James Day 6 Box Office Collections : ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' 6ನೇ ದಿನದ ಗಳಿಕೆ ಎಷ್ಟು?

ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ಮತ್ತೆ ಚರ್ಚೆಯಲ್ಲಿದೆ. ಸಿನಿಮಾ ಮೊದಲ ನಾಲ್ಕು ದಿನಗಳಲ್ಲೇ ನೂರು ಕೋಟಿ ಲೂಟಿ ಮಾಡಿ, ಹೊಸ ದಾಖಲೆ ಬರೆದಿದೆ. ಇನ್ನೊಂದು ಕಡೆ ಅಭಿಮಾನಿಗಳು ಚಿತ್ರಮಂದಿರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರದಿಂದ ತೆಗೆಯಬಾರದು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್', RRR ಎರಡು ಸಿನಿಮಾ ಪೈಪೋಟಿ ನಡುವೆ 'ಜೇಮ್ಸ್' ಸಿನಿಮಾ ಏನಾಗುತ್ತೆ ಅನ್ನುವುದೇ ಈಗ ಆತಂಕ ಅಭಿಮಾನಿಗಳಲ್ಲಿ ಇದೆ. ಥಿಯೇಟರ್ ಸಂಖ್ಯೆ ಕಡಿಮೆಯಾಗುತ್ತಾ? ಜೇಮ್ಸ್ ಬಾಕ್ಸಾಫೀಸ್ ಕಲೆಕ್ಷನ್ ಉಲ್ಟಾಪಲ್ಟಾ ಆಗುತ್ತಾ? ಪರಭಾಷಾ ಸಿನಿಮಾಗಳು ಅಪ್ಪು ಕೊನೆಯ ಸಿನಿಮಾಗೆ ಮಾರಕ ಆಗುತ್ತಾ? ಅಂತ ಪುನೀತ್ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.

ಈ ಮಧ್ಯೆ 'ಜೇಮ್ಸ್' 6ನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದೆ. 'ದಿ ಕಾಶ್ಮೀರ್ ಫೈಲ್ಸ್' ಹಾಗೂ RRR ಸಿನಿಮಾ ಆರ್ಭಟದ ನಡುವೆ 'ಜೇಮ್ಸ್' ಕಲೆಕ್ಷನ್ ಕಮ್ಮಿಯಾಗಿಲ್ಲ. ನಿರೀಕ್ಷೆಗೂ ಮೀರಿದ ಗಳಿಕೆ ಕಳೆದರೆಡು ದಿನಗಳಲ್ಲಿ ಆಗಿದೆ. ಈ ಮಾತನ್ನು ಸ್ವತ: ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಫಿಲ್ಮಿ ಬೀಟ್‌ಗೆ ಸ್ಪಷ್ಟಪಡಿಸಿದ್ದಾರೆ.

6ನೇ ದಿನದ ಅಸಲಿ ಗಳಿಕೆ ಎಷ್ಟು?

6ನೇ ದಿನದ ಅಸಲಿ ಗಳಿಕೆ ಎಷ್ಟು?

ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸಿನಿಮಾ ಮೊದಲ ನಾಲ್ಕು ದಿನ ದಾಖಲೆ ಗಳಿಕೆ ಮಾಡಿದೆ. ಇದು ಕನ್ನಡ ಚಿತ್ರರಂಗದ ಹೊಸ ದಾಖಲೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಂತೆ ಕೇವಲ ನಾಲ್ಕು ದಿನಗಳಲ್ಲಿಯೇ ನೂರು ಕೋಟಿ ಗಳಿಕೆ ಕಂಡು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಆದರೆ, ಎಲ್ಲಾ ಸಿನಿಮಾಗಳಂತೆ ವಾರದ ಆರಂಭದ ದಿನಗಳು ಸಜಹವಾಗಿಯೇ ಕಲೆಕ್ಷನ್ ಕಡಿಮೆ ಆಗುತ್ತೆ. ಆದರೆ, ಮಂಗಳವಾರ( ಮಾರ್ಚ್ 23)ದಂದು, ಆರನೇ ದಿನವೂ ಕಲೆಕ್ಷನ್ ವಿಚಾರದಲ್ಲಿ ಶೇಕ್ ಆಗಿಲ್ಲ. ವಿತರಕರೊಬ್ಬರ ಪ್ರಕಾರ, 'ಜೇಮ್ಸ್' 6ನೇ ದಿನ 7.70 ಕೋಟಿ ಲೂಟಿ ಮಾಡಿದೆ ಎನ್ನಲಾಗಿದೆ.

'ಜೇಮ್ಸ್' 5ನೇ ದಿನ ಗಳಿಸಿದ್ದೆಷ್ಟು?

'ಜೇಮ್ಸ್' 5ನೇ ದಿನ ಗಳಿಸಿದ್ದೆಷ್ಟು?

'ಜೇಮ್ಸ್' ಸಿನಿಮಾ ಸೋಮವಾರ ಕೂಡ ಉತ್ತಮ ಗಳಿಕೆಯನ್ನೇ ಕಂಡಿದೆ. ಮೊದಲು ಈ ಸಿನಿಮಾ 5 ಕೋಟಿ ಎಂದು ಹೇಳಲಾಗಿತ್ತು. ಆದರೆ, ಮಾರ್ಚ್ 22 ರಂದು ಈ ಸಿನಿಮಾ ಗಳಿಕೆನೇ ಬೇರೆ ಎನ್ನುತ್ತಿದ್ದಾರೆ. ಅಸಲಿಗೆ 'ಜೇಮ್ಸ್' 5ನೇ ದಿನ ಬರೋಬ್ಬರಿ 8.7 ಕೋಟಿ ಲೂಟಿ ಮಾಡಿದ್ಯಂತೆ. ಕನ್ನಡ ಸಿನಿಮಾ ಇತಿಹಾಸದಲ್ಲಿ ವಾರದ ಆರಂಭದಲ್ಲಿ ಇಷ್ಟೊಂದು ಹಣ ಮಾಡಿದ್ದೇ ಇಲ್ಲ. ಇದು ಕೂಡ ಒಂದು ರೀತಿ ದಾಖಲೆ ಅಂತಾನೇ ಸ್ಯಾಂಡಲ್‌ವುಡ್ ಹೇಳುತ್ತಿದೆ.

6 ದಿನಕ್ಕೆ 'ಜೇಮ್ಸ್' ಗಳಿಸಿದ್ದೆಷ್ಟು?

6 ದಿನಕ್ಕೆ 'ಜೇಮ್ಸ್' ಗಳಿಸಿದ್ದೆಷ್ಟು?

ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಆರು ದಿನಗಳಲ್ಲಿ ಕೇವಲ ಕರ್ನಾಟಕದಲ್ಲಿಯೇ ದಾಖಲೆ ಗಳಿಕೆ ಕಂಡಿದೆ. ಮೊದಲ ದಿನ 20.30 ಕೋಟಿ. 2ನೇ ದಿನ 8.89 ಕೋಟಿ, 3ನೇ ದಿನ 9.09 ಕೋಟಿ, ನಾಲ್ಕನೇ ದಿನ 10.98 ಕೋಟಿ, 5ನೇ ದಿನ 8.7ಕೋಟಿ ಹಾಗೂ 6ನೇ ದಿನ 7.7 ಕೋಟಿ ಗಳಿಸಿದೆ. ಕೇವಲ ಕರ್ನಾಟಕದಲ್ಲಿ 6 ದಿನಗಳಿಗೆ 65.66 ಕೋಟಿ ಗಳಿಸಿದೆ. "ಇದು ಕನ್ನಡದ ಮಟ್ಟಕ್ಕೆ ದಾಖಲೆ ಎನ್ನುತ್ತಾರೆ. ವಾರದ ಆರಂಭದ ದಿನಗಳಲ್ಲಿ ಮಲ್ಟೊಪ್ಲೆಕ್ಸ್‌ನಲ್ಲಿ ಶೇ. 80ರಷ್ಟು ಸೀಟ್ ಫುಲ್ ಆಗಿದೆ. ಸಿಂಗಲ್ ಸ್ಕೀನ್ 60 ರಿಂದ 70 ಪರ್ಸೆಂಟ್ ಫುಲ್ ಇದೆ." ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.

ಪರಭಾಷಾ ಸಿನಿಮಾಗಳು ಮಾರಕವೇ?

ಪರಭಾಷಾ ಸಿನಿಮಾಗಳು ಮಾರಕವೇ?

'ಜೇಮ್ಸ್' ಆರು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಜೋರಾಗಿದೆ. ಎರಡನೇ ವಾರ ಕೆಲವು ಚಿತ್ರಮಂದಿರಗಳು ಕೈತಪ್ಪುವ ಸಾಧ್ಯತೆಯಿದೆ. ಇದು ಸಹಜ. ಪ್ರತಿ ಸಿನಿಮಾ ಬಿಡುಗಡೆ ಮಾಡುವಾಗಲೂ ಮೊದಲ ವಾರ ಹೆಜ್ಜೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ. ಎರಡನೇ ವಾರ ಸಹಜವಾಗಿಯೇ ಕಡಿಮೆ ಆಗುತ್ತೆ. ಆದರೆ, ಬೇರೆ ಭಾಷೆಗಳಿಗಾಗಿ ಚೆನ್ನಾಗಿ ಓಡುತ್ತಿರುವ ಸಿನಿಮಾವನ್ನೇ ತೆಗೆದರೆ ಹೇಗೆ? ಇದು ಕನ್ನಡ ಚಿತ್ರಕ್ಕೆ ಮಾಡುತ್ತಿರುವ ಅನ್ಯಾಯ. ಅದಕ್ಕೆ ಚಿತ್ರಮಂದಿರದ ಮಾಲೀಕರಲ್ಲಿ ಮನವಿ ಮಾಡಿಕೊಂಡಿದ್ದೇನೆ. 'ಜೇಮ್ಸ್' ಥಿಯೇಟರ್‌ನಲ್ಲಿ ಇರುವ ತನಕ ಚೆನ್ನಾಗಿ ಓಡುತ್ತೆ." ಎನ್ನುತ್ತಾರೆ ನಿರ್ದೇಶಕ ಚೇತನ್.

More from Filmibeat

English summary
James Day 6 Box Office Collections : Puneeth Rajkumar's Movie is holding steady at the box office, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X