ಜಗ್ಗೇಶ್ ನಟನೆಯ ಭಾರತದ ಮೊದಲ ಹಾಸ್ಯ ಪ್ರಧಾನ ಪ್ಯಾನ್ ಇಂಡಿಯಾ ಚಿತ್ರ 'ತೋತಾಪುರಿ' ಟೀಸರ್ ರಿಲೀಸ್

ಪ್ಯಾನ್ ಇಂಡಿಯಾ ಸಿನಿಮಾ ಅನ್ನುವುದು ದಕ್ಷಿಣ ಭಾರತಕ್ಕೀಗ ಕಾಮನ್ ಆಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಮಾಡಬೇಕು ಅಂದರೆ, ನಿರ್ದೇಶಕರಿಗೆ ಮಾಸ್ ಸ್ಟೋರಿನೇ ಸಿಗಬೇಕು ಅನ್ನುವ ಕಾಲವಿದು. ಆದರೆ, ನವರಸನಾಯಕ ಜಗ್ಗೇಶ್ ಅಭಿನಯದ ಸಿನಿಮಾ 'ತೋತಾಪುರಿ' ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಮೂಲಕ ಹಾಸ್ಯ ಪ್ರಧಾನ ಸಿನಿಮಾವೊಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಸಜ್ಜಾಗಿದೆ. ಈ ಚಿತ್ರದ ಮೊದಲ ಸಾಂಗ್ ಟೀಸರ್ ಈಗ ಬಿಡುಗಡೆಯಾಗಿದೆ.

Recommended Video

ಜಗ್ಗೇಶ್ ಪ್ರಕಾರ ಜೀವನದ ಉತ್ತಮ ಪ್ರಯಾಣಿಕನಾಗೋದು ಹೀಗೆ | Jaggesh | Filmibeat Kannada

'ನೀರ್‌ದೋಸೆ' ಚಿತ್ರದ ಬಳಿಕ ಮತ್ತೆ ನಿರ್ದೇಶಕ ವಿಜಯ್​ ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಕಾಂಬಿನೇಷನ್‌ ಚಿತ್ರ 'ತೋತಾಪುರಿ'. ಮೊದಲಿಂದಲೂ ಕಚಗುಳಿ ಇಡುವ ಬರಹದಿಂದಲೇ ಸದ್ದು ಮಾಡುತ್ತಿರುವ ತೋತಾಪುರಿ ಈಗ ಹಾಡಿನ ಟೀಸರ್ ಮೂಲಕ ಸದ್ದು ಮಾಡಲು ಮುಂದಾಗಿದೆ. ಜಗ್ಗೇಶ್ 'ತೋತಾಪುರಿ' ಸಾಂಗ್ ಟೀಸರ್ ಹೇಗಿದೆ ತಿಳಿಯಲು ಮುಂದೆ ಓದಿ.

 ತೊಟ್ಟು ಬೊಟ್ಟಿನ ಮೊದಲ ನೋಟ

ತೊಟ್ಟು ಬೊಟ್ಟಿನ ಮೊದಲ ನೋಟ

'ನೀರ್ ದೋಸೆ' ಸಿನಿಮಾ ನೋಡಿ ಮೆಚ್ಚಿರುವವರಿಗೆ 'ತೋತಾಪುರಿ' ಸಿನಿಮಾ ನೋಡಬೇಕು ಅಂತ ಅನಿಸದೆ ಇರುವುದಿಲ್ಲ. ಜಗ್ಗೇಶ್ ಕಾಮಿಡಿ ಮಾಡುವುದರಲ್ಲಿ ಕಿಂಗ್ ಆದರೆ, ವಿಜಯ್ ಪ್ರಸಾದ್ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸುವುದರಲ್ಲಿ ಕಿಂಗ್. ಈ ಕಾರಣಕ್ಕಾಗಿಯೇ 'ತೋತಾಪುರಿ' ಟೀಸರ್ ನೋಡುವುದಕ್ಕೆ ಹಾಸ್ಯಪ್ರಿಯರು ಕಾಯುತ್ತಿದ್ದರು. ಈಗ ಸಿನಿಮಾ ಟೀಸರ್ ರಿಲೀಸ್ ಮಾಡದೆ ಹೋದರೂ ಇಷ್ಟು ದಿನ ಕಾದಿದ್ದಕ್ಕೆ ಸಾಂಗ್ ಟೀಸರ್ ರಿಲೀಸ್ ಮಾಡಲಾಗಿದೆ. ಸಾಂಗ್ ಟೀಸರ್ ಆರಂಭದಲ್ಲಿಯೇ ತೊಟ್ಟು ಬೊಟ್ಟಿನ ಮೊದಲ ನೋಟ, ಮೊದಲ ಮಾತು ಅಂತ ನಿರ್ದೇಶಕರು ಕ್ಯಾಪ್ಶನ್ ಕೊಟ್ಟು ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

 'ತೋತಾಪುರಿ'ಗೆ ಹಿಂದಿ ಟಚ್

'ತೋತಾಪುರಿ'ಗೆ ಹಿಂದಿ ಟಚ್

ನಿರ್ದೇಶಕರೇ ಹೇಳಿರುವಂತೆ ತೊಟ್ಟು ಬೊಟ್ಟಿನ ಮೊದಲ ನೋಟ ಮಾತನ್ನು ಹಾಡಿನ ಝಲಕ್ ಮೂಲಕ ತೋರಿಸಲು ಸಜ್ಜಾಗಿದ್ದಾರೆ. 'ತೋತಾಪುರಿ' ಸಿನಿಮಾಗೆ ಅನೂಪ್ ಸೀಳಿನ್ ಟ್ಯೂನ್ ಹಾಕಿದ್ದು, ಚಿಕ್ಕದೊಂದು ಸಾಂಗ್ ಝಲಕ್ ಅನ್ನು ರಿಲೀಸ್ ಮಾಡಲಾಗಿದೆ. ಬಾಲಿವುಡ್ 'ಕರ್ಜ್' ಸಿನಿಮಾದ ಸಾಲುಗಳ ಝಲಕ್ 'ತೋತಾಪುರಿ'ಯಲ್ಲಿ ಕಾಣಿಸುತ್ತಿದೆ. ಆದರೆ, ಇದು ಕೇವಲ ಸಾಂಗ್ ಝಲಕ್ ಅಷ್ಟೇ. ಪೂರ್ತಿ ಹಾಡು ಬಿಡುಗಡೆಯಾದ ಬಳಿಕವೇ ಹಾಡನ್ನು ಎಂಜಾಯ್ ಮಾಡಲು ಸಾಧ್ಯ. " ಇದು ಕೇವಲ ಹಾಡಿನ ಟೀಸರ್ ಅಷ್ಟೇ. ಆಡಿಯೋ ಸಾಂಗ್‌ಗಳನ್ನುಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇವೆ. ಟೀಸರ್, ಟ್ರೈಲರ್, ರಿಲೀಸ್ ಡೇಟ್‌ ಅನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತೆ." ಎಂದು ನಿರ್ಮಾಪಕ ಸುರೇಶ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

 ಪ್ಯಾನ್ ಇಂಡಿಯಾ ಸಿನಿಮಾ 'ತೋತಾಪುರಿ'

ಪ್ಯಾನ್ ಇಂಡಿಯಾ ಸಿನಿಮಾ 'ತೋತಾಪುರಿ'

'ತೋತಾಪುರಿ' ಕನ್ನಡದಲ್ಲಷ್ಟೇ ಅಲ್ಲ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಲು ಪ್ಯಾನ್ ಇಂಡಿಯಾ ರಿಲೀಸ್ ಕೂಡ ಕಾರಣ. ಇದೂವರೆಗೂ ಕನ್ನಡ ಒಂದೇ ಒಂದು ಸಿನಿಮಾಗೆ ಸಕ್ಸಸ್ ಸಿಕ್ಕಿದೆ. ಈಗ ಕಾಮಿಡಿ ಸಬ್ಜೆಕ್ಟ್ ಇಟ್ಟುಕೊಂಡು ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮುಂದಾಗಿರುವುದರಿಂದ ಸಿನಿಮಾರಂಗದಲ್ಲಿ ತೋತಾಪುರಿ ಬಗ್ಗೆ ಕೌತುಕ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ಎರಡು ಚಾಪ್ಟರ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.

 'ತೋತಾಪುರಿ' ಚಿತ್ರದಲ್ಲಿ ತಾರೆಯರ ಸಮಾಗಮ

'ತೋತಾಪುರಿ' ಚಿತ್ರದಲ್ಲಿ ತಾರೆಯರ ಸಮಾಗಮ

'ತೋತಾಪುರಿ' ಚಿತ್ರದಲ್ಲಿ ಜಗ್ಗೇಶ್ ಜೊತೆ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧನಂಜಯ್ 'ನಾರಾಯಣ್ ಪಿಳ್ಳೈ' ಅನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ, ಸುಮನ್ ರಂಗನಾಥ್ ಕೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ದತ್ತಣ್ಣ, ವೀಣಾ ಸುಂದರ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Jaggesh and Dhananjay Starrer Thothapuri chapter 1 official teaser released. Vijay Prasad Directed Thothapuri is pan India Movie also starred Aditi Prabhudeva and many more Kannada artist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X