James Vs RRR: 'ಜೇಮ್ಸ್' ವಿವಾದ ಬಗೆಹರಿಸಿದ ಶಿವಣ್ಣ: ಎಷ್ಟು ಥಿಯೇಟರ್‌ನಲ್ಲಿ ಮುಂದುವರೆಯುತ್ತೆ ಅಪ್ಪು ಸಿನಿಮಾ?

ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ RRR ಸಿನಿಮಾ ರಿಲೀಸ್ ಮಾಡುವುದಕ್ಕೆ ಅಪ್ಪು ಕೊನೆಯ ಸಿನಿಮಾವನ್ನು ಚಿತ್ರಮಂದಿರದಿಂದ ತೆಗೆಯಲಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಪುನೀತ್ ಅಭಿಮಾನಿಗಳು, ರಾಜಕೀಯ ಮುಖಂಡರು ಅಖಂಡಕ್ಕೆ ಇಳಿದಿದ್ದರು. ಕನ್ನಡ ಪರ ಸಂಘಟನೆಗಳೂ ಕೂಡ ಪ್ರತಿಭಟನೆಗೆ ಮುಂದಾಗಿತ್ತು.

Recommended Video

Shivarajkumar | ಜೇಮ್ಸ್ ಬರಿ ಸಿನಿಮಾ ಅಲ್ಲ ಎಂದ ಶಿವಣ್ಣ | James

ಈ ಬೆನ್ನಲ್ಲೇ ವಿವಾದ ಬಗೆ ಹರಿಸಲು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಖಾಡಕ್ಕೆ ಇಳಿದಿದ್ದರು. ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಬಳಿಕ ಫಿಲ್ಮ್ ಚೇಂಬರ್‌ಗೆ ಎಂಟ್ರಿ ಕೊಟ್ಟು ಅಲ್ಲಿನ ಸದಸ್ಯರೊಂದಿಗೆ ಚರ್ಚೆ ಮಾಡಿದ್ದರು. ಈಗ ಶಿವಣ್ಣ ಮೂರು ಗಂಟೆಗಳಲ್ಲಿ ಈ ವಿವಾದವನ್ನು ಬಗೆಹರಿಸಿದ್ದಾರೆ.

'ಜೇಮ್ಸ್' ಸಿನಿಮಾ ಎರಡನೇ ವಾರ 275 ಚಿತ್ರಮಂದಿರಗಳಲ್ಲಿ 'ಜೇಮ್ಸ್' ಪ್ರದರ್ಶನ ಮುಂದುವರೆಯಲಿದೆ. ಮೊದಲ ವಾರ 'ಜೇಮ್ಸ್' ಸುಮಾರು 386 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ವೇಳೆ ಫಿಲ್ಮ್ ಚೇಂಬರ್‌ನಲ್ಲಿ ಶಿವಣ್ಣ ಜೇಮ್ಸ್ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಿವಣ್ಣ 3 ಬಾರಿ ಪೋನ್ ಮಾಡಿದ್ದ ಶಿವಣ್ಣ

ಶಿವಣ್ಣ 3 ಬಾರಿ ಪೋನ್ ಮಾಡಿದ್ದ ಶಿವಣ್ಣ

" ಜೇಮ್ಸ್ ಸಿನಿಮಾ ಬಗ್ಗೆ ಸಿಎಂ ಸ್ಪಂದಿಸಿದ್ದಾರೆ. ಈಗ ತಪ್ಪನ್ನು ಹುಡುಕುವ ಪ್ರಯತ್ನ ಮಾಡಬಾರದು. ಇಲ್ಲಿ ಪ್ರಡ್ಯೂಸರ್ ಹಾಗೂ ಡಿಸ್ಟ್ರಿಬ್ಯೂಟರ್ ಮಧ್ಯೆ ಹೋಗುತ್ತೆ. ಅಪ್ಪು ಸಿನಿಮಾ ಒಂದು ಎಮೋಷನಲ್ ಸಿನಿಮಾ. ಸಮಸ್ಯೆ ಬಂದಾಗ, ನಿರ್ಮಾಪಕರ ಪರವಾಗಿ ಇರುತ್ತೇವೆ. ವಿತರಕರ ಪರವಾಗಿ ಇರುತ್ತೇವೆ. ಫಿಲ್ಮ್ ಚೇಂಬರ್ ಪರವಾಗಿ ಇರುತ್ತೇವೆ. ಸಿ ಎಂ ಕೂಡ ಏನು ಸಮಸ್ಯೆ ಏನು ಅಂತ ಕೇಳಿದ್ದರು. ನಿನ್ನೆ ಮೂರು ಬಾರಿ ಪೋನ್ ಮಾಡಿ ಕೇಳಿದ್ದಾರೆ." ಎಂದು ಶಿವಣ್ಣ ಹೇಳಿದ್ದಾರೆ.

ಥಿಯೇಟರ್ ಸಮಸ್ಯೆ ಯಾವಾಗಲೂ ಇರುತ್ತೆ

ಥಿಯೇಟರ್ ಸಮಸ್ಯೆ ಯಾವಾಗಲೂ ಇರುತ್ತೆ

"ಯಾವ ಸಿನಿಮಾ ಬಂದರೂ ಬೇಡ ಅಂತ ಹೇಳುವುದಿಲ್ಲ. ಆದರೆ, ಚೆನ್ನಾಗಿ ಹೋಗುತ್ತಿರುವ ಸಿನಿಮಾಗೆ ತೊಂದರೆ ಕೊಡಬಾರದು. ಎಲ್ಲರಿಗೂ ಸಮನಾದ ಅವಕಾಶ ನೀಡಬೇಕು. ಥಿಯೇಟರ್ ಸಮಸ್ಯೆ ಅನ್ನುವುದು ಯಾವಾಗಲೂ ಬರುತ್ತಲೇ ಇರುತ್ತೆ. ಕನ್ನಡ ಚಿತ್ರರಂಗ ಅನ್ನುವುದು ಒಂದು ಫ್ಯಾಮಿಲಿ ಇದ್ದಂತೆ. ಸಮಸ್ಯೆ ಇವತ್ತು ಬರುತ್ತೆ ಹೋಗುತ್ತೆ. ಇದನ್ನೇ ದೊಡ್ಡದು ಮಾಡಬಾರದು. ಎಲ್ಲರ ಪ್ರಯತ್ನದಿಂದ ಸಮಸ್ಯೆ ಬಗೆಹರಿದಿದೆ" ಎಂದಿದ್ದಾರೆ ಶಿವಣ್ಣ

ಫಿಲ್ಮ್ ಚೇಂಬರ್ ಪರವಾಗಿರುತ್ತೆ

ಫಿಲ್ಮ್ ಚೇಂಬರ್ ಪರವಾಗಿರುತ್ತೆ

"ಇಷ್ಟು ದೊಡ್ಡ ಮಟ್ಟದಲ್ಲಿ ಹಬ್ಬ ಆಚರಣೆ ಮಾಡಿರುವುದು ಇದೇ ಮೊದಲು. 'ಜೇಮ್ಸ್' ಸಿನಿಮಾ ಅಂತಲ್ಲ. ಪರಭಾಷೆಯ ಸಿನಿಮಾಗಳಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಆದಾಗಲೆಲ್ಲಾ ಫಿಲ್ಮ್ ಚೇಂಬರ್ ಮುಂದೆ ಬಂದಿದೆ. ಸಮಸ್ಯೆಯನ್ನು ಬಗೆ ಹರಿಸುವ ಕೆಲಸ ಮಾಡಿದ್ದೇವೆ. ಮುಂದೆನೂ ಮಾಡುತ್ತೇವೆ. ಇದು ನಿರಂತರವಾಗಿ ನಡೆಯುತ್ತಿದೆ." ಎಂದಿದ್ದಾರೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್.

ಒಂದೊಂದು ಚಿತ್ರಮಂದಿರದಲ್ಲಿ ರಿಲೀಸ್

ಒಂದೊಂದು ಚಿತ್ರಮಂದಿರದಲ್ಲಿ ರಿಲೀಸ್

ಎಲ್ಲೆಲ್ಲಿ ಎರಡೆರಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆಯೋ ಅಲ್ಲೆಲ್ಲಾ ಒಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತೆ. ಸಾಮಾನ್ಯವಾಗಿ ಒಂದು ಅಥವಾ ಎರಡು ದಿನ ಡಬಲ್ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುತ್ತೇವೆ. ಆದ್ರೀಗ ಒಂದೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತೆ." ಎಂದು ಜೇಮ್ಸ್ ಸಿನಿಮಾದ ನಿರ್ಮಾಪ ಕಿಶೋರ್ ಹೇಳಿದ್ದಾರೆ.

More from Filmibeat

English summary
James Vs RRR problem solved Puneeth movie will show in 2nd week says Shivarajkumar. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X