For Quick Alerts
  ALLOW NOTIFICATIONS  
  For Daily Alerts

  ಸಂಗೊಳ್ಳಿ ರಾಯಣ್ಣ ಅಬ್ಬರಕ್ಕೆ ಶಾರೂಖ್ ಚಿತ್ರ ತಲ್ಲಣ

  |

  ಕನ್ನಡ ಚಿತ್ರರಂಗ ಸಂತಸ ಪಡುವ ಸುದ್ದಿ ಉತ್ತರ ಕರ್ನಾಟಕದ ಭಾಗದಿಂದ ಬಂದಿದೆ. ಶಾರೂಖ್ ಖಾನ್ ಅಭಿನಯದ 'ಜಬ್ ತಕ್ ಹೇ ಜಾನ್' ಚಿತ್ರ ಉತ್ತರ ಕರ್ನಾಟಕದ ಭಾಗದಲ್ಲಿ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರದ ಮುಂದೆ ಮಂಡಿಯೂರಿದೆ.

  ಬಿಡುಗಡೆಯಾದ ಮೊದಲ ದಿನದಂದು ಶಾರೂಖ್ ಚಿತ್ರ ಸ್ವಲ್ಪ ಮಟ್ಟಿನ ಮುನ್ನಡೆ ಸಾಧಿಸಿದರೂ ಒಂದೇ ದಿನದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರ ಮತ್ತೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಜಬ್ ತಕ್ ಹೇ ಜಾನ್ ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ಹಿನ್ನಡೆ ಅನುಭವಿಸಿದೆ.

  ನವೆಂಬರ್ 13ರಂದು ಬಿಡುಗಡೆಯಾಗಿದ್ದ ಶಾರೂಖ್ ಚಿತ್ರಕ್ಕೆ ಬೆಂಗಳೂರು, ಮೈಸೂರು ಮತ್ತು ಮಂಗಳೂರು ಪ್ರಾಂತ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಹಿಂದಿ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಎಂದೇ ಬಿಂಬಿತವಾಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರ ಅಷ್ಟೇನೂ ಸದ್ದು ಮಾಡುತ್ತಿಲ್ಲ. ಕಾರಣ.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

  ಹುಬ್ಬಳ್ಳಿ, ಬಿಜಾಪುರ, ಗೋಕಾಕ್, ಬೆಳಗಾವಿ, ಹಾವೇರಿ, ದಾವಣಗೆರೆ ಮುಂತಾದ ನಗರಗಳಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರದ ಮುಂದೆ ಜಬ್ ತಕ್ ಹೇ ಜಾನ್ ಚಿತ್ರದ ಕಲೆಕ್ಷನ್ ಎರಡನೇ ಸ್ಥಾನಕ್ಕೆ ನಿಂತಿದೆ.

  ಕಳೆದವಾರವಂತೂ ದೀಪಾವಳಿ ಹಬ್ಬದ ಸಾಲುಸಾಲು ರಜೆಯನ್ನು ಈ ಭಾಗದ ಜನರು ಸಂಗೊಳ್ಳಿ ರಾಯಣ್ಣ ಚಿತ್ರ ವೀಕ್ಷಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಬಹಳಷ್ಟು ಚಿತ್ರ ಅಭಿಮಾನಿಗಳು ಥಿಯೇಟರ್ ಕಡೆ ಬಂದ ಪರಿಣಾಮ ಪ್ರದರ್ಶನದ ಸಂಖ್ಯೆಯನ್ನು ಹೆಚ್ಚುಗೊಳಿಸಲಾಗಿತ್ತು.

  ಆದರೆ ಶಿವಮೊಗ್ಗ, ಭದ್ರಾವತಿ, ತುಮಕೂರು , ಚಿಕ್ಕಮಗಳೂರಿನಲ್ಲಿ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರದ ತುಂಬಿದ ಪ್ರದರ್ಶನಕ್ಕೆ ಜಬ್ ತಕ್ ಹೇ ಜಾನ್ ಚಿತ್ರ ಬ್ರೇಕ್ ಹಾಕಿದೆ.

  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

  English summary
  Shahrukh Khan's Jab Tak Hai Jaan could not stop the dream run of Darshan's Krantiveera Sangolli Rayanna in North Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X