James Day 7 Box Office Collection: 'ಜೇಮ್ಸ್' 7ನೇ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು? ವಿಶ್ವದಾದ್ಯಂತ ಗಳಿಸಿದ್ದೆಷ್ಟು?

ಕಳೆದೆರಡು ದಿನಗಳಿಂದ 'ಜೇಮ್ಸ್' ಸಿನಿಮಾ ವಿವಾದದಲ್ಲಿ ಸಿಕ್ಕಿಕೊಂಡಿತ್ತು. 'ಜೇಮ್ಸ್' ಸಿನಿಮಾವನ್ನು ಎರಡು ಪರಭಾಷಾ ಸಿನಿಮಾಗಳಿಗಾಗಿ ಚಿತ್ರಮಂದಿರದಿಂದ ತೆಗೆದು ಹಾಕುತ್ತಿದ್ದಾರೆ ಎನ್ನುವ ಆರೋಪ ಮಾಡಲಾಗಿತ್ತು. ಹೀಗಾಗಿ ಎರಡು ದಿನಗಳಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕೂಡ ಆಕ್ರೋಶಗೊಂಡಿದ್ದರು.

'ಜೇಮ್ಸ್' ಆರಂಭದಿಂದಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ 100 ಕೋಟಿ ಗಳಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುನ್ನುಗ್ಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಸಿನಿಮಾವನ್ನು ಥಿಯೇಟರ್‌ನಿಂದ ತೆಗೆದುಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ವಿವಾದ ಎದ್ದಿತ್ತು.

ಈಗ 'ಜೇಮ್ಸ್' ಹಾಗೂ ಪರಭಾಷಾ ಸಿನಿಮಾಗಳ ಥಿಯೇಟರ್ ಸಮಸ್ಯೆ ಬಗೆಹರಿಸಲು ಶಿವಣ್ಣ ಎಂಟ್ರಿಕೊಟ್ಟಿದ್ದರು. ಈಗ ಜೇಮ್ಸ್ ಥಿಯೇಟರ್ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಎರಡನೇ ವಾರದವೂ ದೊಡ್ಡ ಮಟ್ಟದಲ್ಲಿ ಗಳಿಕೆ ಆಗಲಿದೆ. ಇಲ್ಲಿವರೆಗೂ ಅಂದರೆ, ಬಿಡುಗಡೆಯಾದಲ್ಲಿಂದ 7 ದಿನಗಳ ಒಟ್ಟು ಗಳಿಕೆ ಡಿಟೈಲ್ಸ್ ಇಲ್ಲಿದೆ.

'ಜೇಮ್ಸ್' ಹವಾ ಬಲು ಜೋರು

'ಜೇಮ್ಸ್' ಹವಾ ಬಲು ಜೋರು

'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಮೊದಲ ದಿನ ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' 4 ಸಾವಿರ ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ವಿಶ್ವದಾದ್ಯಂತ ಅಪ್ಪು ಅಭಿಮಾನಿಗಳು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು. ನಾಲ್ಕೇ ದಿನಗಳಲ್ಲಿ 100 ಕೋಟಿ ಗಳಿಕೆ ಕಂಡ ಕನ್ನಡದ ಏಕೈಕ ಸಿನಿಮಾ 'ಜೇಮ್ಸ್' ಎನ್ನುವ ಹೆಗ್ಗಳಿಕೆ ಗಳಿಸಿದೆ. ಇದೇ ವೇಳೆ 7ನೇ ದಿನವೂ 'ಜೇಮ್ಸ್' ಕಲೆಕ್ಷನ್ ಭರ್ಜರಿಯಾಗಿದೆ.

7ನೇ ದಿನ ಜೇಮ್ಸ್ ಗಳಿಸಿದ್ದೆಷ್ಟು?

7ನೇ ದಿನ ಜೇಮ್ಸ್ ಗಳಿಸಿದ್ದೆಷ್ಟು?

'ಜೇಮ್ಸ್' ಸಿನಿಮಾ ಮೊದಲ ನಾಲ್ಕು ದಿನ ಅಷ್ಟೇ ಉತ್ತಮ ಗಳಿಕೆ ಕಂಡಿಲ್ಲ. ವಾರದ ಆರಂಭದಲ್ಲೂ ಈ ಸಿನಿಮಾ ಕಲೆಕ್ಷನ್ ಜೋರಾಗಿದೆ. ಕನ್ನಡಿಗರು ಅಪ್ಪು ಸಿನಿಮಾವನ್ನು ಮನಸಾರೆ ಮೆಚ್ಚಿ ನೋಡುತ್ತಿದ್ದಾರೆ. 'ಜೇಮ್ಸ್' ತೆರೆಕಂಡ 7ನೇ ದಿನವೂ ಅದ್ಭುತ ಗಳಿಕೆ ಕಂಡಿದೆ. ಈ ಮೂಲಕ ಸಿನಿಮಾ 127 ಕೋಟಿ ಗಳಿಕೆ ಕಂಡಿದೆ. ಇದು ಕನ್ನಡ ಸಿನಿಮಾದ ಮಟ್ಟಿಗೆ ಅದ್ಬುತ ಗಳಿಕೆ ಎನ್ನಲಾಗಿದೆ. ಇಂದು (ಮಾರ್ಚ್ 24) ಸಿನಿಮಾದ ಕಲೆಕ್ಷನ್ ಆಧಾರದ ಮೇಲೆ 'ಜೇಮ್ಸ್' ದಾಖಲೆ ಬಿಡುಗಡೆಯಾಗಲಿದೆ.

5 & 6ನೇ ದಿನದ ಗಳಿಕೆ ಎಷ್ಟು?

5 & 6ನೇ ದಿನದ ಗಳಿಕೆ ಎಷ್ಟು?

'ಜೇಮ್ಸ್' ಸಿನಿಮಾ 5 ಹಾಗೂ 6ನೇ ದಿನವೂ ಅದ್ಭುತ ಕಲೆಕ್ಷನ್ ಮಾಡಿದೆ. ಮಾರ್ಚ್ 22ರಂದು 5ನೇ ದಿನ ಬರೋಬ್ಬರಿ 8.7 ಕೋಟಿ ಗಳಿಕೆ ಕಂಡಿದೆ. ಅದೇ ಮಂಗಳವಾರ (ಮಾರ್ಚ್ 23) 6ನೇ ದಿನ ಈ ಸಿನಿಮಾ 7.7 ಕೋಟಿ ಗಳಿಕೆ ಮಾಡಿದೆ ಎಂದು ವಿತರಕರ ವಲಯ ಹೇಳಿದೆ. ಹೀಗಾಗಿ 'ಜೇಮ್ಸ್' ಸಿನಿಮಾ ಗಳಿಕೆಯಲ್ಲಿ ಹಿಂದುಳಿದಿಲ್ಲ. ಹಾಗಿದ್ದರೂ, ಈ ಸಿನಿಮಾವನ್ನು ಪರಭಾಷೆಗಳಿಗಾಗಿ ಯಾಕೆ ಚಿತ್ರಮಂದಿರದಿಂದ ತೆಗೆಯುತ್ತೀರಾ ? ಎಂಬುದು ಅಭಿಮಾನಿಗಳ ಪ್ರಶ್ನೆ.

2ನೇ ವಾರದ ಕಲೆಕ್ಷನ್ ಹೇಗಿರುತ್ತೆ?

2ನೇ ವಾರದ ಕಲೆಕ್ಷನ್ ಹೇಗಿರುತ್ತೆ?

'ಜೇಮ್ಸ್' ಎರಡನೇ ವಾರದ ಕಲೆಕ್ಷನ್ ಹೇಗಿರುತ್ತೆ ಎನ್ನುವುದರ ಲೆಕ್ಕಾಚಾರ ಕೂಡ ಶುರುವಾಗಿದೆ. ಯಾಕೆಂದರೆ, ಮೊದಲ ವಾರ 386 ಚಿತ್ರಮಂದಿರಗಳಲ್ಲಿ 'ಜೇಮ್ಸ್' ರಿಲೀಸ್ ಆಗಿತ್ತು. ಆದ್ರೀಗ ಎರಡನೇ ವಾರಕ್ಕೆ ಸುಮಾರು 80 ಥಿಯೇಟರ್‌ಗಳು ಕಡಿಮೆಯಾಗಲಿದೆ. ಹೀಗಾಗಿ ಕಲೆಕ್ಷನ್ ವಿಚಾರದಲ್ಲಿ 'ಜೇಮ್ಸ್' ಸಿನಿಮಾ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ.

More from Filmibeat

English summary
James Day 7 Box Office Collections : Puneeth Rajkumar's Film Crossed Rs 127 crore. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X