Breaking: ಕಿಚ್ಚ ಸುದೀಪ್‌ಗೆ ಅನಾರೋಗ್ಯ: ಕೋವಿಡ್ ಪಾಸಿಟಿವ್ ಎಂದವರಿಗೆ ಜಾಕ್ ಮಂಜು ಪ್ರತಿಕ್ರಿಯೆ!
ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರದಿಂದ ದಕ್ಷಿಣದವರೆಗೂ ಸಿನಿಮಾಗಾಗಿ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಇನ್ನೂ ಒಂದು ವಾರ ಬಾಕಿಯಿದೆಯಷ್ಟೇ. ಈ ಬೆನ್ನಲ್ಲೇ ಕಿಚ್ಚನ ಆರೋಗ್ಯದಲ್ಲಿ ಏರು-ಪೇರಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಿಚ್ಚ ಸುದೀಪ್‌ಗೆ ಎರಡನೇ ಬಾರಿ ಕೋವಿಡ್ ಪಾಸಿಟಿವ್ ಎಂದು ಸುದ್ದಿ ಹಬ್ಬಿತ್ತು. ಈ ಬಗ್ಗೆ 'ವಿಕ್ರಾಂತ್ ರೋಣ' ಸಿನಿಮಾದ ನಿರ್ಮಾಪಕ ಹಾಗೂ ಸುದೀಪ್ ಆಪ್ತರಾಗಿರುವ ಜಾಕ್ ಮಂಜು ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟತೆ ನೀಡಿದ್ದಾರೆ.
ಕಿಚ್ಚನಿಗೆ ಕೋವಿಡ್ ಪಾಸಿಟಿವ್?
ಕಿಚ್ಚ ಸುದೀಪ್‌ಗೆ ಕೊರೊನಾ ಪಾಸಿಟಿವ್ ಬಂದಿದೆ ಅನ್ನುವ ಸುದ್ದಿನೇ ಸುಳ್ಳು ಎಂದು ಜಾಕ್ ಮಂಜು ಹೇಳಿದ್ದಾರೆ. " ಕಿಚ್ಚ ಸುದೀಪ್ ಕ್ರಿಕೆಟ್ ಆಡುವಾಗ ಮಳೆಯಲ್ಲಿ ಒದ್ದೆಯಾಗಿದ್ದರು. ಈ ಕಾರಣಕ್ಕೆ ಅವರಿಗೆ ವೈರಲ್ ಫೀವರ್ ಬಂದಿದೆಯಷ್ಟೇ. ಅವರಿಗೆ ಕೋವಿಡ್ ಪಾಸಿಟವ್ ಬಂದಿದೆ" ಎಂದು ಹೇಳಿದ್ದಾರೆ.

"ಅಲ್ಲದೆ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾ ಪ್ರಚಾರದಲ್ಲಿಯೂ ಭಾಗವಹಿಸಲಿದ್ದಾರೆ. 22ನೇ ತಾರೀಖು ಮುಂಬೈನಲ್ಲಿ ವಿಕ್ರಾಂತ್ ರೋಣ ಪ್ರಚಾರದಲ್ಲಿ ತೊಡಗಲಿದ್ದಾರೆ. ಹಾಗೇ 23,24ರಂದು ಮುಂಬೈನಲ್ಲಿ, 26ನೇ ತಾರೀಖು ಹೈದರಾಬಾದ್‌ನಲ್ಲಿ ಹಾಗೂ 27ಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ. 27ಕ್ಕೆ ದುಬೈಗೆ ಪ್ರೀಮಿಯರ್ ಶೋಗೆ ಹೋಗಲಿದ್ದಾರೆ.


Click it and Unblock the Notifications











