"ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ಧಾರ ಆದ ಇತಿಹಾಸವಿಲ್ಲ"; ಅಪ್ಪು ಪತ್ನಿ ಬೆಂಬಲಕ್ಕೆ ಬಂದ ಜಗ್ಗೇಶ್

ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಬಹುದೆಂದು ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆರ್‌ಸಿಬಿ ತಂಡ ಒಂದರ ಹಿಂದೊಂದು ಸಿನಿಮಾಗಳನ್ನು ಸೋಲುತ್ತಲೇ ಬರುತ್ತಿದೆ. ಇದರ ಆರ್‌ಸಿಬಿ ಅಭಿಮಾನಿಗಳು ಬೇಸತ್ತಿರೋದು ನಿಜ. ನಿನ್ನೆ (ಏಪ್ರಿಲ್ 6) ನಡೆದ ಪಂದ್ಯದಲ್ಲೂ ಹೀನಾಯವಾಗಿ ಸೋತು ನಿರಾಸೆ ಮಾಡಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಕೆಟ್ಟ ಪದಗಳನ್ನು ಬಳಸಿ ಯಾರನ್ನೂ ನಿಂದಿಸಿಲ್ಲ.

ಅದರೆ, ಕೆಲವು ದಿನಗಳ ಹಿಂದೆ ಕಿಡಿಗೇಡಿಯೊಬ್ಬ ಗಜಪಡೆ ಅನ್ನುವ ಟ್ವಿಟರ್ ಖಾತೆಯಿಂದ ಆರ್‌ಸಿಬಿ ಪಂದ್ಯಗಳನ್ನು ಸೋಲುತ್ತಿರುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಣ ಎಂದು ಟ್ವೀಟ್ ಮಾಡಿದ್ದ. ಈತ ಟ್ವೀಟ್ ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ. ಅಪ್ಪು ಅಭಿಮಾನಿಗಳು ಆ ಕಿಡಿಗೇಡಿಯನ್ನು ಹಿಡಿದು ಶಿಕ್ಷೆ ನೀಡಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.

Jaggesh stands in support of Ashwini Puneeth Rajkumar who abused her with bad words for RCB s loss

ಕೆಟ್ಟ ಪದಗಳಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರನ್ನು ನಿಂದಿಸಿದ ಬೆನ್ನಲ್ಲೇ ಸ್ಯಾಂಡಲ್‌ವುಡ್ ಮಂದಿ ಒಬ್ಬೊಬ್ಬರಾಗಿಯೇ ಖಂಡಿಸುವುದಕ್ಕೆ ಆರಂಭಿಸಿದ್ದಾರೆ. ಈಗ ನವರಸ ನಾಯಕ ಜಗ್ಗೇಶ್ ಆ ಕಿಡಿಗೇಡಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. "ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ಧಾರ ಆದ ಇತಿಹಾಸವೇ ಇಲ್ಲ" ಎಂದು ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ನವರಸ ನಾಯಕ ಜಗ್ಗೇಶ್ ಗರಂ

ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟ ಪದ ಬಳಿಸಿ ಟ್ವೀಟ್ ಮಾಡಿದ ಕಿಡಿಗೇಡಿ ವಿರುದ್ಧ ಟ್ವೀಟ್ (ಎಕ್ಸ್) ಮಾಡಿ ಕಿಡಿಕಾರಿದ್ದಾರೆ. "ಪುನೀತನ ಮಡದಿ ಅಣಕಿಸಿದ ನತದೃಷ್ಟರೆ, ನಿಮಗೂ ತಾಯಿ ಇರಬೇಕು ಹಾಗೂ ತಾಯಿ ಬೆಲೆ ಗೊತ್ತಿರಬೇಕು.. ಒಂದು ವೇಳೆ ತಾಯಿ ಹೆಣ್ಣು ಅನ್ನುವ ಗೌರವ ಇಲ್ಲ ಎಂದರೆ, ಕಂಡಿತ ಅಂಥವರು ಮನುಗುಲಕ್ಕೆ ಅನರ್ಹ. ಪುನೀತನ ಮಡದಿ ಅನಾಥಳಲ್ಲ. ತನ್ನ ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳನ್ನು ಬಳುವಳಿ ಕೊಟ್ಟು ಹೋಗಿದ್ದಾನೆ. ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ಧಾರ ಆದ ಇತಿಹಾಸವಿಲ್ಲ." ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಅಪ್ಪುಗೆ ಆತ್ಮೀಯರಾಗಿದ್ದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರಲ್ಲಿ ಎರಡು ಸಾಮ್ಯತೆಯಿದೆ. ಜಗ್ಗೇಶ್ ಹಾಗೂ ಪುನೀತ್ ಇಬ್ಬರೂ ರಾಯರ ಭಕ್ತರು. ಇಬ್ಬರು ಒಟ್ಟಿಗೆ ರಾಯರ ಮಠಕ್ಕೆ ಹೋಗಿ ಬಂದಿದ್ದರು. ಇನ್ನೊಂದು ಇಬ್ಬರ ಬರ್ತ್‌ಡೇ ಡೇ ಕೂಡ ಒಂದೇ. ಜಗ್ಗೇಶ್ ಹಾಗೂ ಪುನೀತ್ ಹುಟ್ಟಿದ ದಿನ ಮಾರ್ಚ್ 17. ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದ್ದರು. ಅಷ್ಟೇ ಯಾಕೆ ಚಿತ್ರರಂಗದಲ್ಲೂ ಇಬ್ಬರೂ ಆತ್ಮೀಯರಾಗಿದ್ದರು. ಹೀಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತಾಡಿದ್ದಕ್ಕೆ ಜಗ್ಗೇಶ್ ಆಕ್ರೋಶ ಹೊರ ಹಾಕಿದ್ದಾರೆ.

ಏನಿದು ಘಟನೆ?

ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವುದಕ್ಕೆ ಸಜ್ಜಾಗಿತ್ತು. ಹೀಗಾಗಿ ಪಂದ್ಯ ಆರಂಭಕ್ಕೂ ಮುನ್ನ ಅನ್‌ಬಾಕ್ಸ್ ಇವೆಂಟ್‌ಗೆ ಮುಂದಾಗಿತ್ತು. ಆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಇವರು ಭಾಗಿಯಾಗಿದ್ದಕ್ಕೆ ಪಂದ್ಯಗಳು ಸೋಲುತ್ತಿವೆ ಎಂದು ಗಜಪಡೆ ಐಡಿಯಿಂದ ವ್ಯಕ್ತಿಯೊಬ್ಬ ಟ್ವೀಟ್‌ (ಎಕ್ಸ್) ಮಾಡಿದ್ದ ನಿಂದಿಸಿದ್ದನು. ಇದನ್ನೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಖಂಡಿಸುತ್ತಿದ್ದಾರೆ. ಅಪ್ಪು ಅಭಿಮಾನಿಗಳು ದೂರು ನೀಡಿ ಬಂಧಿಸಲು ಆಗ್ರಹಿಸುತ್ತಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರತಿಕ್ರಿಯೆ ಏನು?

ಇತ್ತೀಚೆಗೆ ಕಿಡಿಗೇಡಿಯ ಈ ಕೃತ್ಯದ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರಶ್ನೆ ಮಾಡಲಾಗಿತ್ತು. ಆಗ ಅವರು "ಬೇರೆ ಆಯ್ಕೆನೇ ಇಲ್ಲ. ಬದುಕು ಮುಂದಕ್ಕೆ ಸಾಗಲೇ ಬೇಕು. ಪಾಸಿಟಿವ್ ಹಾಗೂ ನೆಗೆಟಿವ್ ಅನ್ನು ಸಮಾನವಾಗಿ ಸ್ವೀಕರಿಸಿದ್ದೇನೆ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

More from Filmibeat

English summary
Jaggesh came in support of Ashwini Puneeth Rajkumar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X