»   » ಗೀತ ರಚನೆಕಾರರು ಆದ್ರು ನವರಸ ನಾಯಕ

ಗೀತ ರಚನೆಕಾರರು ಆದ್ರು ನವರಸ ನಾಯಕ

Posted By:
Subscribe to Filmibeat Kannada

ಜಗ್ಗೇಶ್ ಸಾರಥ್ಯದಲ್ಲಿ 'ಮೇಲುಕೋಟೆ ಮಂಜ ಬರ್ತಾವ್ನೆ ಅನ್ನೋ ಮಾಹಿತೀನ ಇತ್ತೀಚೆಗಷ್ಟೆ ತಿಳಿಸಿದ್ವಿ. ಈಗ ಅದೇ ಚಿತ್ರಕ್ಕೆ ಜಗ್ಗೇಶ್ ತಾವೇ ಹಾಡು ಬರೆದಿದ್ದಾರೆ.[ಜಗ್ಗೇಶ್ ಸಾರಥ್ಯದ 'ಮೇಲುಕೋಟೆ ಮಂಜ' ಬರ್ತಾವ್ನೆ !]

ನಟ ಆಗಿ ಕಾಮಿಡಿ ಮಾತ್ರವಲ್ಲ ನಿರ್ದೇಶನದ ಜೊತೆಗೆ ಹಾಡುಗಳನ್ನು ಬರೆಯುವುದಾಗಿ ಜಗ್ಗೇಶ್ ತಿಳಿಸಿದ್ದಾರೆ. ಅಂದಹಾಗೆ ಜಗ್ಗೇಶ್ ಅವರು ಹಾಡುಗಳನ್ನು ಬರೆಯಲು ಸ್ಫೂರ್ತಿ ಜಯಂತ್ ಕಾಯ್ಕಿಟಿ ಅವರಂತೆ. ಹೌದು.. ಜಗ್ಗೇಶ್ ಬರೆದ ಹಾಡು ಯಾವುದು? ಅನ್ನೋ ಪ್ರಶ್ನೆ ಕಾಡುತ್ತಿದ್ಯಾ.. ಉತ್ತರಕ್ಕಾಗಿ ಮುಂದೆ ಓದಿ..

Jayant Kaikini was inspired to Jaggesh to be a lyricist

'ಕಣ್ಮುಚ್ಚಿ ನಡೆದಾಗ ಯಾಕಿಂಗೆ ಹೇಳು ಬಾ.. ' ಎಂಬ ಡ್ಯುಯೆಟ್ ಸಾಂಗ್ ಅನ್ನು ಜಗ್ಗೇಶ್ ಬರೆದಿದ್ದಾರೆ. ತಮ್ಮದೇ ನಿರ್ದೇಶನದ 'ಮೇಲುಕೋಟೆ ಮಂಜ' ಸಿನಿಮಾಗೆ ಈ ಹಾಡನ್ನು ಬರೆದಿದ್ದು, ಇನ್ನುಳಿದ ಹಾಡುಗಳಿಗೆ ಯೋಗರಾಜ್‌ ಭಟ್ ಮತ್ತು ರಾಮನಾರಾಯಣ್ ಸಾಹಿತ್ಯ ಬರೆದಿದ್ದಾರೆ.. ಚಿತ್ರಕ್ಕೆ ಗಿರಿ ಧವನ್ ಸಂಗೀತ ಸಂಯೋಜನೆ ಮಾಡಿದ್ದು, ಪುನೀತ್ ರಾಜ್‌ ಕುಮಾರ್ ಸಹ ಒಂದು ಹಾಡನ್ನು ಹಾಡಿದ್ದಾರೆ.

Jayant Kaikini was inspired to Jaggesh to be a lyricist

'ಮೇಲುಕೋಟೆ ಮಂಜ' ಚಿತ್ರದಲ್ಲಿ ಐಂದ್ರಿತಾ ರೇ ನಾಯಕ ನಟಿ ಆಗಿ ಅಭಿನಯಿಸಿದ್ದು, ರಂಗಾಯಣ ರಘು ಮತ್ತು ಜೀವನ್ ಸಹ ಇದ್ದಾರೆ. ಜಗ್ಗೇಶ್ ಒಟ್ಟಾರೆ 141 ಚಿತ್ರಗಳಲ್ಲಿ ನಟಿಸಿದ್ದು, ಅವರು ನಿರ್ದೇಶನ ಮಾಡುತ್ತಿರುವ 2 ನೇ ಸಿನಿಮಾ ಇದು.[ಜಗ್ಗೇಶ್ ಆಕ್ಷನ್ ಕಟ್ ನಲ್ಲಿ 'ಮೇಲುಕೋಟೆ ಮಂಜ']

English summary
Navarasa Nayaka Jaggesh Directed 'Melukote Manja' Film Audio Releasing soon. Aindrita Ray is paired opposite Jaggesh in the Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada