶನ್ ನಗದು ರೂಪದಲ್ಲಿ ಹಣ ಕೊಟ್ಟಿರಬಹುದೇ? ಎಂಬ ಪ್ರಶ್ನೆ ಎದ್ದೇಳುವ ಸಾಧ್ಯತೆಯಿದೆ.
ಇವರೊಂದಿಗೆ ದರ್ಶನ್‌ಗೆ ಆಪ್ತರಾಗಿರುವವರೂ ಹಣ ಕೊಟ್ಟಿರಬಹುದಾ? ದರ್ಶನ್ ಸಿನಿಮಾ ಮಾಡಬೇಕಿರುವ ನಿರ್ಮಾಪಕರಿಂದ ಅಡ್ವಾನ್ಸ್ ರೂಪದಲ್ಲಿ ಹಣವನ್ನೇನಾದರೂ ಪಡೆದಿದ್ದಾರಾ? ಇಂತಹ ಒಂದಿಷ್ಟು ಪ್ರಶ್ನೆಗಳು ದರ್ಶನ್‌ಗೆ ಐಟಿ ಅಧಿಕಾರಿಗಳು ಕೇಳಬಹುದು. ಈ ಎರಡು ದಿನಗಳಲ್ಲಿ ದರ್ಶನ್ ಕೊಡುವ ಉತ್ತರದ ಮೇಲೆ ಜಾಮೀನಿನ ಭವಿಷ್ಯ ಕೂಡ ನಿರ್ಧಾರ ಆಗಲಿದೆ. ಸೆಪ್ಟೆಂಬರ್ 27ರಂದು ಜಾಮೀನು ಸಿಕ್ಕು ಹೊರ ಬಂದರೆ, ಐಟಿ ಅಧಿಕಾರಿಗಳ ವಿಚಾರಣೆಗೆ ತೊಂದರೆ ಆಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಜೈಲಿನಲ್ಲಿರುವಾಗಲೇ ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications










