»   » ಮಕ್ಕಳ ಹೆಸರಿನಲ್ಲೂ ಡಾ.ರಾಜ್ ಅಭಿಮಾನ ಮೆರೆದ ಜಗ್ಗೇಶ್

ಮಕ್ಕಳ ಹೆಸರಿನಲ್ಲೂ ಡಾ.ರಾಜ್ ಅಭಿಮಾನ ಮೆರೆದ ಜಗ್ಗೇಶ್

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಅಂದ್ರೆ ನಟ ಜಗ್ಗೇಶ್ ರವರಿಗೆ ಎಲ್ಲಿಲ್ಲದ ಅಭಿಮಾನ. ಜಗ್ಗೇಶ್ ಕಷ್ಟಕಾಲದಲ್ಲಿ ಇದ್ದಾಗ ಅವರಿಗೆ ರಾಜ್ ಕುಮಾರ್ ಸಹಾಯ ಮಾಡಿ, ಇತ್ತ ಸಿನಿಮಾ ಕ್ಷೇತ್ರದಲ್ಲೂ ಅವರು ಅಭಿವೃದ್ದಿಹೊಂದಲೂ ಬೆನ್ನಲುಬಾಗಿ ನಿಂತರು. ಡಾ.ರಾಜ್ ಮತ್ತು ಪಾರ್ವತಮ್ಮ ರವರ ಮೇಲೆ ಜಗ್ಗೇಶ್ ಗೆ ಅಪಾರ ಅಭಿಮಾನ.

ಸದಾಕಾಲ ಡಾ.ರಾಜ್ ಕುಮಾರ್ ರವರು ತೋರಿದ ಪ್ರೀತಿಯನ್ನು ಮೆಲುಕು ಹಾಕುವ ನಟ ಜಗ್ಗೇಶ್ ಅವರ ಮೇಲಿನ ಅಭಿಮಾನವನ್ನು ತಮ್ಮ ಮಕ್ಕಳಿಗೆ ಹೆಸರಿಡುವುದರ ಮೂಲಕವು ತಮ್ಮ ಪ್ರೀತಿ ಎಷ್ಟು ದೊಡ್ಡ ಮಟ್ಟದ್ದು ಎಂದು ತೋರಿಸಿದ್ದಾರೆ.

ಹೌದು. ನಟ ಜಗ್ಗೇಶ್ ತಮ್ಮ ಮಕ್ಕಳಿಗೆ ಯತಿರಾಜ್ ಮತ್ತು ಗುರುರಾಜ್ ಎಂದು ಹೆಸರಿಟ್ಟಿರುವುದು ಡಾ.ರಾಜ್ ಮೇಲಿನ ಅಪಾರ ಪ್ರೀತಿಯಿಂದ. ಈ ಬಗ್ಗೆ ಜಗ್ಗೇಶ್ ರವರ ಇತ್ತೀಚಿನ ಒಂದು ಟ್ವೀಟ್ ಮೂಲಕ ತಿಳಿದಿದೆ. "ನನ್ನಂತೆ ಅಣ್ಣನ ಪ್ರೀತಿ ಪಡೆದ ಅದೃಷ್ಟವಂತ ಯತಿರಾಜ. ನನ್ನ ಇಬ್ಬರ ಮಕ್ಕಳ ಹೆಸರಲ್ಲಿ ರಾಜ್ ಸೇರಿಸಿ ಖುಷಿಪಟ್ಟೆ. ಯತಿ+ರಾಜ್/ರಾಜ್+ಗುರು. ಗುರುರಾಜ್ ಮದುವೆಯು ಅಣ್ಣ ಹುಟ್ಟಿದದಿನವೇ ನಡೆಯಿತು" ಎಂದು ಜಗ್ಗೇಶ್ ರವರು ಟ್ವೀಟ್ ಮಾಡಿದ್ದು, ಡಾ.ರಾಜ್ ಕುಮಾರ್ ರವರು ಪ್ರೀತಿಯಿಂದ ಪರಿಮಳ ಜಗ್ಗೇಶ್ ಮತ್ತು ಯತಿರಾಜನ ಜೊತೆ ಮಾತನಾಡುತ್ತಿದ್ದ ದೀರ್ಘಕಾಲದ ಹಳೆಯ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಆ ಅಪರೂಪದ ಫೋಟೋವನ್ನು ನೀವು ಒಮ್ಮೆ ನೋಡಿ.

Jaggesh children's named after Kannada actor Dr Rajkumar

ಚಿತ್ರಕೃಪೆ:Chitraloka.com

ಜಗ್ಗೇಶ್ ಗೆ ಡಾ.ರಾಜ್ ಕುಟುಂಬ ಜೊತೆ ಅವಿನಾಭಾವ ಸಂಬಂಧ, ಎಲ್ಲಿಲ್ಲದ ಅಕ್ಕರೆ. ಅಲ್ಲದೇ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ರವರ ಸಿನಿಮಾಗಳನ್ನು ನೋಡುವುದರ ಜೊತೆಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಇಂಟರ್‌ವಲ್ ದೃಶ್ಯ ನೋಡಿ 'ರೋಮಾಂಚನವಾಯ್ತು ಕಾರಣ ಈ ಚಿತ್ರದಿಂದ ಪುನೀತ್ ರೂಪದಲ್ಲಿ ರಾಜಣ್ಣ ವಾಪಸ್ ಬಂದಂತೆ ಭಾಸವಾಯಿತು. ಈ ಚಿತ್ರ ಪುನೀತನಿಗೆ ಮೈಲಿಗಲ್ಲು' ಎಂದು ಟ್ವೀಟ್ ಮಾಡಿದ್ದರು.[ಕನ್ನಡ ಓಕೆ, ಹಿಂದಿ ಯಾಕೆ: ಹಿಂದಿ ಹೇರಿಕೆಗೆ ಕನ್ನಡ ಚಿತ್ರರಂಗದ ಧಿಕ್ಕಾರ!]

English summary
Jaggesh children's named after Kannada actor Dr Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada