ಚಿರಂಜೀವಿ-ಮೇಘನಾ ಮದುವೆಗೆ ಸಹಾಯ ಮಾಡಿದ್ದ ಜಗ್ಗೇಶ್
ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2018ರಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಏ 29ರಂದು ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದರು.
Recommended Video
ನಂತರ ಮೇ 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. 2017ರಲ್ಲಿ ವಜ್ರದುಂಗುರ ತೊಡಿಸುವ ಮೂಲಕ ಚಿರು ಸರ್ಜಾ, ಮೇಘನಾ ಅವರಲ್ಲಿ ಪ್ರೇಮ ನಿವೇದನೆ ಮಾಡಿದ್ದರು. ಇಬ್ಬರ ಮದುವೆ ಹಾಗೂ ಆರತಕ್ಷತೆ ಸಮಾರಂಭದಲ್ಲಿ ಚಿತ್ರರಂಗದ ಬಹುತೇಕ ಗಣ್ಯರು, ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಇಬ್ಬರದೂ ಚಿತ್ರರಂಗದ ಕುಟುಂಬವಾಗಿದ್ದರಿಂದ ಅವರ ಆಪ್ತ ವಲಯದಿಂದ ಹೆಚ್ಚಿನ ಜನರು ಭಾಗವಹಿಸಿದ್ದರು. ಮುಂದೆ ಓದಿ...

ಸಹಾಯ ಮಾಡಿದ್ದೆ- ಜಗ್ಗೇಶ್
ಚಿತ್ರರಂಗದವರೇ ಆಗಿದ್ದರೂ ಹಾಗೂ ಬಲ್ಲವರಾಗಿದ್ದರೂ ಚಿರು-ಮೇಘನಾ ಮದುವೆಗೆ ತಕ್ಷಣ ಒಪ್ಪಿಗೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಮೇಘನಾ ಮನೆಯವರಿಂದ ಒಪ್ಪಿಗೆ ಸಿಗುತ್ತಿಲ್ಲ ಎಂದಾದಾಗ ಚಿರು ನನ್ನ ಬಳಿ ಅದರ ಬಗ್ಗೆ ಹೇಳಿದ್ದ. ಕೊನೆಗೆ ಪ್ರಮೀಳಾ ಜೋಷಾಯ್ ಅವರ ಬಳಿ ಮಾತನಾಡಿ, ಒಳ್ಳೆಯ ಹುಡುಗ, ಇಷ್ಟಪಟ್ಟಿದ್ದಾರೆ. ಮದುವೆ ಮಾಡಿ ಎಂದು ಮಾತುಕತೆ ನಡೆಸಿದ್ದೆ. ಅವರ ಮದುವೆಗೆ ಸಹಾಯ ಮಾಡಿದ್ದೆ ಎಂದು ಜಗ್ಗೇಶ್ ನೆನಪಿಸಿಕೊಂಡರು.

ಅರ್ಜುನ್ ಸರ್ಜಾ ಜತೆ ಮಾತನಾಡಿದ್ದೆ
ಎರಡು ದಿನಗಳ ಹಿಂದಷ್ಟೇ ಅರ್ಜುನ್ ಸರ್ಜಾ ಜತೆ ಸುಮಾರು ಅರ್ಧ ಗಂಟೆ ಮಾತನಾಡಿದ್ದಾಗಿ ಜಗ್ಗೇಶ್ ತಿಳಿಸಿದರು. ಚಿರು ಮತ್ತು ಧ್ರುವ ಇಬ್ಬರೂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚೆನ್ನಾಗಿ ಬೆಳೆಯುತ್ತಿದ್ದಾರೆ ಎಂಬುದನ್ನು ಖುಷಿಯಿಂದ ಹೇಳಿಕೊಂಡಿದ್ದರು.

ಗುರು ಬಾಲ್ಯ ಸ್ನೇಹಿತ
ನನ್ನ ಮಗ ಗುರು ಮತ್ತು ಚಿರು ಬಾಲ್ಯ ಸ್ನೇಹಿತರು. ನಿನ್ನೆಯಷ್ಟೇ ಚಿರಂಜೀವಿ ಬಗ್ಗೆ ನಾನು ಮತ್ತು ಪರಿಮಳ ಮಾತನಾಡಿದ್ದೆವು. ಏನು ಹೇಳುವುದೋ ತೋಚುತ್ತಿಲ್ಲ. ಆತ್ಮಕ್ಕೆ ಶಾಂತಿ ಸಿಗಲಿ ಎಂಬಮಾತುಗಳು ತೀರಾ ಸಣ್ಣದು ಎನಿಸುತ್ತದೆ.

ಈ ಸಾವು ನ್ಯಾಯವೇ?
ನಂಬಲಾಗುತ್ತಿಲ್ಲ. ಹೇಳಲಾಗದ ನೋವು. ಏನಾಗುತ್ತಿದೆ ನನ್ನ ಚಿತ್ರರಂಗಕ್ಕೆ? ಅನ್ಯರ ಸಂತೋಷಕ್ಕೆ ನಟಿಸಿ ಬದುಕುವ ಜನ್ಮ ಕಲಾಬದುಕು..ಯಾವ ತಪ್ಪಿಗೆ ಈ ಶಿಕ್ಷೆ..! ನಿನ್ನ ಆತ್ಮಕ್ಕೆ ಶಾಂತಿ ಕೋರಲು ಒಪ್ಪುತ್ತಿಲ್ಲಾ ನನ್ನಮನಸ್ಸು.. ದೇವರೆ ಈ ಸಾವು ನ್ಯಾಯವೆ! ಎಂದು ಜಗ್ಗೇಶ್ ಟ್ವಿಟ್ಟರ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.


Click it and Unblock the Notifications











