'ಜೇಮ್ಸ್' ಡೈರೆಕ್ಟರ್ ಹೊಸ ಸಿನಿಮಾ 'ಬರ್ಮ': 'ಗಟ್ಟಿಮೇಳ' ರಕ್ಷ್ ನಾಯಕ.. ಸೆಟ್ಟೇರುವ ಮೊದಲೇ ಆಡಿಯೋ ರೈಟ್ಸ್ ಸೋಲ್ಡ್ ಔಟ್ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್'. ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಚೇತನ್ ಕುಮಾರ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಸುಮಾರು ಎರಡು ವರ್ಷಗಳ ಬಳಿಕ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

ಇಂದು (ಆಗಸ್ಟ್ 25) ವರಮಹಾಲಕ್ಷ್ಮಿ ಹಬ್ಬ. ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಇದೇ ಹಬ್ಬದ ಸಂದರ್ಭದಲ್ಲಿ ಚೇತನ್ ಕುಮಾರ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಅದುವೇ 'ಬರ್ಮ'. ಟೈಟಲ್ ರಿಲೀಸ್ ಆಗುತ್ತಿದ್ದಂತೆ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗುತ್ತಿದೆ.

chethan-kumar-burma-gattimela-raksh-ram

ಚೇತನ್ ಕುಮಾರ್ ಈಗಾಗಲೇ 'ಬಹದ್ದೂರ್', 'ಭರ್ಜರಿ', 'ಭರಾಟೆ' ಹಾಗೂ 'ಜೇಮ್ಸ್' ಅಂತಹ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಹೊಸ ಸಿನಿಮಾ 'ಬರ್ಮ' ಅಂತ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ಸುದ್ದಿಯನ್ನು ತಿಳಿಯುವುದಕ್ಕೆ ಮುಂದೆ ಓದಿ.

ಪ್ಯಾನ್ ಇಂಡಿಯಾ ಸಿನಿಮಾ 'ಬರ್ಮಾ'

'ಜೇಮ್ಸ್' ಸಿನಿಮಾದ ಶೂಟಿಂಗ್ ಹಾಗೂ ಡಬ್ಬಿಂಗ್ ಬಾಕಿಯಿತ್ತು. ಈ ವೇಳೆನೇ ಪವರ್‌ಸ್ಟಾರ್ ಅಗಲಿಕೆ ಚಿತ್ರತಂಡ ಹಾಗೂ ನಿರ್ದೇಶಕರಿಗೆ ದೊಡ್ಡ ಶಾಕ್ ಆಗಿತ್ತು. ಅಪ್ಪು ಅನುಪಸ್ಥಿತಿಯಲ್ಲಿ ಸಿನಿಮಾವನ್ನು ಮುಗಿಸಿ, ಪ್ಯಾನ್ ಇಂಡಿಯಾ ರಿಲೀಸ್ ಮಾಡಿದ್ದರು. ಈಗ ಒಂದಿಷ್ಟು ಗ್ಯಾಪ್ ತೆಗೆದುಕೊಂಡು 'ಬರ್ಮ' ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾದ ಟೈಟಲ್‌ನಿಂದಲೇ ಗಮನ ಸೆಳೆಯುವುದಕ್ಕೆ ಆರಂಭ ಮಾಡಿದ್ದಾರೆ.

chethan-kumar-burma-gattimela-raksh-ram

'ಗಟ್ಟಿಮೇಳ' ಧಾರಾವಾಹಿ ರಕ್ಷ್ 'ಬರ್ಮಾ' ಹೀರೊ

'ಬರ್ಮ' ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಇದೂವರೆಗೂ ಕಿರುತೆರೆಯ ಪ್ರಸಾರ ಆಗುತ್ತಿರುವ ಜನಪ್ರಿಯ 'ಗಟ್ಟಿಮೇಳ' ಧಾರಾವಾಹಿಯ ಹೀರೊ ರಕ್ಷ್ ರಾಮ್ 'ಬರ್ಮಾ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಕಿರುತೆರೆ ನಟ ರಕ್ಷ್ ಪ್ಯಾನ್ ಇಂಡಿಯಾ ಸ್ಟಾರ್ ಎಮರ್ಜ್ ಆಗಿದ್ದಾರೆ. ಸೆಪ್ಟೆಂಬರ್ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭ ಆಗುತ್ತಿದೆ.

ಆಡಿಯೋ ರೈಟ್ಸ್ ಸೋಲ್ಡ್ ಔಟ್

ಚೇತನ್ ಕುಮಾರ್ ನಿರ್ದೇಶಿಸುತ್ತಿರುವ 'ಬರ್ಮ' ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 'ಬಹದ್ದೂರ್' ಹಾಗೂ 'ಭರ್ಜರಿ' ಸಿನಿಮಾದಲ್ಲಿ ಚೇತನ್ ಕುಮಾರ್ ಹಾಗೂ ಹರಿಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಈಗ 'ಬರ್ಮಾ' ಮೂಲಕ ಮೂರನೇ ಬಾರಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಸಿನಿಮಾ ಸೆಟ್ಟೇರುವ ಮೊದಲೇ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಡಿ ಬೀಟ್ಸ್‌ಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ.

'ಬ' ಅಕ್ಷರದಿಂದ ಹೊಸ ಸಿನಿಮಾ ಆರಂಭ

'ಜೇಮ್ಸ್' ಬಿಟ್ಟು ಚೇತನ್ ಕುಮಾರ್ ನಿರ್ದೇಶಿಸಿದ ಅಷ್ಟೂ ಸಿನಿಮಾಗಳೂ 'ಬ' ಇಲ್ಲವೇ 'ಭ'ದಿಂದಲೇ ಆರಂಭ ಆಗಿವೆ. ಈ ಎಲ್ಲಾ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಹಿಟ್ ಲಿಸ್ಟ್ ಸೇರಿವೆ. 'ಬಹದ್ದೂರ್', 'ಭರ್ಜರಿ' ಹಾಗೂ 'ಭರಾಟೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. ಈಗ ಹೊಸ ಸಿನಿಮಾ 'ಬರ್ಮ' ಅಂತ ಟೈಟಲ್‌ ಇಟ್ಟಿದ್ದಾರೆ. ಈ ಮೂಲಕ ಮತ್ತೆ ಯಶಸ್ಸನ್ನು ಹುಡುಕಿ ಹೊರಟಿದ್ದಾರೆ ಚೇತನ್.

More from Filmibeat

English summary
James director Chethan Kumar and Gattimela Raksh Ram Movie Burma
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X