ನಟಿ ಜಾಕ್ವೆಲಿನ್‌ಗೆ ಕರ್ನಾಟಕದ ವಂಚಕ ಸುಕೇಶ್ ಕೊಟ್ಟ ದುಬಾರಿ ಗಿಫ್ಟ್ ಬೆಲೆ ಕೇಳಿದರೆ ಬೆಚ್ಚಿಬೀಳ್ತೀರಾ!

ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೈಡ್‌ಲೈನ್‌ನಲ್ಲಿದ್ದಾಳೆ. 200 ಕೋಟಿ ವಂಚನೆ ಪ್ರಕರಣದಲ್ಲಿ ವಿಕ್ರಾಂತ್ ರೋಣ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ತಳುಕು ಹಾಕಿಕೊಂಡಿದ್ದರಿಂದ ಇಡಿ ಮುಂದೆ ಹಾಜರಾಗಿದ್ದಾರೆ. ಈ ವೇಳೆ ನಟಿಗೆ ಹಲವು ಗಂಟೆಗಳ ಕಾಲ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಜಾಕ್ವಿಲಿನ್ ತನಗೆ ಕರ್ನಾಟಕದ ವಂಚಕ ಸುಕೇಶ್ ಚಂದ್ರಶೇಖರ್ ನೀಡಿದ ದುಬಾರಿ ಉಡುಗೊರೆಗಳ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಅಲ್ಲದೆ ತನ್ನನ್ನು ಹೇಗೆ ಬುಟ್ಟಿಗೆ ಬೀಳಿಸಿಕೊಂಡ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.

ಇಡಿ ಅಧಿಕಾರಿಗಳು ಜಾಕ್ವೆಲಿನ್‌ನಿಂದ ಎರಡು ಬಾರಿ ಹೇಳಿಕೆ ಪಡೆದಿದ್ದನ್ನು ಚಾರ್ಜ್ ಶೀಟ್‌ನಲ್ಲಿ ದಾಖಲು ಮಾಡಿದ್ದಾರೆ. ವಂಚಕ ಸುಕೇಶ್ ಚಂದ್ರಶೇಖರ್ ಮೊದಲ ಭೇಟಿಯಲ್ಲಿ ತನ್ನ ಹೆಸರು ಶೇಖರ್ ರತ್ನ ವೇಲ ಎಂದು ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ ತಾನು ಜಯಲಲಿತಾ ಕುಟುಂಬಕ್ಕೆ ಸೇರಿದವನು, ಸನ್ ಟಿವಿಯ ಮಾಲೀಕನೆಂದು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕಚೇರಿಯಿಂದ ನಕಲಿ ಕರೆ ಮಾಡುತ್ತಿದ್ದ. ಆರಂಭದಲ್ಲಿ ಜಾಕ್ವೆಲಿನ್ ಅವನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಬಳಿಕ ಮೇಕಪ್ ಮ್ಯಾನ್‌ಗೆ ಶಾನ್ ಮುತ್ತತ್ತಿಲ್‌ಗೆ ಕರೆ ಮಾಡಿ, ಶೇಖರ್ ಬಹಳ ಮುಖ್ಯವಾದ ವ್ಯಕ್ತಿ ಆತನ ಜೊತೆ ಸಂಪರ್ಕದಲ್ಲಿರುವಂತೆ ನಕಲಿ ಕರೆ ಮಾಡಿದ್ದ ವಂಚಕ ಸುಕೇಶ್. ಈ ವೇಳೆ ಸುಕೇಶ್ ದುಬಾರಿ ಉಡುಗೊರೆಗಳನ್ನು ಜಾಕ್ವೆಲಿನ್‌ಗೆ ಕಳುಹಿಸಿಕೊಟ್ಟಿದ್ದ. ಅವುಗಳ ಬೆಲೆ ಮತ್ತು ಗಿಫ್ಟ್ ಯಾವುದರ ವಿವರ ಇಲ್ಲಿದೆ.

ಲಕ್ಷಾಂತರ ರೂ. ಮೌಲ್ಯದ ದುಬಾರಿ ಬ್ಯಾಗ್ ಉಡುಗೊರೆ

ಲಕ್ಷಾಂತರ ರೂ. ಮೌಲ್ಯದ ದುಬಾರಿ ಬ್ಯಾಗ್ ಉಡುಗೊರೆ

ಅಂತರಾಷ್ಟ್ರೀಯ ಬ್ರ್ಯಾಂಡ್ ಗುಸ್ಸಿ ಕಂಪನಿಯ ಬ್ಯಾಗ್‌ಗಳನ್ನು ಉಡುಗೊರೆಯಾಗಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಕಳುಹಿಸಿಕೊಟ್ಟಿದ್ದ ಸುಕೇಶ್. ಇಟಲಿ ಮೂಲದ ಈ ಗುಚ್ಚಿ ಬ್ಯಾಗ್‌ಗಳು ಬಲು ದುಬಾರಿ. ಭಾರತದಲ್ಲಿ ಈ ಕಂಪನಿಯ ಮಳಿಗೆ ಇರುವುದು ಕೆಲವೇ ಕೆಲವು ಮಾತ್ರ. ಈ ಕಂಪನಿಯ ಬ್ಯಾಗ್‌ಗಳ ವಿಶೇಷ ದರ ಒಂದೂವರೆ ಲಕ್ಷಯಿಂದ ಆರಂಭ ಆಗುತ್ತವೆ. ಇಂತಹ ಬ್ಯಾಗ್ ಅನ್ನು ಜಾಕ್ವೆಲಿನ್‌ಗೆ ನೀಡಿದ್ದ. ಇದರೊಂದಿಗೆ ಫ್ರಾನ್ಸ್ ಮೂಲದ ಶನೆಲ್ ಕಂಪನಿಯ ಬ್ಯಾಗ್‌ನ್ನೂ ಕಳುಹಿಸಿಕೊಟ್ಟಿದ್ದ. ಈ ಬ್ಯಾಗ್ ಬೆಲೆ ಏನು ಕಮ್ಮಿಯಿಲ್ಲ. 53 ಲಕ್ಷದ ಬೆಲೆ ಬಾಳುವ ಬ್ಯಾಗ್‌ನ್ನೂ ಕಂಪನಿ ತಯಾರಿಸುತ್ತದೆ. ಇಂತಹ ದುಬಾರಿ ಕಂಪನಿಯ ಬ್ಯಾಗ್ ಅನ್ನು ಸುಕೇಶ್ ನೀಡಿದ್ದ.

ಫ್ರಾನ್ಸ್ ಕಂಪನಿಯ ದುಬಾರಿ ಶೋ ಗಿಫ್ಟ್

ಫ್ರಾನ್ಸ್ ಕಂಪನಿಯ ದುಬಾರಿ ಶೋ ಗಿಫ್ಟ್

ಕರ್ನಾಟಕ ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಫರ್ನಾಂಡೀಸ್‌ಗೆ ದುಬಾರಿ ಬೆಲೆ ಬಾಳುವ ಶೋಗಳನ್ನೂ ಕಳುಹಿಸಿಕೊಟ್ಟಿದ್ದನ್ನು ನಟಿ ಒಪ್ಪಿಕೊಂಡಿದ್ದಾರೆ. ಫ್ರಾನ್ಸ್ ಕಂಪನಿ ಲೂಯಿಸ್ ವಿಟಾನ್ ಅವರ ಬೆಲೆಬಾಳುವ ಶೂವನ್ನು ಜಾಕ್ವೆಲಿನ್‌ಗೆ ನೀಡಿದ್ದಾನೆ. ಸೆಲೆಬ್ರೆಟಿಗಳಿಗೆ ಅಂತಾನೇ ತಯಾರಿಸುವ ಈ ಕಂಪನಿಯ ಶೂಗಳ ಬೆಲೆ ಲಕ್ಷದಿಂದ ಆರಂಭ ಆಗುತ್ತವೆ. ಇಂತಹ ದುಬಾರಿ ಉಡುಗೊರೆಯನ್ನು ಜಾಕ್ವೆಲಿನ್‌ ವಂಚಕ ಸುಕೇಶ್‌ನಿಂದ ಸ್ವೀಕರಿಸಿದ್ದಾರೆ.

ಜಾಕ್ವೆಲಿನ್‌ಗೆ 45 ಲಕ್ಷ ಕಾರು ಉಡುಗೊರೆ

ಜಾಕ್ವೆಲಿನ್‌ಗೆ 45 ಲಕ್ಷ ಕಾರು ಉಡುಗೊರೆ

ಬ್ಯಾಗ್ ಹಾಗೂ ಶೂಗಳನ್ನು ಕಳುಹಿಸಿಕೊಟ್ಟ ಬಳಿಕ ವಂಚಕ ಸುಕೇಶ್ ಚಂದ್ರಶೇಖರ್ ದುಬಾರಿ ಮೊತ್ತದ ಕಾರನ್ನು ಕಳುಹಿಸಿಕೊಟ್ಟಿದ್ದ. ಬ್ರಿಟನ್ ಮೂಲದ ಈ ಮಿನಿ ಕಾರು ನೋಡುವುದಕ್ಕಷ್ಟೇ ಸಣ್ಣ ಕಾರು. ಇದರ ಬೆಲೆ ಆರಂಭ ಆಗುವುದೇ 45 ಲಕ್ಷದಿಂದ. ಬಿಎಂಡ್ಲ್ಯೂ ನಿರ್ಮಿಸುತ್ತಿರುವ ಈ ಕಾರನ್ನೂ ಜಾಕ್ವೆಲಿನ್‌ಗೆ ಕಳುಹಿಸಿಕೊಟ್ಟಿದ್ದ. ಆದರೆ, ಈ ಕಾರನ್ನು ಜಾಕ್ವೆಲಿನ್ ಫರ್ನಾಂಡೀಸ್ ಹಿಂತಿರುಗಿಸಿದ್ದಳು ಎಂದು ಇಡಿ ಅಧಿಕಾರಿಗಳು ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿದೆ.

ವಜ್ರದ ಕಿವಿಯೋಲೆ ಕಳುಹಿಸಿದ್ದ ಸುಕೇಶ್

ವಜ್ರದ ಕಿವಿಯೋಲೆ ಕಳುಹಿಸಿದ್ದ ಸುಕೇಶ್

ಸುಕೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್‌ಗೆ ಬ್ಯಾಗ್, ಶೋ, ಮಿನಿ ಕೂಪರ್ ಕಾರು ಅಷ್ಟೇ ಅಲ್ಲ ವಜ್ರದ ಕಿವಿಯೋಲೆಯನ್ನೂ ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ. ಇದರೊಂದಿಗೆ ಬ್ರಾಸ್‌ಲೆಟ್‌ಗಳನ್ನೂ ನೀಡಿದ್ದ. ಮೂಲಗಳ ಪ್ರಕಾರ, ಜಾಕ್ವೆಲಿನ್ ದೊಡ್ಡ ಮೊತ್ತದ ಹಣವನ್ನು ತನ್ನ ಸಂಬಂಧಿಕರಿಗೆ ವರ್ಗಾವಣೆ ಮಾಡಿದ್ದಾಳೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಜೊತೆ ಫೆಬ್ರವರಿ 2021ರಿಂದ ಆಗಸ್ಟ್ ವರೆಗೂ ಸಂಪರ್ಕದಲ್ಲಿದ್ದ ಎನ್ನಲಾಗುತ್ತಿದೆ.

More from Filmibeat

English summary
Jacqueline Fernandez list of gifts received from conman Sukesh Chandrasjekar. Gucci & Chanel bags, diamond earrings, Louis Vuitton shoes and Mini Cooper from conman Sukesh Chandrashekhar, confirms ED.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X