Indian Box Office;ಈ ವರ್ಷ ಭಾರತದ ಬಾಕ್ಸಾಫೀಸ್‌ ಕಲೆಕ್ಷನ್ ₹7,949 ಕೋಟಿ; ಕನ್ನಡ ಚಿತ್ರರಂಗದ ಪಾಲೆಷ್ಟು?

ಭಾರತೀಯ ಚಿತ್ರರಂಗದ ಕಳೆದ ಕೆಲವು ವರ್ಷಗಳಿಂದ ನಷ್ಟದಲ್ಲಿದೆ. ಬಾಲಿವುಡ್‌ ಚಿತ್ರರಂಗ ಗೆದ್ದರೆ, ದಕ್ಷಿಣ ಭಾರತದ ಚಿತ್ರರಂಗ ಮಕಾಡೆ ಮಲಗುತ್ತವೆ. ದಕ್ಷಿಣ ಭಾರತದ ಚಿತ್ರರಂಗದಿಂದ ಬಂದ ಸಿನಿಮಾಗಳು ಗೆದ್ದರೆ, ಬಾಲಿವುಡ್ ಲೆಕ್ಕಚಾರ ಉಲ್ಟಾ ಹೊಡೆಯುತ್ತೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್‌ ಶುರುವಾದಲ್ಲಿಂದ ಚಿತ್ರರಂಗದ ಬಾಕ್ಸಾಫೀಸ್ ಲೆಕ್ಕಾಚಾರ ಮೇಲೆ ಕೆಳಗೆ ಆಗುತ್ತಲೇ ಇದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ವರೆಗೂ ಭಾರತದ ಬಾಕ್ಸಾಫೀಸ್‌ನಲ್ಲಿ ಶೇ.10ರಷ್ಟು ಹಿಂದೆ ಉಳಿದಿದೆ. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿ ಮಟ್ಟಿಗೆ ಸದ್ದು ಮಾಡಿವೆ. ಇನ್ನು ಕನ್ನಡ ಚಿತ್ರರಂಗದ ಪರಿಸ್ಥಿತಿ ಅಂತೂ ಹೀನಾಯ. ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ ರಿಪೋರ್ಟ್ ಕೊಡುವ ಓರ್ಮಾಕ್ಸ್ ಮೀಡಿಯಾ ವರದಿಯೊಂದನ್ನು ಪ್ರಕರಟಿಸಿದೆ.

January to September 2024 Indian box office report Kalki 2898 AD Stree 2 top the list

ಓರ್ಮಾಕ್ಸ್ ಮೀಡಿಯಾ 2024ರ ಜನವರಿ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ನೀಡಿದ ವರದಿಯಲ್ಲಿ ಯಾವ್ಯಾವ ಭಾಷೆಯ ಸಿನಿಮಾಗಳು ಎಷ್ಟು ಕಲೆಕ್ಷನ್ ಮಾಡಿವೆ ಅನ್ನೋದನ್ನು ತಿಳಿಸಲಾಗಿದೆ. ಅಲ್ಲದೆ ಪ್ರತಿ ತಿಂಗಳು ಸಿನಿಮಾರಂಗದ ವಹಿವಾಟು ಎಷ್ಟು ಅನ್ನೋದನ್ನು ರಿವೀಲ್ ಮಾಡಿದೆ. ಹಾಗಿದ್ದರೆ, ಆ ವರದಿಯಲ್ಲಿ ಏನೇನಿದೆ? ತಿಳಿಯಲು ಮುಂದೆ ಓದಿ..

9 ತಿಂಗಳು ಸಿನಿಮಾ ವಹಿವಾಟು ಎಷ್ಟು?

ಭಾರತೀಯ ಚಿತ್ರರಂಗದ ವಹಿವಾಡು ಸಾವಿರ ಕೋಟಿ ಲೆಕ್ಕದಲ್ಲಿ ಇರುತ್ತೆ. ಒಂದು ಸೂಪರ್‌ಸ್ಟಾರ್ ಸಿನಿಮಾ ಆ ತಿಂಗಳ ಮಾರುಕಟ್ಟೆಯನ್ನು ಗಗನಕ್ಕೆ ಏರಿಸಬಲ್ಲದು. ಓಮ್ಯಾಕ್ಸ್ ನೀಡಿರುವ ವರದಿ ಪ್ರಕಾರ, 2024ರ 9 ತಿಂಗಳ ಒಟ್ಟು ವಹಿವಾಟು ₹7,949 ಕೋಟಿ ರೂಪಾಯಿ. ಆದರೂ, 2023ಕ್ಕೆ ಹೋಲಿಕೆ ಮಾಡಿದರೆ, ಶೇ.9.5ರಷ್ಟು ಕಡಿಮೆ ಗಳಿಕೆ ಕಂಡಿದೆ ಎಂದು ಹೇಳಲಾಗಿದೆ. ಯಾವ್ಯಾವ ತಿಂಗಳು ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ವರದಿ ಇಲ್ಲಿದೆ.

January to September 2024 Indian box office report Kalki 2898 AD Stree 2 top the list

9 ತಿಂಗಳ ಬಾಕ್ಸಾಫೀಸ್ ಕಲೆಕ್ಷನ್

ಜನವರಿ - ₹934 ಕೋಟಿ
ಫೆಬ್ರವರಿ - ₹685 ಕೋಟಿ
ಮಾರ್ಚ್ - ₹1,004 ಕೋಟಿ
ಏಪ್ರಿಲ್ - ₹459 ಕೋಟಿ
ಮೇ - ₹668 ಕೋಟಿ
ಜೂನ್ - ₹1,254 ಕೋಟಿ
ಜುಲೈ - ₹575 ಕೋಟಿ
ಆಗಸ್ಟ್ - ₹1,304 ಕೋಟಿ
ಸೆಪ್ಟೆಂಬರ್ - ₹1,066 ಕೋಟಿ

ಟಾಪ್ 10 ಸಿನಿಮಾಗಳು

ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಂಡ ಟಾಪ್‌ 10 ಸಿನಿಮಾಗಳನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ಬಾಲಿವುಡ್, ತೆಲುಗು, ತಮಿಳು ಹಾಗೂ ಮಾಲಯಾಳಂ ಸಿನಿಮಾಗಳು ಹೆಚ್ಚಿನ ಸ್ಥಾನ ಪಡೆದುಕೊಂಡಿವೆ. ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

ಟಾಪ್ 10 ಸಿನಿಮಾಗಳು

ಕಲ್ಕಿ 2998 AD - ₹776 ಕೋಟಿ
ಸ್ತ್ರೀ - ₹707 ಕೋಟಿ
ದೇವರ ಪಾರ್ಟ್ 1 - ₹337 ಕೋಟಿ
ದಿ ಗ್ರೇಟೆಸ್ಟ್ ಆಫ್ ಆಲ್‌ ಟೈಮ್ - ₹293 ಕೋಟಿ
ಫೈಟರ್ - ₹243 ಕೋಟಿ
ಹನುಮಾನ್ - ₹240 ಕೋಟಿ
ಶೈತಾನ್ - ₹178 ಕೋಟಿ
ಮಂಜುಮ್ಮೆಲ್ ಬಾಯ್ಸ್ - ₹170 ಕೋಟಿ
ಡೆಡ್‌ಪೂಲ್ & ವೊಲ್ವೊರಿನ್ - ₹160 ಕೋಟಿ
ಗುಂಟೂರು ಖಾರಂ - ₹142 ಕೋಟಿ

ಯಾವ ಭಾಷೆಯಿಂದ ಎಷ್ಟೆಷ್ಟು ಕಲೆಕ್ಷನ್

ಇದೇ ವರದಿಯಲ್ಲಿ ಭಾರತದ ಬಾಕ್ಸಾಫೀಸ್‌ನಲ್ಲಿ ಯಾವ್ಯಾವ ಭಾಷೆಯ ಸಿನಿಮಾದ ಷೇರು ಎಷ್ಟೆಷ್ಟು ಅನ್ನೋದನ್ನೂ ವರದಿ ಮಾಡಲಾಗಿದೆ. ಅದರಲ್ಲಿ ಹಿಂದಿ ಚಿತ್ರರಂಗದ ಪಾಲು ದೊಡ್ಡದಿದೆ. ಅದು ಇಟ್ಟರೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಾಲಿವುಡ್ ಸಿನಿಮಾಗಳು ಪಾಲು ಹೆಚ್ಚಿದೆ. ಹಿಂದಿ ಭಾಷೆಯ ಸಿನಿಮಾಗಳು 37%ರಷ್ಟು ಪಾಲಿದೆ. ಹಾಗೇ ತೆಲುಗು 21%, ತಮಿಳು 15%, ಮಲಯಾಳಂ 12% ಹಾಗೂ ಹಾಲಿವುಡ್ 8%ರಷ್ಟಿದೆ.

ಕನ್ನಡ ಚಿತ್ರರಂಗದ ಕಥೆಯೇನು?

2024 ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಆಶಾದಾಯವಾಗೇನೂ ಇಲ್ಲ. ಇಲ್ಲಿವರೆಗೂ ತೆರೆಕಂಡಿರುವ ಒಟ್ಟು ಕನ್ನಡ ಸಿನಿಮಾಗಳ ಕಲೆಕ್ಷನ್ 200 ಕೋಟಿ ರೂಪಾಯಿನೂ ದಾಟಿಲ್ಲ ಎನ್ನಲಾಗುತ್ತಿದೆ. 'ಭೀಮ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗಳು 20 ಕೋಟಿ ರೂಪಾಯಿಯ ಗಡಿದಾಟಿದೆ ಅಷ್ಟೇ. ಅಂದರೆ, ಒಟ್ಟು ಗಳಿಕೆಯಲ್ಲಿ ಶೇ.2 ಕಲೆಕ್ಷನ್ ಆಗಿದ್ದೂ ಕೂಡ ಅನುಮಾನ.

More from Filmibeat

English summary
January to September 2024 Indian box office report Kalki 2898 AD, Stree 2 top the list. What about Kannada Movies?
Read more about: box office movies filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X