"ರಾಮನಾಗು ರಾವಣನಾದರೆ ಅಂತ್ಯ"; ದರ್ಶನ್ ಬಂಧನದ ಬಳಿಕ ಜಗ್ಗೇಶ್ ಟ್ವೀಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧದ ಬಳಿಕ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರೇಣುಕಾಸ್ವಾಮಿ ಕೊಲೆಯನ್ನು ಕೆಲವು ದರ್ಶನ್ ಅಭಿಮಾನಿಗಳೇ ಖಂಡಿಸಿದ್ದಾರೆ. ಇನ್ನೊಂದು ಕಡೆ ದರ್ಶನ್ ಬಗ್ಗೆ ನಿಧಾನವಾಗಿ ಸ್ಯಾಂಡಲ್‌ವುಡ್ ಕೂಡ ವಿರೋಧ ವ್ಯಕ್ತಪಡಿಸುವುದಕ್ಕೆ ಶುರು ಮಾಡಿದೆ. ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಈ ಕೊಲೆ ಪ್ರಕರಣವನ್ನು ಖಂಡಿಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತಿದ್ದಂತೆ ಜಗ್ಗೇಶ್ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜಗ್ಗೇಶ್ ಮಾಡಿದ ಟ್ವೀಟ್ ಈಗ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Jaggesh tweeted about Darshan after he was arrested in the Renukaswamy murder case

ನೇರವಾಗಿ ದರ್ಶನ್ ಹೆಸರನ್ನು ಬಳಸದೆ ಈ ಕೃತ್ಯವನ್ನು ಜಗ್ಗೇಶ್ ಖಂಡಿಸಿದ್ದಾರೆ. ರಾಮ ಹಾಗೂ ರಾವಣನ ಹೆಸರನ್ನು ಬಳಿಸಿ ಜಗ್ಗೇಶ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಮದಕ್ಕೆ ಕಾರುಣ್ಯದ ಅರಿವಿಲ್ಲ. ಯಾರನ್ನೂ ಕೊಲ್ಲುವ ಹಕ್ಕು ಯಾರಿಗೂ ಇಲ್ಲ ಎಂದು ನವರಸ ನಾಯಕ ಜಗ್ಗೇಶ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಹಾಗಿದ್ದರೆ, ಆ ಪೋಸ್ಟ್‌ನಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ನವರಸನಾಯಕ ಜಗ್ಗೇಶ್ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ನೇರವಾಗಿ ಮಾತಾಡುತ್ತಾರೆ. ಅದರಲ್ಲೂ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಆಯಾ ಘಟನೆಗಳಿಗೆ ಖಾರವಾಗಿ ಪ್ರತಿಕ್ರಿಯಿಸುತ್ತಾರೆ. ಈಗ ದರ್ಶನ್ ವಿಚಾರದಲ್ಲೂ ರಾಮ ಹಾಗೂ ರಾವಣನನ್ನು ಇಟ್ಟುಕೊಂಡು ಕರ್ಮದ ಬಗ್ಗೆ ಮಾತಾಡಿದ್ದಾರೆ. ಆ ಟ್ವೀಟ್ ಹೀಗಿದೆ.

" ಸರ್ವಆತ್ಮಾನೇನಬ್ರಹ್ಮ.. ಸರ್ವ ಜೀವಿಯಲ್ಲಿ ದೇವರಿದ್ದಾನೆ.. ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ.. ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ.. ಅವನ ಪಾಪಕರ್ಮ ಅವನ ಸುಡುತ್ತದೆ.. ಕಲಿಯುಗದಲ್ಲಿ ದೇವರು ಕಲ್ಲಲ್ಲಾ.. ಎಲ್ಲಾ ಕರ್ಮಕ್ಕು ತತಕ್ಷಣ ಫಲಿತಾಂಶ ಉಂಟು.. ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!" ಎಂದು ದರ್ಶನ್ ಹೆಸರನ್ನು ಬಳಸದೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಒಂದು ಕಾಲದಲ್ಲಿ ದರ್ಶನ್ ಹಾಗೂ ಜಗ್ಗೇಶ್ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ, ದರ್ಶನ್ ಬಗ್ಗೆ ಜಗ್ಗೇಶ್ ಆಡಿದ ಮಾತಿನ ಆಡಿಯೋ ವೈರಲ್ ಆಗಿತ್ತು. ಆ ಬಳಿಕ ದರ್ಶನ್ ಅಭಿಮಾನಿಗಳು 'ತೋತಾಪುರಿ' ಸಿನಿಮಾದ ಸೆಟ್ಟಿನಲ್ಲಿದ್ದ ಜಗ್ಗೇಶ್ ಅವರನ್ನು ಸುತ್ತುವರೆಸಿದ್ದರು. ಚಿತ್ರೀಕರಣದ ವೇಳೆನೇ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದರು. ಆ ವೇಳೆ ದರ್ಶನ್ ವಿರುದ್ಧ ಜಗ್ಗೇಶ್ ಅಸಮಧಾನ ವ್ಯಕ್ತಪಡಿಸಿದ್ದರು.

ಅಭಿಮಾನಿಗಳು ಮುತ್ತಿಗೆ ಹಾಕಿದ ಬಳಿಕ ದರ್ಶನ್ ನವರಸನಾಯಕ ಜಗ್ಗೇಶ್ ಅವರ ಬಗ್ಗೆ ಪಾಸಿಟಿವ್ ಮಾತನಾಡಿ ವಿವಾದಕ್ಕೆ ಅಂತ್ಯ ಹಾಡಿದ್ದರು. ಅಲ್ಲಿಂದ ಜಗ್ಗೇಶ್ ಹಾಗೂ ದರ್ಶನ್ ನಡುವಿನ ಸಂಬಂಧ ಮೊದಲಿನಂತೆ ಇಲ್ಲ. ಆದರೂ, ದರ್ಶನ್ ಅವರ ಬಗ್ಗೆ ಜಗ್ಗೇಶ್ ಆಗಲಿ, ಜಗ್ಗೇಶ್ ಅವರ ಬಗ್ಗೆ ದರ್ಶನ್ ಆಗಲಿ ಮಾತಾಡಿದ್ದು ಇಲ್ಲ. ಈಗ ದರ್ಶನ್ ಅರೆಸ್ಟ್ ಆದ ಬಳಿಕ ಕರ್ಮ ಯಾರನ್ನು ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

More from Filmibeat

English summary
Jaggesh tweeted about Darshan after he was arrested in the Renukaswamy murder case. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X