ನಟ ದರ್ಶನ್ ಅಪಘಾತದ ಬಗ್ಗೆ ಜಗ್ಗೇಶ್ ಟ್ವೀಟ್

Recommended Video

ದರ್ಶನ್ ಅಪಘಾತದ ಬಗ್ಗೆ ಜಗ್ಗೇಶ್ ಹೇಳಿದ್ದೇನು..!? | Filmibeat Kannada

ಸೋಮವಾರ ಬೆಳಗ್ಗೆಯೇ ಎಲ್ಲರೂ ಆತಂಕ ಪಡುವ ಸುದ್ದಿ ಎದುರಾಗಿದೆ. ನಟ ದರ್ಶನ್ ಚಲಿಸುತ್ತಿದ್ದ ಕಾರು ಮೈಸೂರಿನಲ್ಲಿ ಅಪಘಾತವಾಗಿದ್ದು, ಅಭಿಮಾನಿಗಳಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ.

ಈ ಘಟನೆಯ ಬಗ್ಗೆ ಈಗ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಕಲಾ ಬಂಧು ದರ್ಶನ್ ಗೆ ಅಪಘಾತವಾದ ಸುದ್ದಿ ಕೇಳಿ ದಿಘ್ಬ್ರಾಂತನಾದೆ!!. ಕೊಟ್ಯಾಂತರ ಕನ್ನಡದ ಆತ್ಮಗಳು ಹಾಗೂ ಅಮ್ಮನ ಆಶೀರ್ವಾದ ದರ್ಶನ್ ಅನ್ನು ಕಾಪಾಡಿದೆ. ಕ್ಷೇಮವಾಗಿದ್ದಾರೆ ರಾಯರದಯೇ.. ಯಾರ ಕಣ್ಣು ತಾಕದೆ ಸುಖವಾಗಿ ಬಾಳಿ.. ಶುಭಹಾರೈಕೆ.'' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಈಗಾಗಲೇ ನಟ ವಿನೋದ್ ಪ್ರಭಾಕರ್ ಕೂಡ ದರ್ಶನ್ ಆರೋಗ್ಯವಾದ ಬಗ್ಗೆ ಮಾತನಾಡಿದ್ದಾರೆ. ''ಇಂದು ಬೆಳಗ್ಗೆಯೇ ನಾನು ಶಾಕಿಂಗ್ ಸುದ್ದಿ ಕೇಳಿ ಬಿಟ್ಟೆ. ನಮ್ಮ ಫ್ರೆಂಡ್ ಒಬ್ಬರು ಫೋನ್ ಮಾಡಿ ದರ್ಶನ್ ಗೆ ಅಪಘಾತವಾಗಿದೆ ಎಂಬ ವಿಷಯವನ್ನು ತಿಳಿಸಿದರು. ನನಗೆ ಆ ವಿಷಯ ಕೇಳಿದಾಗ ಆತಂಕವಾಯ್ತು. ಅವಘಾತದಲ್ಲಿ ದರ್ಶನ್ ಕೈಗೆ ಪೆಟ್ಟಾಗಿದೆ.'' ಎಂದು ವಿನೋದ್ ಪ್ರಭಾಕರ್ ಘಟನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.

jaggesh tweets about darshan

ಅಂದಹಾಗೆ, ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯದಲ್ಲಿ ಅವಘಾತವಾಗಿದೆ. ನಟ ದರ್ಶನ್ ಜೊತೆಗೆ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಸಹ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು.

More from Filmibeat

English summary
Kannada actor Jaggesh tweets about Darshan condition. Darshan along with actors Devraj and Prajwal Devraj met with an accident near Mysuru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X