"ವಿಕ್ರಾಂತ್ ರೋಣದಿಂದ ನಷ್ಟ ಆಗಿಲ್ಲ.. ಸುದೀಪ್ ಸಂಭಾವನೆ ಪಡೆಯದೆ ಕೈ ಹಿಡಿದಿದ್ದಾರೆ": ನಿರ್ಮಾಪಕ ಜಾಕ್ ಮಂಜು

ಕಿಚ್ಚ ಸುದೀಪ್ ಹಾಗೂ ಅವರ ಸಿನಿಮಾವೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ನಿರ್ಮಾಪಕ ಎಂಎನ್ ಕುಮಾರ್ ಆರೋಪದ ಬೆನ್ನಲ್ಲೇ 'ಹುಚ್ಚ' ಸಿನಿಮಾದ ನಿರ್ಮಾಪಕ ರೆಹಮಾನ್ ಪತ್ರಿಕಾಗೋಷ್ಠಿ ಮಾಡಿದ್ದು ಗೊತ್ತೇ ಇದೆ. ಈ ವೇಳೆ ರೆಹಮಾನ್ ಕೊಟ್ಟ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.

ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ'ದಿಂದ ತನಗೆ ನಷ್ಟ ಆಗಿದೆ ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದಾಗಿ ರೆಹಮಾನ್ ಹೇಳಿದ್ದರು. ಎರಡು ದಿನಗಳ ಬಳಿಕ ನಿರ್ಮಾಪಕ ಜಾಕ್ ಮಂಜು ಈ ಸಂಬಂಧ ನಿರ್ಮಾಪಕರ ಸಂಘಕ್ಕೆ ಪತ್ರ ಬರೆದಿದ್ದಾರೆ.

Jack Manju gave clarity throught Letter on Kichcha Sudeep Movie Vikrant Rona Loss

ಈ ಪತ್ರದಲ್ಲಿ 'ವಿಕ್ರಾಂತ್ ರೋಣ' ತಮಗೆ ನಷ್ಟ ಆಗಿದೆಯಾ? ಇಲ್ಲ ಲಾಭ ಆಗಿದೆಯಾ? ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಿರ್ಮಾಪಕ ರೆಹಮಾನ್ ಕೊಟ್ಟ ಹೇಳಿಕೆಗೆ ಜಾಕ್ ಮಂಜು ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. ನಿರ್ಮಾಪಕರ ಸಂಘಕ್ಕೆ ಬರೆದ ಸುದೀರ್ಘ ಪತ್ರದಲ್ಲಿ 'ವಿಕ್ರಾಂತ್ ರೋಣ' ನಷ್ಟದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಜಾಕ್ ಮಂಜು ಪತ್ರದಲ್ಲೇನಿದೆ?

"ಎಲ್ಲರಿಗೂ ನಮಸ್ಕಾರ.. ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಾನೂ ಓರ್ವ ನಿರ್ಮಾಪಕ- ವಿತರಕನಾದ್ದೇನೆ. ಅದೃಷ್ಟವಶಾತ್​​ ನಾನೂ ನಿರ್ಮಾಪಕರ ಸಂಘದ ಸದಸ್ಯನಾಗಿದ್ದೇನೆ. ಮೊನ್ನೆ ನನಗೂ ನಿರ್ಮಾಪಕರ ಸಂಘದ ಕಚೇರಿಗೆ ಧಿಡೀರನೆ ಬಂದು ಪತ್ರಕರ್ತರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಯಾವುದೇ ಮುನ್ಸೂಚನೆ ಇಲ್ಲದೇ ಗೋಷ್ಠಿ ನಡೆಸಿ ಸತ್ಯವನ್ನು ಬಟಾಬಯಲು ಮಾಡಬೇಕೆಂದೆನಿಸಿತು. ಆದರೆ ನನಗೆ ಆ ಸ್ಥಳದ ಬಗ್ಗೆ ಗೌರವವಿದೆ. ನಿರ್ಮಾಪಕರ ಸಂಘ ಈ ಹಿಂದಿನಿಂದಲೂ ಸಮಸ್ತ ನಿರ್ಮಾಪಕರುಗಳನ್ನು ಕಾಪಾಡಿಕೊಂಡು ಬರಲು ಹಾಕಿಕೊಂಡಿರುವ ಸ್ವಯಂ ಕಟ್ಟುಪಾಡುಗಳ ಅರಿವಿದೆ."

"ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಯಸದೇ ನನ್ನ ಉತ್ತರ-ಅಭಿಪ್ರಾಯಗಳನ್ನು ನಿಮಗೇ ಬರೆಯುತ್ತಿದ್ದೇನೆ. ಪತ್ರಿಕಾಗೋಷ್ಠಿ ಕರೆದು ಸ್ವಕುಚಮರ್ಧನ ಮಾಡಿಕೊಳ್ಳುವ, ಸುಳ್ಳುಗಳ ರಾಶಿ ತಂದೊಡ್ಡಿ ನಿರ್ಮಾಪಕರದಷ್ಟೇ ಅಲ್ಲ, ಸಂಘದ ಮರ್ಯಾದೆಯನ್ನೂ ತೆಗೆಯುವ ಇರಾದೆ ನನಗಿಲ್ಲ. ನಾನು ಹೇಳುವುದರಲ್ಲಿ ಸುಳ್ಳಿದ್ದರೆ, ಕಾರಾನಿನ ಅಲ್ಲಾ ಭಗವದ್ಗೀತೆಯ ಶ್ರೀಕೃಷ್ಣನೇ ನೋಡಿಕೊಳ್ಳುತ್ತಾನೆ." ಎಂದು ನಿರ್ಮಾಪಕ ಜಾಕ್ ಮಂಜು ಬೇಸರ ವ್ಯಕ್ತಪಡಿಸಿದ್ದಾರೆ.

Jack Manju gave clarity throught Letter on Kichcha Sudeep Movie Vikrant Rona Loss

'ವಿಕ್ರಾಂತ್ ರೋಣ'ದಿಂದ ನನಗೆ ನಷ್ಟ ಆಗಿಲ್ಲ

"ನನಗಂತೂ ನಿರ್ಮಾಪಕರ ಸಂಘವು ನಿರ್ಮಾಪಕರ ಹಿತ ಕಾಯುವಲ್ಲಿ ಬಳಸುತ್ತಿರುವ ತಾರತಮ್ಯ, ಮಲತಾಯಿ ಧೋರಣೆಗಳ ಬಗ್ಗೆ ಅತೀವವಾದ ಸಂಕಟವಿದೆ. ಆದರೂ ತಮ್ಮ ಘನ ಸಮಕ್ಷಮಕ್ಕೆ ಉತ್ತರಿಸುತ್ತೇನೆ. ಸಂಘ ನಾಲ್ಕಾರು ಜನರ ಹಿತಕಾಯುವ ಮಾಫಿಯಾ ಮಾತ್ರ ಆಗದಿರಲಿ. ಸ್ವಯಂ ಕಟ್ಟುಪಾಡು ಎಲ್ಲರ ಹಿತಾಸಕ್ತಿಗೆ ಒಗ್ಗಲಿ ಎಂಬುದು ನನ್ನ ಮನವಿ. ನನಗೆ ಸುದೀಪ್ ನಾಯಕತ್ವದ ಪ್ಯಾನ್​ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'ದಿಂದ ಯಾವುದೇ ನಷ್ಟವಾಗಿಲ್ಲ. ತನ್ನ ಕೋಟಿಗಟ್ಟಲೇ ಸಂಭಾವನೆ ಪಡೆಯದೇ ಸುದೀಪ್ ಎಂದಿನಂತೆ ನನ್ನ ಕೈ ಹಿಡಿದಿದ್ದಾರೆ. ಅದಿರಲಿ, ಅದು ನಮ್ಮ ಮನೆಯ ಸಹೋದರರ ವಿಷಯ."

"ಖಾವಂದರೇ.. ರೆಹಮಾನ್ ರವರ ಹೇಳಿಕೆಯಲ್ಲಿನ ದ್ವಂದ ಕಾಡುತ್ತಿದೆ. ಸಾವಿರಾರು ಸಲ ಫೋನ್ ಮಾಡಿದರೂ ಅವರ ಕರೆ ಸ್ವೀಕರಿಸದ ನಾನು, ನನಗೆ ವಿಕ್ರಾಂತ್ ರೋಣ ಸಿನಿಮಾದಿಂದ ನಷ್ಟವೇ ಆಗಿದ್ದರೆ, ಇದೇ ವ್ಯಕ್ತಿ ಅಂದರೆ, ಸಾವಿರಾರು ಕರೆಗಳನ್ನು ಸ್ವೀಕರಿಸದ ರೆಹಮಾರನ್ನು ಹುಡುಕಿ ನನಗೆ ನಷ್ಟವಾಯಿತು ಎಂದು ಹೇಳಿಕೊಂಡೆನೇ? ಎಷ್ಟು ಹಾಸ್ಯಾಸ್ಪದ ಹೇಳಿಕೆಯಲ್ಲವೇ? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ- ರೆಹಮಾನ್ ಸಂಬಂಧವೇನು? ಇದರಲ್ಲೇ ರೆಹಮಾನ್ ಅವರ ಸತ್ಯಾಸತ್ಯತೆ ನಿಮಗೆ ತಿಳಿಯಲಿಲ್ಲವೇ?" ಎಂದು ಜಾಕ್ ಮಂಜು ಪ್ರಶ್ನೆ ಮಾಡಿದ್ದಾರೆ.

"ನಾನೇ ಸಹಾಯ ಮಾಡಿದ್ದೇನೆ"

"ಇದು ನನ್ನ ಸಹೋದರರಾದ ಸುದೀಪ್ ಮತ್ತು ನನ್ನ ನಡುವೆ ತಂದಿಟ್ಟು ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ ಅಲ್ಲವೇ? ಇದಕ್ಕೇ ಹೇಳಿದ್ದು ಶ್ರೀಯುತರಾದ ಸುದೀಪ್ ಅವರು ಪ್ರತಿಕ್ರಿಯಿಸಲು ಯೋಗ್ಯವಾದರೆ ಮಾತ್ರ ಉತ್ತರಿಸುತ್ತಾರೆಂದು. ನನ್ನ ಎಲ್ಲ ಕಷ್ಟ-ನಷ್ಟ ಹೇಳಿಕೊಳ್ಳಲು ಹಿತೈಷಿಗಳಿದ್ದಾರೆ. ನಿರ್ಮಾಪಕರ ಸಂಘದ ಖಾವಂದರುಗಳಾದ ತಾವಿದ್ದೀರಿ. ಎಲ್ಲ ಬಿಟ್ಟು, ರೆಹಮಾನ್​ರಿಗೆ ಕರೆ ಮಾಡಿದೆನೇ? ನಾನೇ ನನ್ನ ಕೈಯಾರೆ, ಆಸ್ಪತ್ರೆ, ಮನೆ ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ಸುದೀಪ್ ಅವರು ನೀಡಿದ ಸಹಾಯವನ್ನು ರೆಹಮಾನ್‌ ಅವರಿಗೆ ತಲುಪಿಸಿ ಜೀವಂತ ಸಾಕ್ಷಿಯಾಗಿದ್ದೇನೆ."

"ನನ್ನ ಸಹೋದರರಾದ ನಿರ್ಮಾಪಕರೂ ಆದ ಹಿರಿಯ ಕಲಾವಿದ ಶ್ರೀ ಸುದೀಪ್ ಅವರ ಬಗ್ಗೆ ನಿರರ್ಗಳ ಎರಡು ಗಂಟೆಗಳ ಕಾಲ ಸುಳ್ಳಿನ 'ಪ್ರವಾಹ ಗೋಷ್ಠಿ'ಗೆ ಅವಕಾಶ ಮಾಡಿಕೊಟ್ಟು ನನ್ನ ಹೆಸರೂ ಅದರಲ್ಲಿ ಸಾಕ್ಷಿಯಾಗಿ ಬಂತು. ಎಲ್ಲದಕ್ಕೂ ಒಂದು ಪರಿವೀಕ್ಷಣೆ, ಅಪ್ತ ಸಮಾಲೋಚನೆ ಮಾಡಬೇಕು. ನಂತರ ನನ್ನಂತಹ ಓರ್ವ ನಿರ್ಮಾಪಕ - ವಿತರಕನ ಮೇಲೆ ಇಲ್ಲಸಲ್ಲದ ಸುಳ್ಳು ಹೇಳಲು ಸಂಘದ ಕಚೇರಿಯನ್ನೇ ಪತ್ರಿಕಾಗೋಷ್ಠಿಗೆ ಕರೆಯುವಾಗ ನನ್ನ ದೂರವಾಣಿಗಾದರೂ ಒಂದು ಸಂದೇಶ ಕೊಡಬಹುದಿತ್ತಲ್ಲವೇ? ನಿರ್ಮಾಪಕರ ಹಿತಕಾಯುವಲ್ಲಿ ತಾವು ಹಿಡಿಯುತ್ತಿರುವ ಮಾರ್ಗ ಸಂಘದ ಘನತೆಯನ್ನೂ ಕುಗ್ಗಿಸುತ್ತಿದೆ. ಇನ್ನು ಮುಂದಾದರೂ ಇದಾಗದಿರಲಿ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಾ, ನಂಬುತ್ತಾ.." ಎಂದು ನಿರ್ಮಾಪಕ ಜಾಕ್ ಮಂಜು ಸುದೀರ್ಘ ಪತ್ರ ಬರೆದಿದ್ದಾರೆ.

More from Filmibeat

English summary
Jack Manju gave clarity throught Letter on Kichcha Sudeep Movie Vikrant Rona Loss, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X