'ಜೇಮ್ಸ್' ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಏನೇನಿರುತ್ತೆ? ಅತಿಥಿಗಳು ಯಾರು?

'ಜೇಮ್ಸ್' ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿನಿಮಾ ಬಿಡುಗಡೆಗೆ ನಾಲ್ಕು ದಿನವಿದೆ ಅನ್ನುವಾಗಲೇ 'ಜೇಮ್ಸ್' ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ನಡೆಯುತ್ತಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ 'ಜೇಮ್ಸ್' ಪ್ರಿ-ರಿಲೀಸ್ ಇವೆಂಟ್ ನಡೆಯಲಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಕಾರ್ಯಕ್ರಮಕ್ಕೆ ಭರ್ಜರಿಯಾಗಿ ಸಿದ್ಧತೆಗಳು ನಡೆಯುತ್ತಿವೆ. ಪ್ಯಾಲೇಸ್ ಗ್ರೌಂಡ್ ಅದ್ಧೂರಿಯಾಗಿ ಸೆಟ್ ಹಾಕಲಾಗಿದ್ದು, ಕನ್ನಡ ಚಿತ್ರರಂಗದ ಗಣ್ಯರು ಈ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

'ಜೇಮ್ಸ್' ಸಿನಿಮಾ ಜೊತೆ ಅಪ್ಪು ಅಭಿಮಾನಿಗಳಿಗೆ ಭಾವನಾತ್ಮಕ ಸಂಬಂಧವಿದೆ. ಪುನೀತ್ ಅಭಿನಯದ ಕೊನೆಯ ಸಿನಿಮಾ ಆಗಿರುವುದರಿಂದ ಈ ಸಿನಿಮಾವನ್ನು ಹಿಂದೆಂದೂ ಬಿಡುಗಡೆ ಮಾಡದ ಹಾಗೇ ರಿಲೀಸ್ ಮಾಡಬೇಕು ಅಂತ ಆಸೆಪಟ್ಟಿದ್ದಾರೆ. ಈ ಕಾರಣಕ್ಕೆ 'ಜೇಮ್ಸ್' ತಂಡ ಪ್ಯಾಲೇಸ್‌ಗ್ರೌಂಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ದೊಡ್ಮನೆ ಕುಟುಂಬ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಾಗಿದ್ರೆ, ಪ್ರಿ-ರಿಲೀಸ್ ಇವೆಂಟ್‌ಗೆ ಬರುವ ಅತಿಥಿಗಳು ಯಾರು? ಈ ಇವೆಂಟ್‌ನಲ್ಲಿ ಏನೆಲ್ಲಾ ಕಾರ್ಯಕ್ರಮಗಳು ಇರುತ್ತೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಅಣ್ಣಾವ್ರ ಕುಟುಂಬಕ್ಕೆ ಆಹ್ವಾನ

ಅಣ್ಣಾವ್ರ ಕುಟುಂಬಕ್ಕೆ ಆಹ್ವಾನ

'ಜೇಮ್ಸ್' ಸಿನಿಮಾದ ಪ್ರಿ ರಿಲೀಸ್ ಇವೆಂಟ್‌ಗೆ ದೊಡ್ಮನೆ ಕುಟುಂಬಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿವರಾಜ್‌ಕುಮಾರ್ ಆಗಮಿಸಲಿದ್ದಾರೆ. ಇವರೊಂದಿಗೆ ರಾಘವೇಂದ್ರ ರಾಜ್‌ಕುಮಾರ್, ಶ್ರೀಮುರಳಿ, ಯುವರಾಜ್‌ಕುಮಾರ್, ವಿಜಯ್ ರಾಜ್‌ಕುಮಾರ್, ಧೀರೇನ್ ರಾಮ್‌ಕುಮಾರ್ ಸೇರಿದಂತೆ ಡಾ.ರಾಜ್‌ಕುಮಾರ್ ಕುಟುಂಬ ಭಾಗವಹಿಸಲಿದೆ. ಇವರೆಲ್ಲರೂ ಪುನೀತ್ ರಾಜ್‌ಕುಮಾರ್ ಅವರ ನೆನಪಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.

ಅಪ್ಪು ಪತ್ನಿ ಅಶ್ವಿನಿ ವಿಶೇಷ ಅತಿಥಿ

ಅಪ್ಪು ಪತ್ನಿ ಅಶ್ವಿನಿ ವಿಶೇಷ ಅತಿಥಿ

ಅಪ್ಪು ನಿಧನದ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ವಿರಳ. ಇತ್ತೀಚೆಗೆ ನಡೆದ ಬೆಂಗಳೂರು ಚಲನ ಚಿತ್ರೋತ್ಸವದಲ್ಲಿ ಭಾಗಿಯಾಗಿಯಾಗಿದ್ದು ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ 'ಜೇಮ್ಸ್' ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಅಪ್ಪು ಪತ್ನಿ ಅಶ್ವಿನಿ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇದೇ ಮೊದಲಬಾರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಜೇಮ್ಸ್' ವೇದಿಕೆ ಮೇಲೆ ಮಾತನಾಡುವ ಸಾಧ್ಯತೆಗಳಿವೆ.

ಸ್ಯಾಂಡಲ್‌ವುಡ್ ಅತಿಥಿಗಳು ಯಾರು?

ಸ್ಯಾಂಡಲ್‌ವುಡ್ ಅತಿಥಿಗಳು ಯಾರು?

'ಜೇಮ್ಸ್' ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿದ್ದರೆ, ಇವರೊಂದಿಗೆ ರಿಯಲ್‌ಸ್ಟಾರ್ ಉಪೇಂದ್ರ ವೇದಿಕೆ ಮೇಲೆ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ. ಇನ್ನು ತೆಲುಗು ನಟ ಶ್ರೀಕಾಂತ್, ತಮಿಳು ಹಿರಿಯ ನಟ ಶರತ್ ಕುಮಾರ್, ಸಿನಿಮಾದ ನಾಯಕಿ ಪ್ರಿಯಾ ಆನಂದ್ ಹಾಗೂ ಸಂಗೀತ ನಿರ್ದೇಶಕ ಚರಣ್ ರಾಜ್ ಭಾಗವಹಿಸಲಿದ್ದಾರೆ.

ಫ್ಯಾನ್ಸ್‌ಗಾಗಿ ಪ್ರಿ-ರಿಲೀಸ್ ಇವೆಂಟ್

ಫ್ಯಾನ್ಸ್‌ಗಾಗಿ ಪ್ರಿ-ರಿಲೀಸ್ ಇವೆಂಟ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗಾಗಿ ಈ ಇವೆಂಟ್ ಅನ್ನು ನಡೆಸಲಾಗುತ್ತಿದೆ. 'ಜೇಮ್ಸ್' ಬಿಡುಗಡೆಗೆ ಕೇವಲ 4 ದಿನ ಇರುವಾಗ ಪ್ರಿ-ರಿಲೀಸ್ ಇವೆಂಟ್ ಮಾಡಲು ನಿರ್ಮಾಪಕ ಕಿಶೋರ್ ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಪ್ರವೇಶ ನೀಡಲಾಗಿದೆ. 'ಜೇಮ್ಸ್' ಸಿನಿಮಾದ ಕೊನೆಯ ದೊಡ್ಡ ಕಾರ್ಯಕ್ರಮಕ್ಕೆ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೂರು ಹಾಡುಗಳ ಪರ್ಫಾಮೆನ್ಸ್ ಇರಲಿದೆ. ಜೊತೆಗೆ ಗಣ್ಯರು ಹಾಗೂ ಅತಿಥಿಗಳ ಮಾತು ಪ್ರಮುಖ ಆಕರ್ಷಣೆಯಾಗಿರಲಿದೆ.

More from Filmibeat

English summary
Puneeth Rajkumar Last Movie James Pre Release Event Date, Venue, Timings, Guests List, Ticket and everything about the event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X