'ರಾಘವೇಂದ್ರ ಸ್ಟೋರ್ಸ್' ಕಥೆ ಕೇಳಿ ಅಪ್ಪು ಕೊಟ್ಟಿದ್ದ ಸಲಹೆ ಏನು? ಆ ಆಡಿಯೋ ಕ್ಲಿಪ್ ವೈರಲ್!
ನವರಸ ನಾಯಕ ಜಗ್ಗೇಶ್ ನಟಿಸಿರುವ 'ರಾಘವೇಂದ್ರ ಸ್ಟೋರ್ಸ್' ಈಗಾಗಲೇ ಭರ್ಜರಿ ಪ್ರಚಾರ ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಇದೇ 28ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಸಂದರ್ಶನ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವಿನ ಮಾತುಕತೆಯಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಹೊರಬಿದ್ದಿದೆ. ಅದರಲ್ಲಿ ಅಪ್ಪು ಈ ಸಿನಿಮಾದ ಕಥೆ ಕೇಳಿ ನಿರ್ದೇಶಕ ಸಂತೋಷ್ ಆನಂದ್‌ರಾಮ್‌ಗೆ ಕೆಲವು ಸಲಹೆ ನೀಡಿದ್ದರು.

ರಾಘವೇಂದ್ರ ರಾಜ್‌ಕುಮಾರ್ ಹಾಗೂ ಜಗ್ಗೇಶ್ ನಡುವಿನ ಸಂಭಾಷಣೆ ಮಧ್ಯೆನೇ ಅಪ್ಪು ಸಲಹೆ ನೀಡಿದ ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಲಾಗಿದೆ. ಅದೇ ಆಡಿಯೋ ಈಗ ವೈರಲ್ ಆಗುತ್ತಿದೆ. ಹಾಗಿದ್ದರೆ, ನಿರ್ದೇಶಕ ಸಂತೋಷ್ ಆನಂದ್‌ರಾಮ್‌ಗೆ ಅಪ್ಪು ಕೊಟ್ಟಿದ್ದ ಸಲಹೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ರಾಘವೇಂದ್ರ ಸ್ಟೋರ್ಸ್' ಕಥೆ ಕೇಳಿದ್ದ ಅಪ್ಪು
ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಜಗ್ಗೇಶ್ ಇಬ್ಬರು ಮಾತುಕತೆ ಹಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದೆ. ಇದರಲ್ಲಿ ಪುನೀತ್ ರಾಜ್‌ಕುಮಾರ್ ಈ ಸಿನಿಮಾದ ಕಥೆ ಹೇಳಿದ್ದ ಸನ್ನಿವೇಶವನ್ನು ಹೇಗಿತ್ತು? ಅನ್ನೋದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
"ಎಲ್ಲದಕ್ಕಿಂತ ದೊಡ್ಡ ಖುಷಿ ಏನಂದ್ರೆ, ಈ ಕಥೆಯನ್ನು ಪುನೀತ್ ಕೇಳಿದ್ದರು. ಅವತ್ತು ಏನಾಯ್ತು? ನಾನು ಫ್ರೀಯಾಗಿದ್ದೇನೆ ಅಂತ ಟ್ರ್ಯಾಕ್ ಸೂಟ್ ಹಾಕೊಂಡು ಬ್ಯಾಕ್ ಶರ್ಟ್ ಹಾಕೊಂಡು ಹೋದೆ. ನೋಡಿದ್ರೆ, ಪುನೀತ್ ಕೂಡ ಬ್ಲ್ಯಾಕ್ ಹಾಕೊಂಡಿದ್ದಾರೆ. ಡೈರೆಕ್ಟರ್ ಕೂಡ ಬ್ಲ್ಯಾಕ್ ಹಾಕೊಂಡಿದ್ದಾರೆ. ಇವರಿಬ್ಬರು ಕಥೆ ಬಗ್ಗೆ ಮಾತಾಡುತ್ತಿದ್ದರು. ನಾನು ಬಾಗಿಲು ತೆಗೆದು ನೋಡಿದೆ. ತೊಂದರೆ ಕೊಡುವುದು ಬೇಡ ಅಂತ ಹೊರಗೆ ಸ್ನೇಹಿತರೊಂದಿಗೆ ಮಾತಾಡುತ್ತಿದೆ. ಈ ಕಥೆಯನ್ನು ಕೇಳಿ ವಿಲನ್ ಪಾತ್ರಕ್ಕೆ ಸ್ವಲ್ಪ ಲಿಂಕ್ ಬೇಕು. ಅದು ಸ್ವಲ್ಪ ಇರಲಿ. ಬಿಟ್ಟರೆ ಉಳಿದಿದ್ದೆಲ್ಲ ಅದ್ಭುತವಾಗಿದೆ ಅಂದ್ರು. ಅವತ್ತು ನಾನು ಯೋಗಿ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡೆವು." ಎಂದು ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಹಾಡು ಇಲ್ಲವೆ ಅತಿಥಿ ಪಾತ್ರದಲ್ಲಿ ಅಪ್ಪು?
'ರಾಘವೇಂದ್ರ ಸ್ಟೋರ್ಸ್' ಕಥೆ ಕೇಳಿ ಪುನೀತ್ ರಾಜ್‌ಕುಮಾರ್ ಖುಷಿ ವ್ಯಕ್ತಪಡಿಸಿದ್ದರು. ಸಂತೋಷ್ ಆನಂದ್‌ರಾಮ್ ಹಾಗೂ ಪುನೀತ್ ಇಬ್ಬರು ಆತ್ಮೀಯರಾಗಿದ್ದರು. ಅಲ್ಲದೆ ಅಪ್ಪುಗಾಗಿ ಸಂತೋಷ್ ಆನಂದ್‌ರಾಮ್ 'ರಾಜಕುಮಾರ' ಹಾಗೂ 'ಯುವರತ್ನ' ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಹೀಗಾಗಿ ಆ ಆತ್ಮೀಯತೆಯಿಂದಲೇ 'ರಾಘವೇಂದ್ರ ಸ್ಟೋರ್ಸ್' ಕಥೆಯನ್ನು ಕೇಳಿದ್ದರು.
ಪುನೀತ್ ರಾಜ್‌ಕುಮಾರ್ ಕಥೆ ಮೆಚ್ಚಿಕೊಂಡಿದ್ದರು. ಜೊತೆ ಈ ಸಿನಿಮಾದ ಒಂದು ಹಾಡನ್ನೋ, ಇಲ್ಲವೇ ಅತಿಥಿ ಪಾತ್ರದಲ್ಲಿಯೋ ನಟಿಸುವ ಅನುಮಾನ ವ್ಯಕ್ತಪಡಿಸಿದ್ದರು ಎಂದು ಜಗ್ಗೇಶ್ ಸಂದರ್ಶನದ ವೇಳೆ ಹೇಳಿದ್ದಾರೆ. "ಈ ಸಿನಿಮಾ ಹಾಡು ಹೇಳುತ್ತೇನೋ.. ಇಲ್ಲ ಸಣ್ಣ ಪಾತ್ರದಲ್ಲಿ ಬರುತ್ತೇನೋ ಅನ್ನುವ ಸಣ್ಣ ಅನುಮಾನವನ್ನು ವ್ಯಕ್ತಪಡಿಸಿದ್ದರು. ಈಗ ಅದೆಲ್ಲಾ ನೆನಪಾಗುತ್ತೆ." ಎಂದಿದ್ದಾರೆ ಜಗ್ಗೇಶ್.
ಪುನೀತ್ ಆಡಿಯೋ ಕ್ಲಿಪ್‌ನಲ್ಲೇನಿದೆ?
ಇದೇ ಸಂದರ್ಶನದ ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಜೊತೆ ಚರ್ಚೆ ಮಾಡುತ್ತಿರುವ ಆಡಿಯೋ ಕ್ಲಿಪ್ ಅನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಅಪ್ಪು ನಿರ್ದೇಶಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
"ಕೊನೆ 20 ರಿಂದ 25 ನಿಮಿಷ ಶೂಟ್ ಮಾಡಿ ಲೆಂಥ್‌ಗೋಸ್ಕರ ಕಟ್ ಮಾಡೋದು ಬೇಡ. ಪ್ಲ್ಯಾನ್ ಮಾಡಿಯೇ ತೆಗೆದುಬಿಡಿ. ಇವರದ್ದು ಏನೂ ತೋರಿಸಬೇಕಾಗಿಲ್ಲ. ಫ್ಲೋ ಅಲ್ಲೇ ಹೋಗಲಿ. ಡೈಲಾಗ್ ವರ್ಸನ್ ಅಂತೂ ಅದ್ಭುತ." ಎಂದು ಅಪ್ಪು ಈ ವಿಡಿಯೋ ಕ್ಲಿಪ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











