"ನನ್ನನ್ನು ಬಂಧಿಸಿದವ್ರು ಇವತ್ತು ಅಡ್ರೆಸ್ ಇಲ್ಲದಂಗೆ ಹೋಗದಿದ್ದಾರೆ"; ಶ್ರೀಮುರಳಿ ಮುಂದೆ ಜನಾರ್ಧನ ರೆಡ್ಡಿ ಹೀಗಂದಿದ್ಯಾಕೆ?

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಉತ್ಸವ ಅದ್ಧೂರಿಯಾಗಿ ನಡೆದಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಜೊತೆ ರಾಜಕೀಯ ಮುಖಂಡರು ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರೋರಿಂಗ್ ಸ್ಟಾರ್ ಶ್ರೀ ಮುರಳಿ ಭಾಗಿಯಾಗಿದ್ದರು.

ಇದೇ ಆನೆಗೊಂದಿ ಉತ್ಸವದ ವೇದಿಕೆ ಮೇಲೆ ಸಿನಿಮಾದ ಕಾರ್ಯಕ್ರಮಗಳು ಕೂಡ ನಡೆದಿದ್ದವು. ಶ್ರೀಮುರಳಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಬಘೀರ' ದ ಬಗ್ಗೆ ಜನಾರ್ಧನ ರೆಡ್ಡಿ ಮಾತಾಡಿದ್ದರು. ಹಾಗೇ ಶ್ರೀಮುರಳಿ ಕೀರಿಟಿ ಮೊದಲ ಸಿನಿಮಾದ ಬಗ್ಗೆ ಮಾತಾಡಿದ್ದರು. ಹೀಗೆ ಇಬ್ಬರೂ ತಮ್ಮ ಸಿನಿಮಾಗಳ ಪ್ರಚಾರ ಮಾಡಿದ್ದು ಹೈಲೈಟ್ ಆಗಿತ್ತು.

Janardhana Reddy talks about CBI officers and Mufti movie scenes in front of SriMurali

ಇದೇ ವೇಳೆ ಜನಾರ್ಧನ ರೆಡ್ಡಿ ತಮ್ಮನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು, ಮಫ್ತಿ ಸಿನಿಮಾದಲ್ಲಿ ಅವರನ್ನು ಹೋಲುವ ದೃಶ್ಯಗಳನ್ನು ಚಿತ್ರೀಕರಿಸಿದ್ದರ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಶ್ರೀಮುರಳಿ ಮುಂದೆ ಜನಾರ್ಧಾನ ರೆಡ್ಡಿ "ತನ್ನನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಏನೂ ಇಲ್ಲದ ಹಾಗೇ ಆಗಿದ್ದಾರೆ" ಅಂತ ಹೇಳಿದ್ದರು. ಅಷ್ಟಕ್ಕೂ ಜನಾರ್ಧನ ರೆಡ್ಡಿಯ ಈ ಹೇಳಿಕೆಗೂ 'ಮಫ್ತಿ' ಸಿನಿಮಾಗೂ ಏನು ಸಂಬಂಧ? ಈಗ ಆ ವಿಡಿಯೋ ವೈರಲ್ ಆಗುತ್ತಿರೋದೇಕೆ? ತಿಳಿಯಲು ಮುಂದೆ ಓದಿ..

ಶಿವಣ್ಣ ನೋಡಿ ರೆಡ್ಡಿ.. ರೆಡ್ಡಿ.. ಅಂತಿದ್ರು

ಶಿವರಾಜ್‌ಕುಮಾರ್ ಹಾಗೂ ಶ್ರೀಮುರಳಿ ನಟಿಸಿದ 'ಮಫ್ತಿ' ಸಿನಿಮಾಗೂ ಗಾಲಿ ಜನಾರ್ಧನ ರೆಡ್ಡಿಗೂ ಸಂಬಂಧವಿದೆ. ಈ ಸಿನಿಮಾದಲ್ಲಿ ಶಿವಣ್ಣ ಪಾತ್ರದ ಮೂಲಕ ಜನಾರ್ಧನ ರೆಡ್ಡಿಯನ್ನು ಪ್ರತಿನಿಧಿಸುವ ಕೆಲವು ದೃಶ್ಯಗಳನ್ನು ಇಡಲಾಗಿದೆ. ಇದು ಅವರಿಗೆ ಥಿಯೇಟರ್‌ಗೆ ಹೋಗಿ ಸಿನಿಮಾ ವೀಕ್ಷಿಸಿದಾಗಲೇ ಗೊತ್ತಾಯ್ತು ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.

Janardhana Reddy talks about CBI officers and Mufti movie scenes in front of SriMurali

"ಮಫ್ತಿ ಸಿನಿಮಾದಲ್ಲಿ ನೀವೇನು ಸಿನಿಮಾ ಅಧಿಕಾರಿಯಾಗಿ ಮಾಡಿದ್ದೀರಿ. ಆ ಸಿನಿಮಾ ಥಿಯೇಟರ್‌ಗೆ ಹೋಗುವವರೆಗೂ ಗೊತ್ತಿಲ್ಲ. ನರ್ತನ್ ಬಳ್ಳಾರಿಗೆ ಬಂದು ನನ್ನ ಬಗ್ಗೆ ಎಲ್ಲಾ ತಿಳಿದುಕೊಂಡು, ನನ್ನ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅಂತ ಗೊತ್ತಾಯ್ತು. ಥಿಯೇಟರ್‌ಗೆ ಹೋದಾಗ ಹೆಲಿಕಾಪ್ಟರ್‌ನಿಂದ ಶಿವರಾಜ್‌ಕುಮಾರ್ ಇಳಿಯುತ್ತಿದ್ದಂತೆ ರೆಡ್ಡಿ.. ರೆಡ್ಡಿ ಅಂತ ಕೂಗುತ್ತಿದ್ದರು. " ಎಂದು ಶ್ರೀಮುರಳಿಗೆ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಬಂಧಿಸಿದ ಸಿಬಿಐ ಅಧಿಕಾರಿಗಳು ಏನಾದ್ರು?

ಇದೇ ವೇಳೆ 'ಮಫ್ತಿ' ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ತನ್ನನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಇವತ್ತು ಅಡ್ರೆಸ್ ಇಲ್ಲದ ಹಾಗೆ ಹೋಗಿದ್ದಾರೆ ಎಂದಿದ್ದಾರೆ. ಶ್ರೀಮುರಳೀ ಕೂಡ 'ಮಫ್ತಿ'ಯಲ್ಲಿ ಸಿಬಿಐ ಅಧಿಕಾರಿಯಾಗಿ ನಟಿಸಿದ್ದರು.

"ನನ್ನನ್ನು ಬಂಧಿಸಿರೋ ಸಿಬಿಐ ಅಧಿಕಾರಿಗಳು ಇವತ್ತು ಆಂಧ್ರದಲ್ಲಿ ಅಡ್ರೆಸ್ ಇಲ್ಲದ ಹಾಗೇ ಹೋಗಿದ್ದಾರೆ. ಜನಾರ್ಧನ ರೆಡ್ಡಿಯನ್ನು ಬಂಧನ ಮಾಡಿದ್ದಾರೆ ಅಂದಾಕ್ಷಣ ಆ ಅಧಿಕಾರಿಗಳನ್ನು ಮೀಡಿಯಾದಲ್ಲಿ ದೊಡ್ಡ ಹೀರೊ ಆಗಿ ತೋರಿಸಿಬಿಟ್ಟರು. ಪಾಪ ಅವರು ಎಮೋಷನಲ್ ಆಗಿ ರಾಜಕೀಯಕ್ಕೆ ಬಂದುಬಿಟ್ಟರು. ಅವರು ಇವತ್ತು ಏನೂ ಇಲ್ಲದ ಹಾಗೆ ಆಗಿದ್ದಾರೆ." ಎಂದು ಜನಾರ್ಧನ ರೆಡ್ಡಿ ಟಾಂಗ್ ಕೊಟ್ಟಿದ್ದರು.

'ಮಫ್ತಿ' ಬಗ್ಗೆ ರೆಡ್ಡಿ ಮೆಚ್ಚುಗೆ

ಜನಾರ್ಧನ ರೆಡ್ಡಿಯ ಕೆಲಸಗಳನ್ನು ಪ್ರೇರಣೆಯಾಗಿ ಇಟ್ಟುಕೊಂಡು ನರ್ತನ್ ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಆ ಬಗ್ಗೆ ಜನಾರ್ಧನ ರೆಡ್ಡಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

"ಆದರೆ, ಮಫ್ತಿಯಲ್ಲಿ ಶಿವರಾಜ್‌ಕುಮಾರ್ ಹಾಗೂ ಶ್ರೀಮುರಳಿಯವರು ನಾನೇನು ಕೆಲಸ ಮಾಡಿದ್ದಾರೋ ಅದನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಆ ಸಿನಿಮಾವನ್ನು ನೋಡಿ ನನಗೆ ಖುಷಿಯಾಗಿದೆ. ಬಘೀರ ಸಿನಿಮಾದಿಂದ ದೇವರು ನಿಮಗೆ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಆ ದೇವರು ಮಾಡಲಿ ಅಂತ ಆ ಹನುಮನಲ್ಲಿ, ರಾಮನಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ."

More from Filmibeat

English summary
Janardhana Reddy about CBI Officers infront of SriMurali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X