ಅಖಾಡಕ್ಕಿಳಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ, ಕನ್ನಡ ತೆಲುಗು ಭಾಷೆಯಲ್ಲಿ ಸಿನಿಮಾ

ಕೆಲವು ದಿನಗಳಿಂದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದೀಗ ನಿಜವಾಗಿದೆ. ತೆಲುಗಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ ವಾರಾಹಿ ಪ್ರೊಡಕ್ಷನ್ ಜನಾರ್ದನ ರೆಡ್ಡಿ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದೆ. ಇದು ವಾರಾಹಿ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ 15ನೇ ಸಿನಿಮಾ. ಶಿವರಾತ್ರಿ ಹಬ್ಬದಂದೇ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಲಾಂಚ್ ಆಗಿದೆ.

Janardhan Reddy son Kireeti movie launch through Varahi production telugu and kannada

ವಾರಾಹಿ ಪ್ರೊಡಕ್ಷನ್ಸ್ ಸಂಸ್ಥೆ ಹೈ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತೆ. ಈ ಸಂಸ್ಥೆ ಇದೀಗ ಜನಾರ್ದನ ರೆಡ್ಡಿ ಪುತ್ರನನ್ನು ಅಖಾಡಕ್ಕೆ ಇಳಿಸಲಿದೆ. ಈ ಸಿನಿಮಾ ಕನ್ನಡ ಹಾಡು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣಗೊಳ್ಳಲಿದೆ. ರಾಧಾಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಿದೆ. ಇದೊಂದು ಲವ್ ಕಮ್ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಆಗಿದ್ದು, ತೆಲುಗಿನ ಸ್ಟಾರ್ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ನೀಡಲಿದ್ದಾರೆ.

ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ

ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಅಭಿನಯದ ಮೊದಲ ಸಿನಿಮಾದ ಟೈಟಲ್ ಅನ್ನು ಇನ್ನೂ ಚಿತ್ರತಂಡ ರಿವೀಲ್ ಮಾಡಿಲ್ಲ. ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿರುವುದರಿಂದ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗೆ ಸೂಟ್ ಆಗುವಂತಹ ಟೈಟಲ್ ಇಡಬಹುದು ಎಂದು ನಿರೀಕ್ಷಿಸಲಾಗಿದೆ. ಎರಡು ಭಾಷೆಯ ಸಿನಿಮಾ ಆಗಿರುವುದರಿಂದ ಕನ್ನಡ ಹಾಗೂ ತೆಲುಗಿನಲ್ಲಿ ಯಾವ್ಯಾವ ನಟ-ನಟಿಯರು ಅಭಿನಯಿಸಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿ ಶುರುವಾಗಿದೆ.

ತೆಲುಗು ಚಿತ್ರರಂಗದ ದಿಗ್ಗಜರೇ ಈ ಸಿನಿಮಾಗೆ ದುಡಿಯಲಿದ್ದಾರೆ. 'ಈಗ' ಸಿನಿಮಾ ನಿರ್ಮಿಸಿದ್ದ ಸಾಯಿ ಕೋರ್ರಾಪಾಟಿ ನಿರ್ಮಾಪಕರಾಗಿದ್ದರೆ, ತೆಲುಗಿನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್ ಸಂಗೀತವಿದೆ. 'ಬಾಹುಬಲಿ' ಸಿನಿಮಾದ ಕ್ಯಾಮರಾ ಮ್ಯಾನ್ ಸೆಂಥಿಲ್ ಕುಮಾರ್ ಛಾಯಾಗ್ರಹಣವಿರುತ್ತೆ. ಆರ್ಟ್ ಡೈರೆಕ್ಟರ್ ಆಗಿ ರವೀಂದರ್, ಭಾರತದ ಅದ್ದೂರಿ ಸಾಹಸಗಳ ದೃಶ್ಯಗಳ ನಿರ್ದೇಶಕ ಪೀಟರ್ ಹೆನ್ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಇವರು ಕನ್ನಡದಲ್ಲಿ 'ನಟಸಾರ್ವಭೌಮ', 'ರನ್ನ', 'ಸತ್ಯ ಇನ್ ಲವ್' ಅಂತಹ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಮಾರ್ಚ್ 4 ರಂದು ಸಿನಿಮಾ ಲಾಂಚ್

ವರಾಹಿ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಅದ್ದೂರಿಯಾಗಿ ಮಾರ್ಚ್ 04 ರಂದು ಚಾಲನೆ ನೀಡಲಾಗುತ್ತಿದೆ. ಅಂದ ಹಾಗೆ ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ? ಕಿರೀಟಿಗೆ ನಾಯಕಿ ಯಾರು? ಎಲ್ಲೆಲ್ಲಿ ಶೂಟಿಂಗ್ ಮಾಡುತ್ತಾರೆ ಎಂಬ ವಿಷಯಗಳೆಲ್ಲವೂ ಮಾರ್ಚ್ 04ರಂದೇ ರಿವೀಲ್ ಆಗುವ ಸಾಧ್ಯತೆ ಇದೆ.

Janardhan Reddy son Kireeti movie launch through Varahi production telugu and kannada

ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಕೂಡ ರಾಜಕೀಯ ಇಲ್ಲವೇ ಬ್ಯುಸಿನೆಸ್ ಕಡೆ ಹೋಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಬಾಲ್ಯದಿಂದ ಸಿನಿಮಾದ ಮೇಲೆ ಆಸಕ್ತಿಯಿದ್ದಿದ್ದರಿಂದ ಆ ಕಡೆ ವೃತ್ತಿ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ. ಇಲ್ಲವೇ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ ಬಳಿಕ ಕಿರೀಟಿಯನ್ನು ರಾಜಕೀಯಕ್ಕೆ ಕರೆದುಕೊಂಡು ಬರುವ ಆಲೋಚನೆಯೂ ಜನಾರ್ಧನ ರೆಡ್ಡಿಗೆ ಇರಬಹುದು. ಎಲ್ಲದಕ್ಕೂ ಉತ್ತರ ಮಾರ್ಚ್ 04ರಂದು ಸಿಗುವ ಸಾಧ್ಯತೆಯಿದೆ.

More from Filmibeat

English summary
Janardhan Reddy son Kireeti movie launch through Varahi production telugu and kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X