'A'ಅಂತಹ ಸಿನಿಮಾ ಸಿಕ್ಕಿದ್ದಕ್ಕೆ "GOD IS GREAT"ಎಂದು ಚಾಂದಿನಿ; ರೀ-ರಿಲೀಸ್ ಬಗ್ಗೆ ನಟಿಯ ಭವಿಷ್ಯವೇನು?

ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ಅದೆಷ್ಟೋ ಸಿನಿಮಾಗಳು ಇವೆ. ಇವು ಪರಭಾಷೆಯಲ್ಲಿಯೂ ಸದ್ದು ಮಾಡಿದ ಉದಾಹರಣೆಗಳನ್ನು ನೋಡಬಹುದು. ಇಂತಹ ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದ 'A'ಸಿನಿಮಾ ಕೂಡ ಸೇರಿಕೊಂಡಿದೆ.

ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾದ ಸ್ಕ್ರೀನ್ ಪ್ಲೇನ್ ಬಗ್ಗೆ ಚರ್ಚೆಯಾಗಿತ್ತು. ಹೀಗೂ ಚಿತ್ರಕಥೆಯನ್ನು ಬರೆದು ಜನರನ್ನು ಮೆಚ್ಚಿಸಬಹುದು ಅನ್ನೋದನ್ನು ಉಪ್ಪಿ 'ಎ' ಸಿನಿಮಾ ಮೂಲಕ ಸಾಬೀತು ಮಾಡಿದ್ದರು. 1998ರಲ್ಲಿ ತೆರೆಕಂಡಿದ್ದ 'ಎ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.

Its an iconic love story that transcends time says Upendra starrer A movie actress Chandini

ಇದೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಚಾಂದಿನಿ ಎಂಟ್ರಿ ಕೊಟ್ಟಿದ್ದರು. ಇಂದಿಗೂ ಚಾಂದಿನಿಯನ್ನು ಇದೇ 'ಎ' ಸಿನಿಮಾ ಮೂಲಕವೇ ಗುರುತಿಸುತ್ತಾರೆ. ಮೊದಲ ಸಿನಿಮಾದಲ್ಲಿಯೇ ಆ ಮಟ್ಟಿಗೆ ಹೆಸರು ತಂದು ಕೊಟ್ಟ ಸಿನಿಮಾವಿದು. ಈಗ ಮತ್ತೆ ಈ ಸಿನಿಮಾವನ್ನು ಮರು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ನಟಿ ಚಾಂದಿನಿ ಪ್ರತಿಕ್ರಿಯೆ ನೀಡಿದ್ದಾರೆ.

ನಾಳೆ (ಮೇ 17) 'ಎ' ಸಿನಿಮಾ ಅದ್ಧೂರಿಯಾಗಿ ಮರು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ 'ಎ' ಸಿನಿಮಾದ ನಾಯಕಿ ಚಾಂದಿನಿ ಆ ದಿನಗಳ ನೆನಪುಗಳನ್ನು ಹಂಚಿಕೊಂಡಿದ್ದಾರೆ. 'ಎ' ನಟಿ ಚಾಂದಿನಿಯ ಬದುಕನ್ನೇ ಬದಲಿಸಿದ ಸಿನಿಮಾ. ಸುಮಾರು 26 ವರ್ಷಗಳ ಹಿಂದೆ 'ಎ' ಸಿನಿಮಾ ತೆರೆಕಂಡಾಗ ಇದು 20 ವರ್ಷಗಳಷ್ಟು ಮುಂದೆ ಬರಬೇಕಿದ್ದ ಸಿನಿಮಾವನ್ನು ಇಂದೇ ತೋರಿಸಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ 26 ವರ್ಷಗಳ ಬಳಿಕ ಮತ್ತೆ 'ಎ' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಪ್ರತಿಕ್ರಿಯೆ ಹೇಗಿರುತ್ತೋ ಅನ್ನುವ ಕುತೂಹಲದಲ್ಲಿ ಸಿನಿಮಾ ಮಂದಿ ಇದ್ದಾರೆ.

'ಎ' ಮರು ಬಿಡುಗಡೆಯಾಗುತ್ತಿರುವುದಕ್ಕೆ ನಾಯಕಿ ಚಾಂದಿನಿ ಖುಷಿ ವ್ಯಕ್ತಪಡಿಸಿದ್ದಾರೆ. " ಎ ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ. ಅದರಿಂದ ನನಗೆ ಸಿಕ್ಕಿದ ಕನ್ನಡ ಜನರ ಪ್ರೀತಿ ಸಿಕ್ಕಿದೆ. ಈ ಸಿನಿಮಾದ ಒಂದು ಫೇಮಸ್ ಡೈಲಾಗ್ "GOD IS GREAT" ಅನ್ನುವ ಹಾಗೆ ದೇವರ ಆಶೀರ್ವಾದವೂ ಸಿಕ್ಕಿದೆ. ನಾನು ಇವತ್ತಿಗೂ 'A' ಚಾಂದಿನಿ ರೀತಿಯಲ್ಲೇ ಇದ್ದೀನಿ. ಎಲ್ಲಾ ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ ಎ ಸಿನಿಮಾ" ಎಂದು ನಾಯಕಿ ಹೇಳಿಕೊಂಡಿದ್ದಾರೆ.

Its an iconic love story that transcends time says Upendra starrer A movie actress Chandini

ಇದೇ ಸಂದರ್ಭದಲ್ಲಿ ಉಪೇಂದ್ರ ನಿರ್ದೇಶನದ ಬಗ್ಗೆನೂ ನಟಿ ಚಾಂದನಿ ಮಾತಾಡಿದ್ದಾರೆ. ತಮ್ಮ ನೆಚ್ಚಿನ ನಿರ್ದೇಶಕ ಉಪೇಂದ್ರ ಎಂದು ಹೇಳಿಕೊಂಡಿದ್ದಾರೆ. "ಪ್ರಬುದ್ಧ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ‌. ಅಂದಿಗೂ, ಇಂದಿಗೂ ನನ್ನ ಮೆಚ್ಚಿನ ನಿರ್ದೇಶಕ ಉಪೇಂದ್ರ." ಎಂದು ನಟಿ ಚಾಂದಿನಿ ಹೇಳಿದ್ದಾರೆ.

ಗುರುಕಿರಣ್ ಹಾಕಿದ್ದ ಟ್ಯೂನ್‌ಗಳು ಇಂದಿಗೂ ಸಂಗೀತ ಪ್ರಿಯರನ್ನು ಕಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಡೈಲಾಗ್‌ಗಳು ಇಂದಿಗೂ ಯುವಕರ ಫೇವರಿಟ್. ಹೀಗಾಗಿ ಚಾಂದಿನಿ ಈ ಸಿನಿಮಾ ಮೂಲಕವೇ ಗುರುತಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತಾರೆ. "ಇಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಮೇ 17 'ಎ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಈಗಲೂ ಭರ್ಜರಿ ಯಶಸ್ಸು ಕಾಣುತ್ತೆ" ಎಂದು ಚಾಂದಿನಿ ಹೇಳಿದ್ದಾರೆ.

'ಎ' ಸಿನಿಮಾ ಮರು ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ಒಳ್ಳೆಯ ಕಥೆ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಚಾಂದಿನಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಮತ್ತೆ ಚಾಂದಿನಿಯನ್ನು ಸಿನಿಮಾಗಳಲ್ಲಿ ನಿರೀಕ್ಷೆ ಮಾಡಬಹುದು.

More from Filmibeat

English summary
Actress Chandini about A movie re releasing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X